ಬ್ರೇಕಿಂಗ್ ನ್ಯೂಸ್
02-06-22 03:20 pm HK News Desk ದೇಶ - ವಿದೇಶ
ಶ್ರೀನಗರ, ಜೂ 02: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ರಾಜಸ್ಥಾನದ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಉಗ್ರನೊಬ್ಬ ಗುರುವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಕಣಿವೆಯಲ್ಲಿನ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಹಿಂದೂಗಳನ್ನು ಗುರಿಯನ್ನಾಗಿಸಿ ನಡೆದ ಎರಡನೇ ದಾಳಿ ಇದಾಗಿದೆ.
ರಾಜಸ್ಥಾನ ಮೂಲದವರಾದ ಎಲಾಖಹಿ ದೆಹಟಿ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಅವರನ್ನು ಅರೇಹ್ ಬ್ರ್ಯಾಂಚ್‌ನ ಒಳಗೆ ಗುಂಡಿಕ್ಕಿ ಕೊಲ್ಲಲಾಗಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಬ್ಯಾಂಕ್ ಒಳಗೆ ಗ್ರಾಹಕನಂತೆ ಪ್ರವೇಶಿಸಿದ ಉಗ್ರನೊಬ್ಬ, ಗನ್‌ನಿಂದ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಾಜಸ್ಥಾನದ ಹನುಮನಗಡ ಜಿಲ್ಲೆಯ ನಿವಾಸಿಯಾಗಿರುವ ವಿಜಯ್ ಕುಮಾರ್ ಅವರು, ಇತ್ತೀಚೆಗಷ್ಟೇ ಕುಲ್ಗಾಂ ಜಿಲ್ಲೆಯಲ್ಲಿನ ಶಾಖೆಯ ಹುದ್ದೆಗೆ ಸೇರಿಕೊಂಡಿದ್ದರು. ಪೊಲೀಸರು ಇಡೀ ಪ್ರದೇಶವನ್ನು ನಿರ್ಬಂಧಿಸಿದ್ದು, ದಾಳಿ ಹಿಂದೆ ಭಾಗಿಯಾಗಿರುವ ಉಗ್ರರನ್ನು ಹೊಡೆದುರುಳಿಸಲು ಪ್ರಯತ್ನ ನಡೆಸಿದ್ದಾರೆ.
ಜಮ್ಮುವಿನ ಶಿಕ್ಷಕಿ ರಜನಿ ಬೇಲಾ ಅವರನ್ನು ಕುಲ್ಗಾಂನ ಶಾಲೆಯೊಂದರ ಹೊರಗೆ ಗುಂಡು ಹಾರಿಸಿ ಕೊಲೆ ಮಾಡಿದ ಬಳಿಕ, ಜಿಲ್ಲೆಯಲ್ಲಿ ನಡೆದ ಮತ್ತೊಂದು ಭೀಕರ ಕೃತ್ಯ ಜನರಲ್ಲಿ ಭಯ ಮೂಡಿಸಿದೆ. ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ದಾಳಿಗಳು ಹೆಚ್ಚುತ್ತಿವೆ. ಇದು ಕಾಶ್ಮೀರಿ ಪಂಡಿತರ ಸಮುದಾಯದ ಪ್ರತಿಭಟನೆಗೆ ಕಾರಣವಾಗಿದೆ. ತಮ್ಮನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ಅವರು ಬೇಡಿಕೆ ಇರಿಸಿದ್ದಾರೆ.

ಸೈನಿಕರ ವಾಹನ ಸ್ಫೋಟ
ಪಕ್ಕದ ಶೋಪಿಯಾನ್ ಜಿಲ್ಲೆಯಲ್ಲಿ 24 ಗಂಟೆಯ ಒಳಗೆ ಎರಡು ಪ್ರಮುಖ ಘಟನೆಗಳು ನಡೆದ ಬೆನ್ನಲ್ಲೇ, ಈ ಹತ್ಯೆ ನಡೆದಿದೆ. ಬುಧವಾರ ಸಂಜೆ ಫಾರೂಕ್ ಅಹ್ಮದ್ ಶೇಖ್ ಎಂಬ ನಾಗರಿಕನ ಮನೆಯ ಒಳಗೆ ಉಗ್ರರು ಉದ್ದೇಶಿತ ದಾಳಿ ನಡೆಸಿದ್ದರು. ಅದರಲ್ಲಿ ಫಾರೂಕ್ ಗಾಯಗೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ, ಗುರುವಾರ ಬೆಳಿಗ್ಗೆ ಯೋಧರು ಪ್ರಯಾಣಿಸುತ್ತಿದ್ದ ವಾಹನ ಸ್ಫೋಟಿಸಿ, ಮೂವರು ಸೈನಿಕರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ

ಸೇನಾ ಮೂಲಗಳ ಪ್ರಕಾರ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಾಗಿ ಮೂವರು ಸೈನಿಕರು ಖಾಸಗಿ ವಾಹನವೊಂದನ್ನು ಬಳಸಿಕೊಂಡಿದ್ದರು. ಅವರು ನಿಗದಿತ ಪ್ರದೇಶಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ.
ಇದು ಐಇಡಿ ಅಥವಾ ಗ್ರೆನೇಡ್ ಬಳಸಿ ನಡೆಸಿರುವ ದಾಳಿಯೋ ಅಥವಾ ಕಾರ್ ಬ್ಯಾಟರಿಯಲ್ಲಿನ ದೋಷದಿಂದ ಸ್ಫೋಟ ಉಂಟಾಗಿದೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ವಾಹನಕ್ಕೆ ಭಾರಿ ಹಾನಿಯಾಗಿದೆ. ಹೀಗಾಗಿ ಬ್ಯಾಟರಿ ಸಮಸ್ಯೆಯಿಂದ ಈ ಘಟನೆ ನಡೆದಿರುವ ಸಮಸ್ಯೆ ಕಡಿಮೆ ಎನ್ನಲಾಗಿದೆ.
ಕಾಶ್ಮೀರ ತೊರೆಯುತ್ತಿರುವ ಹಿಂದೂ ಕುಟುಂಬಗಳು;!
ಹತ್ಯೆ ಭೀತಿಯಿಂದ ನೂರಾರು ಹಿಂದೂ ಕುಟುಂಬಗಳು ಕಾಶ್ಮೀರ ತೊರೆದಿವೆ ಎಂದು ಸಮುದಾಯದ ಮುಖಂಡರೊಬ್ಬರು ಬುಧವಾರ ತಿಳಿಸಿದ್ದಾರೆ.
ಹಿಂದೂಗಳು ಇರುವ ಪ್ರದೇಶವನ್ನು ಸದ್ಯ ಪೊಲೀಸರು ಸುತ್ತುವರಿದಿದ್ದಾರೆ. ಕಾಶ್ಮೀರಿ ಪಂಡಿತ ಸಮುದಾಯದ ಸರ್ಕಾರಿ ನೌಕರರು ಇರುವ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
![]()
ಹಿಂದೂ ಕುಟುಂಬಗಳು ಕಾಶ್ಮೀರ ತೊರೆಯುತ್ತಿರುವ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ಸ್ಥಳೀಯಾಡಳಿತ ನಿರಾಕರಿಸಿದೆ.

ಕಾಶ್ಮೀರಿ ಪಂಡಿತರ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕಳೆದ ತಿಂಗಳು ಭರವಸೆ ನೀಡಿದ್ದರು.
In yet another targeted attack, militants on Thursday shot dead a bank manager of Elaqahi Dehati Bank hailing from Rajasthan in south Kashmir’s Kulgam district. Police said militants fired on the Branch Manager of Elaqahi Dehati Bank while he was on duty in his branch at Arreh Mohanpora area of Kulgam district in the morning.
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
15-01-26 12:14 pm
HK News Desk
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
15-01-26 10:24 pm
Mangalore Correspondent
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
ಜ.18ರಂದು ಮಂಗಳೂರಿನಲ್ಲಿ ಪ್ರಪ್ರಥಮ ಜಾಗತಿಕ ಬಿಲ್ಲವರ...
15-01-26 04:01 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm