ಬ್ರೇಕಿಂಗ್ ನ್ಯೂಸ್
10-08-22 10:45 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 10: ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಾಧೀಶ ಜಸ್ಟಿಸ್ ಉದಯ್ ಉಮೇಶ್ ಲಲಿತ್ ಅವರು ಭಾರತದ 49ನೇ ಮುಖ್ಯ ನ್ಯಾಯಾಧೀಶರಾಗಲಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಅವರಿಂದ ತೆರವಾಗುವ ಸ್ಥಾನಕ್ಕೆ ಯುಯು ಲಲಿತ್ ನೇಮಕಗೊಂಡಿದ್ದಾರೆ. ಆಗಸ್ಟ್ 27ರಂದು ಅವರು ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನವೆಂಬರ್ 8ರಂದು ಯುಯು ಲಲಿತ್ ನಿವೃತ್ತಿಯಾಗಲಿದ್ದು, ಕೇವಲ 74 ದಿವಸಗಳಷ್ಟೇ ಮುಖ್ಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮುಂಬೈನ ಸರಕಾರಿ ಕಾನೂನು ಕಾಲೇಜಿನಲ್ಲಿ ಪದವಿ ಪೂರೈಸಿದ್ದ ಲಲಿತ್ ಅವರು ಕ್ರಿಮಿನಲ್ ಕಾನೂನಿನಲ್ಲಿ ನಿಷ್ಣಾತರಾಗಿದ್ದರು. ಮೊದಲಿಗೆ ಮುಂಬೈ ಹೈಕೋರ್ಟಿನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡಿದ್ದರು. ಅವರ ತಂದೆಯೂ ಸೀನಿಯರ್ ವಕೀಲರಾಗಿದ್ದು, ನ್ಯಾಯಾಧೀಶರಾಗಿಯೂ ಸೇವೆಗೈದಿದ್ದರು.
ಯುಯು ಲಲಿತ್ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಕೆಲವು ಮಹತ್ವದ ಪ್ರಕರಣಗಳಲ್ಲಿ ತೀರ್ಪು ನೀಡಿದ್ದರು. 2017ರಲ್ಲಿ ತ್ರಿವಳಿ ತಲಾಖ್ ಪ್ರಕರಣದಲ್ಲಿ ತೀರ್ಪು ನೀಡಿದ್ದ ಐವರು ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ಇವರೂ ಒಬ್ಬರಾಗಿದ್ದರು. ತ್ರಿವಳಿ ತಲಾಖ್ ಎನ್ನುವುದು ಅಸಾಂವಿಧಾನಿಕ, ಕಾನೂನು ಬಾಹಿರ ಎಂದು ಯುಯು ಲಲಿತ್ ತೀರ್ಪು ನೀಡಿದ್ದು ಗಮನ ಸೆಳೆದಿತ್ತು. ಮುಖ್ಯ ನ್ಯಾಯಾಧೀಶರಾಗಿದ್ದ ಜೆಎಸ್ ಖೇಹರ್ ಮತ್ತು ಅಬ್ದುಲ್ ನಜೀರ್ ತ್ರಿವಳಿ ತಲಾಖ್ ಪರವಾಗಿ ತೀರ್ಪು ನೀಡಿದ್ದರೆ, ಕುರಿಯನ್ ಜೋಸೆಫ್, ಆರ್.ಎಫ್ ನಾರಿಮನ್ ಮತ್ತು ಯುಯು ಲಲಿತ್ ತ್ರಿವಳಿ ತಲಾಖ್ ವಿರುದ್ಧ ತೀರ್ಪು ನೀಡಿದ್ದರು. ಸದ್ಯಕ್ಕೆ ಖೇಹರ್, ನಾರಿಮನ್ ಮತ್ತು ಜೋಸೆಫ್ ನ್ಯಾಯಾಧೀಶ ಹುದ್ದೆಯಿಂದ ನಿವೃತ್ತರಾಗಿದ್ದಾರೆ.
President Droupadi Murmu issued a notice on Wednesday for the appointment of Justice UU Lalit as the next Chief Justice of India. He will succeed Chief Justice of India (CJI) NV Ramana, whose tenure ends on August 26.
11-10-25 11:03 pm
Bangalore Correspondent
ಮೂವರು ಮಕ್ಕಳ ಮಮ್ಮಿಗೆ ಇನ್ನೊಬ್ಬನ ಜೊತೆ ಲವ್ವಿ ಡವ್ವ...
11-10-25 10:05 am
ಮುಂದಿನ ದಿನಗಳಲ್ಲಿ ಹಾಸನಾಂಬೆ ಸಾನಿಧ್ಯವೇ ಇರುವುದಿಲ್...
10-10-25 07:06 pm
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
11-10-25 12:52 pm
HK News Desk
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
11-10-25 10:24 pm
Mangalore Correspondent
Malayalam actor Jayakrishnan Arrest, Mangalor...
11-10-25 07:18 pm
Karkala Suicide Case, Abishek Death Note: ನನ್...
11-10-25 05:52 pm
Muslim Terrorist, Mangalore, Jayakrishnan Ker...
11-10-25 11:11 am
ಮುಡಾ ಲೇಔಟ್ ; ಕುಂಜತ್ತ್ ಬೈಲಿನಲ್ಲಿ ಅವೈಜ್ಞಾನಿಕ ರೀ...
10-10-25 06:52 pm
10-10-25 09:48 pm
Udupi Correspondent
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm