ಬ್ರೇಕಿಂಗ್ ನ್ಯೂಸ್
06-08-22 02:54 pm HK News Desk ದೇಶ - ವಿದೇಶ
ದೋಹಾ, ಆಗಸ್ಟ್ 6 : ಭಾರತದ 75ನೇ ಸ್ವಾತಂತ್ರ್ಯೋತ್ಸವದ ನೆನಪಿನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮ ದೂರದ ಕತಾರಿನಲ್ಲೂ ಪ್ರತಿಧ್ವನಿಸಿದೆ. ಅಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರ "ಆಜಾದಿ ಕಾ ಅಮೃತ್ ಮಹೋತ್ಸವ" ಆಚರಣೆ ಹಮ್ಮಿಕೊಂಡಿದ್ದು ಇದರ ಅಂಗವಾಗಿ ಕರ್ನಾಟಕ ಸಂಘ ಕತಾರ್ ಆಗಸ್ಟ್ 4 ರಂದು ಶಾಸ್ತ್ರೀಯ ನೃತ್ಯ ಹಾಗೂ ಗಾಯನ ಸಂಗೀತ ಆಯೋಜಿಸಿತ್ತು.
ಕಾರ್ಯಕ್ರಮವು ನೆರೆದಿದ್ದ ಭಾರತೀಯ ಸಮುದಾಯದ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. ಶ್ರೀಮತಿ ಸಂಜನ್ ಜೀವನ್ ಅವರ ಶಾಸ್ತ್ರೀಯ ನೃತ್ಯದೊಂದಿಗೆ ಆರಂಭ. ಕಾರ್ಯಕ್ರಮದಲ್ಲಿ ಕನ್ನಡ, ಹಿಂದಿ, ತುಳು ಮತ್ತು ಕೊಂಕಣಿ ಭಾಷೆಗಳ ಸುಮಧುರ, ದೇಶಭಕ್ತಿಯ ಸೂಪರ್ ಹಿಟ್ ಹಾಡುಗಳನ್ನು ಕರ್ನಾಟಕ ಮೂಲದ ಪ್ರಸಿದ್ಧ ಗಾಯಕರು ಹಾಡಿದರು. ಅನಿಲ್ ಭಾಸಗಿ, ತುಫೈಲ್, ಲಾವಣ್ಯ ಆಚಾರ್ಯ, ಸಾಗರ್ ಕೋಟ್ಯಾನ್, ಅಕ್ಷಯಾ ಶೆಟ್ಟಿ, ದಿವ್ಯಾ, ರಂಜಿತ್, ಸಂತೋಷ್, ನವ್ಯಾ ಶೆಟ್ಟಿ, ಕರೋಲ್ ಡಿಸೋಜಾ ಮತ್ತು ಅಬ್ದುಲ್ಲಾ ಮೋನು ಅವರ ಹಾಡುಗಳು ಪ್ರೇಕ್ಷಕರ ಮನ ಸೆಳೆದವು.




ಕರ್ನಾಟಕ ಸಂಘದ ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ ಮಂಜೋತ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಮಹೇಶ್ ಗೌಡ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಪಿ.ಎನ್.ಬಾಬುರಾಜನ್, ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಉಪಸ್ಥಿತರಿದ್ದರು. ಆಗಸ್ಟ್ 19ರ ವರೆಗೂ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.
Azadi Ka Amrit Mahotsav celebrated in Doha Qatar by Kannada Sangha with grandeur on 4th August with loads of Cultural activities.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm