ಬ್ರೇಕಿಂಗ್ ನ್ಯೂಸ್
27-06-22 09:11 pm HK News Desk ದೇಶ - ವಿದೇಶ
ಮುಂಬೈ, ಜೂನ್ 27: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಮುಂದುವರಿದ್ದು, ಅನರ್ಹತೆ ನೋಟೀಸ್ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಬಂಡಾಯ ಶಿವಸೇನೆ ಶಾಸಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಮಧ್ಯಂತರ ತೀರ್ಪಿನಲ್ಲಿ ಅನರ್ಹತೆ ನೋಟೀಸ್ ಬಗ್ಗೆ ಐದು ದಿನದಲ್ಲಿ ಪ್ರತಿಕ್ರಿಯೆ ನೀಡುವಂತೆ ಸಿಎಂ ಉದ್ಧವ್ ಠಾಕ್ರೆ, ಶಾಸಕಾಂಗ ನಾಯಕ ಅಜಯ್ ಚೌಧರಿಗೆ ಕೋರ್ಟ್ ಸೂಚನೆ ನೀಡಿದೆ. ಅಲ್ಲದೆ, ಜುಲೈ 11ಕ್ಕೆ ಮುಂದಿನ ವಿಚಾರಣೆ ಇರಲಿದ್ದು, ಅಲ್ಲಿವರೆಗೂ ಅನರ್ಹತೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಾರದು ಎಂದು ತಡೆಯನ್ನೂ ನೀಡಿದೆ.
ಬಂಡಾಯ ಶಾಸಕರಿಗೆ ಎರಡು ವಾರಗಳ ಕಾಲಾವಕಾಶ ಸಿಕ್ಕಿರುವುದು ದೊಡ್ಡ ಪ್ಲಸ್ ಅನ್ನುವ ಮಾತು ಕೇಳಿಬಂದಿದೆ. ಈ ನಡುವೆ, ಇಬ್ಬರು ಶಾಸಕರು ಗುವಾಹಟಿಯಿಂದ ಮುಂಬೈಗೆ ಬರಲಿದ್ದಾರೆ ಎನ್ನಲಾಗುತ್ತಿದ್ದು, ರಾಜ್ಯಪಾಲರನ್ನು ಭೇಟಿಯಾಗಿ ಸರಕಾರಕ್ಕೆ ಬಹುಮತದ ಕೊರತೆ ಉಂಟಾಗಿದ್ದು ವಿಶ್ವಾಸ ಮತ ಸಾಬೀತುಪಡಿಸುವಂತೆ ಸೂಚಿಸಬೇಕು ಎಂದು ಪತ್ರ ನೀಡಲಿದ್ದಾರೆ ಎನ್ನುವ ಮಾಹಿತಿಗಳಿವೆ. ಇದರಂತೆ ರಾಜ್ಯಪಾಲರು ಈ ವಾರಾಂತ್ಯಕ್ಕೆ ಅಥವಾ ಮುಂದಿನ ವಿಚಾರಣೆಗೆ ದಿನಾಂಕ ನಿಗದಿಪಡಿಸಿರುವ ಜುಲೈ 11ರಂದು ಅಧಿವೇಶನ ಕರೆದು ಮುಖ್ಯಮಂತ್ರಿಗೆ ಬಹುಮತ ಸಾಬೀತಿಗೆ ಸೂಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ, ಶಿವಸೇನೆಯ ಮತ್ತೊಬ್ಬ ಶಾಸಕ ಗುವಾಹಟಿಯ ಏಕನಾಥ ಶಿಂಧೆ ಗುಂಪಿಗೆ ಸೇರಲಿದ್ದಾರೆ ಎನ್ನುವ ಮಾಹಿತಿಗಳಿವೆ. ಪರ್ಬಾನಿ ಶಾಸಕ ರಾಹುಲ್ ಪಾಟೀಲ್ ಕೂಡ ಬಂಡಾಯದ ಗುಂಪು ಸೇರಲಿದ್ದಾರೆ ಎನ್ನಲಾಗುತ್ತಿದ್ದು, ಇದರೊಂದಿಗೆ 50ರಷ್ಟು ಮಂದಿ ಬಂಡಾಯದ ಗುಂಪಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತನ್ನು ಏಕನಾಥ ಶಿಂಧೆ ಜೊತೆಗಿನ ಗುಂಪು ಹೇಳುತ್ತಿದೆ. ಶಿವಸೇನೆಯಲ್ಲಿ ಒಟ್ಟು 55 ಸದಸ್ಯರಿದ್ದು, ಆ ಪ್ರಕಾರ ಮೂರನೇ ಎರಡರಷ್ಟು ಬಹುಮತ ಶಿಂಧೆಗಿದೆ. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆ ನಿಯಮ ಇವರಿಗೆ ಅನ್ವಯ ಆಗಲ್ಲ ಎಂದೂ ಹೇಳಲಾಗುತ್ತಿದೆ. ಶಿಂಧೆ ಗುಂಪಿನ ಪರವಾಗಿ ಸುಪ್ರೀಂ ಕೋರ್ಟ್ ಹಾಜರಾದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್, ಉಪ ಸ್ಪೀಕರ್ ತನ್ನ ವಿರುದ್ಧ ನಿರ್ಣಯ ಮಂಡನ ಆಗಿರುವಾಗ ಶಾಸಕರ ಅನರ್ಹತೆ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಸಿಎಂ ಉದ್ಧವ್ ಠಾಕ್ರೆ, ಗುವಾಹಟಿಯಲ್ಲಿ ಬೀಡು ಬಿಟ್ಟಿರುವ ಎಂಟು ಮಂದಿ ಸಚಿವರ ಖಾತೆಗಳನ್ನು ಹಿಂಪಡೆದಿದ್ದಾರೆ. ಅವರ ಖಾತೆಗಳನ್ನು ಇತರ ಸಂಪುಟ ಸದಸ್ಯರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗುವುದು. ಇವರಿಂದಾಗಿ ಜನರಿಗೆ ತೊಂದರೆ ಆಗಬಾರದು ಎಂದು ಹೇಳಿದ್ದಾರೆ. ಶಿವಸೇನೆ ಸಚಿವರ ಪೈಕಿ ಉದ್ಧವ್ ಠಾಕ್ರೆ ಬಿಟ್ಟರೆ, ಅವರ ಪುತ್ರ ಆದಿತ್ಯ ಠಾಕ್ರೆ ಮಾತ್ರ ಸಚಿವರಿದ್ದಾರೆ. ಇನ್ನಿಬ್ಬರು ಎಂಎಲ್ಸಿಗಳಾಗಿ ಸಚಿವರಾದವರು ಇದ್ದಾರೆ. ಎಂಟು ಮಂದಿ ಸಚಿವರು ಉದ್ಧವ್ ಠಾಕ್ರೆ ವಿರುದ್ಧ ಮುನಿಸುಗೊಂಡು ಗುವಾಹಟಿ ಕ್ಯಾಂಪ್ ಸೇರಿದ್ದಾರೆ.
In a relief to rebel Shiv Sena lawmakers led by Eknath Shinde, the Supreme Court on Monday kept in abeyance the disqualification proceedings before the Maharashtra Assembly Deputy Speaker till July 12 and sought responses to pleas by rebels questioning the legality of notices seeking their disqualification. The top court, however, refused to pass any interim order on the plea of the Maharashtra Government that there should not be any floor test in the Assembly, saying that they cannot always approach it in case of illegality.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 06:40 pm
HK News Desk
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
20-08-25 04:28 pm
Mangalore Correspondent
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm