Asia Cup 2022 Rohit Sharma Should Announce Playing Xi For Pakistan Clash In Advance Says Mohammad Kaif.
">ಬ್ರೇಕಿಂಗ್ ನ್ಯೂಸ್
23-08-22 02:01 pm Source: Vijayakarnataka ದೇಶ - ವಿದೇಶ
ಹೊಸದಿಲ್ಲಿ: ಮುಂಬರುವ ಏಷ್ಯಾ ಕಪ್ 2022 ಟೂರ್ನಿಯಲ್ಲಿ ಟೀಮ್ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಗರಿಷ್ಠ ಮೂರು ಬಾರಿ ಮುಖಾಮುಖಿ ಆಗುವ ಸಾಧ್ಯತೆ ಇದೆ. ಆಗಸ್ಟ್ 28ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಪ್ರಸಕ್ತ ಟೂರ್ನಿಯಲ್ಲಿ ಮೊದಲ ಬಾರಿ ಪಾಕಿಸ್ತಾನ ತಂಡವನ್ನು ಎದುರಾಗಲಿದ್ದು, ಈ ಬಗ್ಗೆ ಮಾತನಾಡಿರುವ ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್, ಹಾಲಿ ನಾಯಕ ರೋಹಿತ್ ಶರ್ಮಾ, ಹೈ-ವೋಲ್ಟೇಜ್ ಕದನ ಆರಂಭಕ್ಕೂ ಮೊದಲೇ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿ ದಿಟ್ಟ ಸಂದೇಶ ರವಾನಿಸಬೇಕು ಎಂದಿದ್ದಾರೆ.
ಇಂಡೊ-ಪಾಕ್ ಕದನಕ್ಕೂ ಮುನ್ನ ಟೀಮ್ ಇಂಡಿಯಾ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟ ಮಾಡಿದರೆ ಅದು ಎದುರಾಳಿಗೆ ದಿಟ್ಟ ಸಂದೇಶ ಕೊಟ್ಟಂತ್ತಾಗುತ್ತದೆ. ಇದು ಎದುರಾಳಿ ತಂಡದ ಮೇಲೆ ಒತ್ತಡ ಹೇರುತ್ತದೆ. ಈ ಪಂದ್ಯದಲ್ಲಿ ಆಡುವುದನ್ನು ಖಚಿತ ಪಡಿಸಿಕೊಳ್ಳುವ ಆಟಗಾರರ ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ ಎಂದು ಕೈಫ್ ಅಭಿಪ್ರಾಯ ಪಟ್ಟಿದ್ದಾರೆ.

"ಇದು ಮೈಂಡ್ ಗೇಮ್ ಖಂಡಿತಾ ಅಲ್ಲ. ಆದರೆ, ಕ್ಯಾಪ್ಟನ್ ರೋಹಿತ್ ಶರ್ಮಾ ಈಗಲೇ ತಂಡದ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಬೇಕು. ಈ ಮೂಲಕ ದಿಟ್ಟ ಸಂದೇಶ ಒಂದನ್ನು ರವಾನಿಸಿದಂತ್ತಾಗುತ್ತದೆ. ನಮ್ಮ ಆಡುವ ಹನ್ನೊಂದರ ಬಳಗ ಇದು, ಈ ಆಟಗಾರರಿಗೆ ಶುಭಾಶಯ ಎಂದು ತಿಳಿಸಬೇಕು. ಏಷ್ಯಾ ಕಪ್ ಗೆಲ್ಲೋಣ, ಪಾಕಿಸ್ತಾನವನ್ನು ಮಣಿಸೋಣ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸೋಣ ಎಂಬ ಆತ್ಮ ವಿಶ್ವಾಸ ತುಂಬಬೇಕು. ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧದ ಸೋತಿರಬಹುದು, ಆದರೀಗ ಈ ಯೋಜನೆಯೊಂದಿಗೆ ಪೈಪೋಟಿ ನಡೆಸಲಿದ್ದೇವೆ ಎಂದು ರೋಹಿತ್ ಸಂದೇಶ ನೀಡಬೇಕು," ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

"ಕಳೆದ ವರ್ಷ ಟಿ20 ವಿಶ್ವ ಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡ ಒಂದು ದಿನ ಮೊದಲೇ ಆಡುವ ಹನ್ನೊಂದರ ಬಳಗದ ಘೋಷಣೆ ಮಾಡಿತ್ತು. ಆದರೆ ನಮ್ಮ ತಂಡ ಟಾಸ್ ಬಳಿಕ ನಿರ್ಧಾರ ತೆಗೆದುಕೊಳ್ಳುವ ನೀತಿ ಅನುಸರಿಸಿತ್ತು. ಮೊದಲೇ ಪ್ಲೇಯಿಂಗ್ ಇಲೆವೆನ್ ಪ್ರಕಟ ಮಾಡುವುದು ಎದುರಾಳಿ ತಂಡಕ್ಕೆ ದಿಟ್ಟ ಸಂದೇಶ ರವಾನಿಸಿದಂತೆ. ಜೊತೆಗೆ ನಮ್ಮ ಆಟಗಾರರನ್ನೂ ಕೂಡ ಆಡುತ್ತೇವೆ ಅಥವಾ ಇಲ್ಲವೇ ಎಂಬ ಗೊಂದಲದಿಂದ ದೂರ ಇಡಬಹುದು," ಎಂದಿದ್ದಾರೆ.
ಏಷ್ಯಾ ಕಪ್‌ಗೆ ಭಾರತದ ಸಂಭಾವ್ಯ ಇಲೆವೆನ್
1. ರೋಹಿತ್ ಶರ್ಮಾ (ಕ್ಯಾಪ್ಟನ್/ ಓಪನರ್)
2. ಕೆ.ಎಲ್ ರಾಹುಲ್ (ಓಪನರ್/ ವೈಸ್ ಕ್ಯಾಪ್ಟನ್)
3. ವಿರಾಟ್ ಕೊಹ್ಲಿ (ಬ್ಯಾಟ್ಸ್‌ಮನ್)
4. ರಿಷಭ್ ಪಂತ್ (ವಿಕೆಟ್‌ಕೀಪರ್/ ಬ್ಯಾಟ್ಸ್‌ಮನ್)
5. ಹಾರ್ದಿಕ್ ಪಾಂಡ್ಯ (ಆಲ್‌ರೌಂಡರ್)
6. ದಿನೇಶ್ ಕಾರ್ತಿಕ್ (ಬ್ಯಾಟರ್)
7. ರವೀಂದ್ರ ಜಡೇಜಾ (ಆಲ್‌ರೌಂಡರ್)
8. ಆರ್ ಅಶ್ವಿನ್ (ಆಫ್ ಸ್ಪಿನ್ನರ್)
9. ಭುವನೇಶ್ವರ್ ಕುಮಾರ್ (ವೇಗದ ಬೌಲರ್)
10. ರವಿ ಬಿಷ್ಣೋಯ್ (ಲೆಗ್ ಸ್ಪಿನ್ನರ್)
11. ಅರ್ಷದೀಪ್ ಸಿಂಗ್ (ಎಡಗೈ ವೇಗದ ಬೌಲರ್)
ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ
ಓಪನರ್ಸ್: ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್
ಮಧ್ಯಮ ಕ್ರಮಾಂಕದ ಬ್ಯಾಟರ್ಸ್: ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ
ವಿಕೆಟ್‌ಕೀಪರ್ಸ್: ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್
ಆಲ್‌ರೌಂಡರ್ಸ್: ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ
ವೇಗದ ಬೌಲರ್ಸ್: ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್
ಸ್ಪಿನ್ನರ್ಸ್: ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್
ಕಾಯ್ದಿರಿಸಿದ ಆಟಗಾರರು: ಅಕ್ಷರ್ ಪಟೇಲ್, ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್.
Asia Cup 2022 Rohit Sharma Should Announce Playing Xi For Pakistan Clash In Advance Says Mohammad Kaif.
17-01-26 08:02 pm
HK News Desk
ದೇವನಹಳ್ಳಿ - ಬೂದಿಗೆರೆ ರಸ್ತೆಯಲ್ಲಿ ಭೀಕರ ಅಪಘಾತ ; ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm