ಬ್ರೇಕಿಂಗ್ ನ್ಯೂಸ್
16-08-22 10:20 pm HK News Desk ದೇಶ - ವಿದೇಶ
ಶ್ರೀನಗರ, ಆಗಸ್ಟ್ 16: ಕಾಶ್ಮೀರದಲ್ಲಿ ಉಗ್ರರು ಪಂಡಿತರ ಮೇಲಿನ ದಾಳಿ ಮುಂದುವರಿಸಿದ್ದು, ಮಂಗಳವಾರ ಇಬ್ಬರು ಸಹೋದರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಶೋಪಿಯಾನ್ ಕಣಿವೆ ಭಾಗದಲ್ಲಿ ಘಟನೆ ನಡೆದಿದ್ದು, ಒಬ್ಬರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಇನ್ನೊಬ್ಬ ತೀವ್ರ ಗಾಯಗೊಂಡಿದ್ದಾರೆ.
ಮೂರು ತಿಂಗಳ ಹಿಂದೆ ಬುದ್ಗಾಮ್ ನಲ್ಲಿ ಸರಕಾರಿ ಕಚೇರಿಗೆ ದಾಳಿ ನಡೆಸಿ ಸರಕಾರಿ ಕೆಲಸದಲ್ಲಿದ್ದ ಪಂಡಿತ ಸಮುದಾಯದ ವ್ಯಕ್ತಿಯನ್ನು ಕೊಂದ ಬಳಿಕ ಈಗ ಮತ್ತೆ ದಾಳಿ ನಡೆಸಲಾಗಿದೆ. ಆನಂತರ 5 ಸಾವಿರಕ್ಕೂ ಹೆಚ್ಚು ಕಾಶ್ಮೀರಿ ಪಂಡಿತ ಸಮುದಾಯದ ಉದ್ಯೋಗಿಗಳು ಕಣಿವೆ ಭಾಗದಲ್ಲಿ ನಿಯೋಜಿತ ಕೆಲಸಕ್ಕೆ ಹಾಜರಾಗಿರಲಿಲ್ಲ. ಉಗ್ರರ ಭೀತಿಯಿಂದಾಗಿ ಭಾರೀ ಪ್ರತಿಭಟನೆಯನ್ನೂ ನಡೆಸಿದ್ದರು. ಆನಂತರ, ಇದೀಗ ಮತ್ತೆ ದಾಳಿ ನಡೆದಿದ್ದು, ಶೋಪಿಯಾನ್ ಜಿಲ್ಲೆಯ ಛೋಟಿಪೋರ ಎಂಬಲ್ಲಿ ಸಾಮಾನ್ಯ ಪ್ರಜೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಮೃತರನ್ನು ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಆತನ ಸೋದರ ಪಿಂಟು ಕುಮಾರ್ ತೀವ್ರ ಗಾಯಗೊಂಡಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಬುದ್ಗಾಮ್ ನಲ್ಲಿ ತಹಸೀಲ್ದಾರ್ ಕಚೇರಿಗೆ ದಾಳಿ ನಡೆಸಲಾಗಿತ್ತು. ಅಲ್ಲಿ ಹೊಸತಾಗಿ ಸರಕಾರಿ ಉದ್ಯೋಗಕ್ಕೆ ನಿಯೋಜನೆಯಾಗಿದ್ದ ರಾಹುಲ್ ಭಟ್ ಎಂಬ ಪಂಡಿತ ವ್ಯಕ್ತಿಯನ್ನು ಉಗ್ರರು ಗುಂಡಿಟ್ಟು ಸಾಯಿಸಿದ್ದರು. ಇದರ ಬೆನ್ನಲ್ಲೇ ಭಾರೀ ಸಂಖ್ಯೆಯಲ್ಲಿ ಪಂಡಿತ ಸಮುದಾಯದ ಜನರು ಪ್ರತಿಭಟನೆ ನಡೆಸಿದ್ದರು. ಕೇಂದ್ರ ಸರಕಾರ ಮತ್ತೆ ಕಾಶ್ಮೀರಿ ಪಂಡಿತರನ್ನು ಕಾಶ್ಮೀರದಲ್ಲೇ ನೆಲೆಸುವಂತೆ ವಿಶೇಷ ಯೋಜನೆ ಪ್ರಕಟಿಸಿದ್ದು, ಅದರಂತೆ ದೆಹಲಿ ಇನ್ನಿತರ ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದವರು ಮತ್ತೆ ಬಂದು ನೆಲೆ ಕಂಡುಕೊಳ್ಳುತ್ತಿದ್ದಾರೆ. ಇದನ್ನು ಬಹಿರಂಗವಾಗಿಯೇ ವಿರೋಧಿಸಿರುವ ಉಗ್ರರು ಕಾಶ್ಮೀರಿ ಪಂಡಿತರಿಗೆ ಅವಕಾಶ ಕೊಟ್ಟರೆ ನಾವು ಅವಕಾಶ ಕೊಡಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಕಳೆದ ಅಕ್ಟೋಬರ್ ತಿಂಗಳ ಬಳಿಕ ಪಂಡಿತರನ್ನು ಗುರಿಯಾಗಿಸಿ ಕೊಲ್ಲುವ ಕೃತ್ಯಗಳು ನಡೆಯುತ್ತಿದ್ದು, ಪಂಡಿತ ಸಮುದಾಯ ಮತ್ತೆ ಭೀತಿಗೆ ಒಳಗಾಗಿವೆ. 90ರ ದಶಕದಲ್ಲಾದ ಕಾಶ್ಮೀರ್ ಫೈಲ್ಸ್ ಚಿತ್ರದ ಚಿತ್ರಣ ಮತ್ತೆ ಮರುಕಳಿಸುತ್ತಿವೆಯಾ ಅನ್ನುವ ಭೀತಿ ಅಲ್ಲಿನ ಜನರಲ್ಲಿ ಮಡುಗಟ್ಟಿದೆ.
A Kashmiri Pandit was shot dead by terrorists at an apple orchard in Shopian district today. His brother was injured in the firing, police said.This comes about three months after the killing of a Kashmiri Pandit at a government office in Budgam sparked widespread protests by the community. Since then, over 5000 Kashmiri Pandit employees are not attending their duties, fearing targeted attacks. They are demanding relocation to Jammu till the time situation in the Valley improves.
10-03-26 01:47 pm
HK News Staffer
ಗುರುಗ್ರಾಮ್ನಲ್ಲಿ ನಿರ್ಮಾಣ ಹಂತದ ಗೋಡೆ ಕುಸಿತ ; 7...
10-03-26 11:04 am
ಸ್ತ್ರೀ–ಪುರುಷರ ನಗ್ನ ಫೋಟೋಗಳು, ಕೊಳೆತ ಟೊಮೆಟೋ ; ಬೆ...
10-03-26 10:49 am
ಕಲಬುರಗಿ ಜಾತ್ರೆಯಲ್ಲಿ ಭೀಕರ ದುರಂತ; ರಥದ ಚಕ್ರಕ್ಕೆ...
09-03-26 09:51 pm
ಕೊಡಗು ; ಹತ್ತು ದಿನ ಅಂತರದಲ್ಲಿ ಕಾಡಾನೆಗೆ ಎರಡನೇ ಬಲ...
09-03-26 08:07 pm
10-03-26 09:46 pm
HK News Desk
ಹರ್ಮುಜ್ ಜಲಸಂಧಿಯಲ್ಲಿ ತೈಲ ಹಡಗು ಬಂಧಿ ; ಜಗತ್ತಿಗೆ...
10-03-26 04:30 pm
ಕಚ್ಚಾ ತೈಲ ದರ ಏರಿಕೆ ; ಪಾಕಿಸ್ತಾನದಲ್ಲಿ ಅಲ್ಲೋಲಕಲ್...
10-03-26 01:31 pm
ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಆಯತುಲ್ಲಾ ಮೊಜ್ತಬ...
09-03-26 01:44 pm
ಇರಾನ್ ಮೇಲೆ ಮತ್ತೊಂದು ಭಾರಿ ದಾಳಿಗೆ ಟ್ರಂಪ್ ಸಿದ್ಧ...
07-03-26 11:58 am
10-03-26 05:00 pm
HK News Staffer
ಬಿಸಿಲಿಗೆ ತತ್ತರಿಸಿದ ಅಳಿಲಿನ ದಣಿವು ನೀಗಿಸಿದ ಟ್ರಾಫ...
09-03-26 09:52 pm
ಗಲ್ಫ್ ಯುದ್ಧ ; ಮಂಗಳೂರಿನಿಂದ ದುಬೈ, ಜೆದ್ದಾ ಸೇರಿ ಹ...
09-03-26 07:29 pm
ತಲಪಾಡಿಯ ಯುವಕ ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಸ...
09-03-26 02:53 pm
ಬೇರೆ ರಾಷ್ಟ್ರಗಳಿಂದ ಬಂದವರಿಗೆ ಮಸೀದಿ, ಚರ್ಚ್ ಕಟ್ಟಲ...
09-03-26 12:50 pm
10-03-26 08:32 pm
Mangaluru Staffer
ಉಪ್ಪಿನಂಗಡಿ ; ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖ...
10-03-26 07:01 pm
ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವೇಳೆ ಕಿರಿಕ್ ; 19 ವರ...
10-03-26 01:49 pm
Vexon fraud Company, FIR: ಬ್ಲೇಡ್ ಕಂಪನಿ ವೆಕ್ಸನ...
28-02-26 11:12 am
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm