ಬ್ರೇಕಿಂಗ್ ನ್ಯೂಸ್
26-08-22 03:36 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 26: ಕಾಂಗ್ರೆಸ್ ನಾಯಕತ್ವದ ವಿರುದ್ಧ ಮುನಿಸಿಕೊಂಡಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಕೊನೆಗೂ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ರಾಹುಲ್ ಗಾಂಧಿಯನ್ನು ಅಪ್ರಬುದ್ಧ ಎಂದು ಜರೆದಿರುವ ಆಜಾದ್ ಅವರು, ಸೋನಿಯಾ ಗಾಂಧಿಗೆ ಬರೆದ ರಾಜಿನಾಮೆ ಪತ್ರದಲ್ಲಿ ಅನುಭವ ರಹಿತರಿಗೆ ಪಕ್ಷದಲ್ಲಿ ಆದ್ಯತೆ ಕೊಟ್ಟಿರುವುದನ್ನು ಟೀಕಿಸಿದ್ದಾರೆ. ತಾನು ಪಕ್ಷದಿಂದ ಹೊರ ನಡೆಯುತ್ತಿರುವುದಕ್ಕೆ ಇದೇ ಕಾರಣ ಎಂದು ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ಆಗಸ್ಟ್ 16ರಂದು ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥನಾಗಿ ತಮ್ಮನ್ನು ನೇಮಿಸಿದ್ದನ್ನು ಗುಲಾಂ ನಬಿ ನಿರಾಕರಿಸಿದ್ದರು. ಇದರ ಬೆನ್ನಲ್ಲೇ ರಾಜಿನಾಮೆ ಪತ್ರ ಬರೆದಿದ್ದು, ರಾಹುಲ್ ಗಾಂಧಿಯನ್ನು ಅಪ್ರಬುದ್ಧ. ರಾಹುಲ್ ಕಾರಣದಿಂದಾಗಿಯೇ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪುತ್ತಿದೆ ಎಂದು ಟೀಕಿಸಿದ್ದಾರೆ. ಸರಕಾರದ ಸುಗ್ರೀವಾಜ್ಞೆಯನ್ನು ಮಾಧ್ಯಮಗಳ ಮುಂದೆ ಹರಿದು ಹಾಕಿದ್ದು ರಾಹುಲ್ ಗಾಂಧಿಯ ಅಪ್ರಬುದ್ಧ ಮತ್ತು ಬಾಲಿಶಃ ನಡೆಯನ್ನು ತೋರಿಸುತ್ತದೆ. ತಮ್ಮ ಬಾಲಿಶ ವರ್ತನೆಗಳೇ ಕಾಂಗ್ರೆಸ್ ನೆಲಕಚ್ಚಲು ಕಾರಣವಾಗುತ್ತಿವೆ. 2014ರ ನಂತರ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಾಣುತ್ತಿರುವುದು, ಅಸೆಂಬ್ಲಿ ಚುನಾವಣೆಯಲ್ಲೂ ಹಿನ್ನಡೆ ಅನುಭವಿಸುತ್ತಿರುವುದಕ್ಕೆ ಈ ರೀತಿಯ ವರ್ತನೆಗಳೇ ಕಾರಣ ಎಂದು ದೂರಿದ್ದಾರೆ.
ರಿಮೋಟ್ ಕಂಟ್ರೋಲ್ ಮೋಡೆಲ್ ನಡೆಯೇ ಯುಪಿಎ ಒಕ್ಕೂಟವನ್ನು ಹಾಳು ಮಾಡಿತ್ತು. ಈಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸನ್ನೂ ಅದೇ ನಡೆಗಳು ಹಾಳು ಮಾಡುತ್ತಿವೆ. ಎಲ್ಲ ನಿರ್ಧಾರಗಳನ್ನು ಒಂದೋ ರಾಹುಲ್ ಗಾಂಧಿ ಅಥವಾ ಆತನ ಹಿಂಬಾಲಕರು, ಸೆಕ್ಯುರಿಟಿ ಗಾರ್ಡ್, ಪಿಎಗಳು ತೆಗೆದುಕೊಳ್ಳುತ್ತಿದ್ದಾರೆ. ಸೋನಿಯಾ ಗಾಂಧಿ ಕೇವಲ ನಾಮಕೇವಾಸ್ತೆ ಇದ್ದಾರೆ ಎಂದು ಆಜಾದ್ ಟೀಕಿಸಿದ್ದಾರೆ.
ಒಂದು ವರ್ಷದ ಹಿಂದೆ ಕಾಂಗ್ರೆಸ್ ನಾಯಕತ್ವದ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿದ್ದ 23 ಮಂದಿ ರಾಷ್ಟ್ರೀಯ ನಾಯಕರಲ್ಲಿ ಗುಲಾಂ ನಬಿ ಕೂಡ ಒಬ್ಬರು. ಇನ್ನೊಬ್ಬ ಕಪಿಲ್ ಸಿಬಲ್ ಇತ್ತೀಚೆಗಷ್ಟೇ ರಾಜ್ಯಸಭೆ ಚುನಾವಣೆ ಸಂದರ್ಭ ಸದ್ದಿಲ್ಲದೇ ಪಕ್ಷದಿಂದ ಹೊರ ನಡೆದು ಬಿಎಸ್ಪಿ ಬೆಂಬಲದಲ್ಲಿ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇದೀಗ ಗುಲಾಂ ನಬಿ ಕಾಲು ಹೊರಗಿಟ್ಟಿದ್ದು, ಜಮ್ಮು ಕಾಶ್ಮೀರದಲ್ಲಿ ಬಿಜೆಪಿಯನ್ನು ಬಲಪಡಿಸಲು ಮುಂದಾಗುತ್ತಾರೆಯೇ ಅನ್ನುವ ಕುತೂಹಲ ಇದೆ, ಯಾಕಂದ್ರೆ ಗುಲಾಂ ನಬಿ ಅವರಿಗೆ ಪ್ರಧಾನಿ ಮೋದಿ ಜೊತೆ ಹತ್ತಿರದ ಸಂಬಂಧ ಇದೆ.
In a fresh jolt to the Congress, senior leader Ghulam Nabi Azad resigned from the party with sharp jabs at the Gandhis and the organisational leadership.In a letter addressed to Congress president Sonia Gandhi, Azad cited the sidelining of senior leaders and the increasing sway of a "coterie of inexperienced sycophants" as the reasons behind his exit from the party.
21-08-25 02:03 pm
HK News Desk
Mangalore Electric Auto, High Court: ಮಂಗಳೂರಿನ...
21-08-25 12:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಎಫ್ಎಸ್ಎಲ...
20-08-25 10:54 pm
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
21-08-25 12:54 pm
HK News Desk
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
21-08-25 06:02 pm
Bangalore Correspondent
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
MLA Vedavyas Kamath: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂ...
20-08-25 10:19 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm