ಬ್ರೇಕಿಂಗ್ ನ್ಯೂಸ್
02-03-22 01:22 pm HK Desk news ಕರ್ನಾಟಕ
ಹಾವೇರಿ, ಮಾ.2: ನಿನ್ನೆ ಪ್ರಧಾನಿಗಳು, ಮಾಜಿ ಸಿಎಂ, ಹಾಲಿ ಸಿಎಂ, ಎಲ್ಲರೂ ನಮ್ಮ ಜೊತೆ ಮಾತಾಡಿದ್ದಾರೆ. ಜೀವಂತವಾಗಿ ದೇಶಕ್ಕೆ ನನ್ನ ಮಗ ಬರಲಿಲ್ಲ. ಸಾವಿರಾರು ವಿದ್ಯಾರ್ಥಿಗಳು ಜೀವ ಭಯದಲ್ಲಿದ್ದಾರೆ, ಅವರನ್ನು ಸೇಫ್ ಆಗಿ ಕರೆ ತನ್ನಿ ಅಂತ ನಾನು ಮೋದಿಯವರಿಗೆ ರಿಕ್ವೆಸ್ಟ್ ಮಾಡಿದೀನಿ. ನನ್ನ ಮಗನನ್ನು ಜೀವಂತ ಕರೆತರಲು ಆಗಿಲ್ಲ. ಇದಕ್ಕೆ ನಮ್ಮ ವ್ಯವಸ್ಥೆಯೋ, ಯಾರ ವೈಫಲ್ಯವೋ ಗೊತ್ತಿಲ್ಲ. ಇಲ್ಲಿನ ಮೆಡಿಕಲ್ ಶಿಕ್ಷಣದ ಮಾಫಿಯಾದಿಂದಾಗಿ ನನ್ನ ಮಗನಿಗೆ 97 ಶೇ. ಅಂಕ ಸಿಕ್ಕಿದರೂ ಇಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗಿರಲಿಲ್ಲ.
ಹೀಗೆಂದು ಉಕ್ರೇನ್ ದೇಶದಲ್ಲಿ ರಷ್ಯಾ ಬಾಂಬ್ ದಾಳಿಗೆ ತುತ್ತಾಗಿ ಸಾವಿಗೀಡಾದ ಹಾವೇರಿ ಜಿಲ್ಲೆಯ ಮೆಡಿಕಲ್ ವಿದ್ಯಾರ್ಥಿ ನವೀನ್ ಗೌಡನ ತಂದೆ ಶೇಖರಪ್ಪ ಗೌಡ ಮಾಧ್ಯಮದ ಮುಂದೆ ಇಲ್ಲಿನ ಮೆಡಿಕಲ್ ಶಿಕ್ಷಣದ ಮಾಫಿಯಾ ಬಗ್ಗೆ ಅಲವತ್ತುಕೊಂಡಿದ್ದಾರೆ.
ನಿನ್ನೆ ಸಾಕಷ್ಟು ಅಧಿಕಾರಿಗಳು, ಮುಖಂಡರು ಬಂದು ಮಾತಾಡಿದ್ದಾರೆ. ಶವ ತಂದು ಕೊಡುವ ಭರವಸೆ ನೀಡುತ್ತಿದ್ದಾರೆ. ಬಂಕರಿನಡಿ ಇರುವ ಕನ್ನಡಿಗ ವಿದ್ಯಾರ್ಥಿಗಳು ಹೊರಗೆ ಬರೋಕೆ ಹೆದರ್ತಾ ಇದ್ದರು. ಮಗನನ್ನು ಯಾವಾಗ ಕರೆಸ್ತೀರಿ ಅಂದಾಗ ಇದೇ ರೀತಿ ಎಲ್ಲರೂ ಆಶ್ವಾಸನೆ ಕೊಡ್ತಾ ಇದ್ದರು. ಅವನು ಬರೋದು ಯಾರಿಂದ ತಪ್ಪಿತು, ಯಾರಿಂದ ವೈಫಲ್ಯ ಆಯ್ತು ಅಂತ ನಂಗೆ ಗೊತ್ತಾಗಲಿಲ್ಲ. ಪೋಲೆಂಡ್, ರೋಮೇನಿಯಾ ಮೂಲಕ ಅವನು ಬರಬೇಕಿತ್ತು. 1500 ಕಿಮೀ ದೂರದ ಪೋಲೆಂಡ್ ಹೋಗುವುದು ಹೇಗೆ ಅನ್ನುವುದು ತಿಳಿಯದೆ ಸಂದಿಗ್ಧದಲ್ಲಿದ್ದರು. ರೈಲಿನಲ್ಲಿ ಹೊರಗಡೆ ಹೋದರೆ ಅದರಲ್ಲಿ ಸ್ಥಳೀಯರೇ ತುಂಬಿರುತ್ತಿದ್ದರು. ಅಲ್ಲಿನವರೂ ಹಲ್ಲೆ ಮಾಡುತ್ತಿದ್ದರಂತೆ. ಬಂಕರ್ ನಲ್ಲಿ ಇದ್ರೂ ಕಷ್ಟ, ಹೊರ ಬಂದ್ರೂ ಕಷ್ಟ ಅಂತ ಅವರೆಲ್ಲ ಒದ್ದಾಡಿದ್ದಾರೆ.
ಯುದ್ದ ಆಗೋದು ಸುಳ್ಳು, ಧೈರ್ಯವಾಗಿರಿ ಅಂತ ಕಾಲೇಜಿನವರು ಮೊದಲು ಹೇಳಿದ್ರಂತೆ. ಯುದ್ಧ ಆಗಲ್ಲ ಅನ್ನೋ ವಿಶ್ವಾಸದಲ್ಲಿಯೇ ಇದ್ರು ಎಲ್ಲರು. ಆದರೆ ಯುದ್ಧ ಆರಂಭಗೊಂಡು ಇಷ್ಟು ದಿನ ಆಯ್ತು. ಬಂಕರಿನಡಿ ಅನ್ನ, ನೀರು ಇಲ್ಲದೆ ಸಿಲುಕಿದ್ದಾರೆ. ಅವರ ರಕ್ಷಣೆ ನಮ್ಮ ಸರಕಾರದ ಕಡೆಯಿಂದ ಆಗಿಲ್ಲ.
ನನ್ನ ಮಗ ರಾಣೆಬೆನ್ನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದಿದ್ದ. ಆ ಸಂದರ್ಭದಲ್ಲಿ ನಾನು ಸೌದಿಯಲ್ಲಿ ಕೆಲಸದಲ್ಲಿದ್ದೆ. ಆಬಳಿಕ ನಂಜನಗೂಡಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಆನಂತರ, ಮಗನೂ ಹೈಸ್ಕೂಲ್ ಮತ್ತು ಪಿಯುಸಿಯನ್ನು ಅಲ್ಲಿಯೇ ಪೂರೈಸಿದ್ದ. ನಾವು ಕುಟುಂಬ ಸಹಿತ ಅಲ್ಲಿ ನೆಲೆಸಿದ್ದೆವು. ಈಗ ನಮ್ಮ ಹುಟ್ಟೂರಿನಲ್ಲಿಯೇ ಎರಡೆಕರೆ ಹೊಲ ಮಾಡಿಕೊಂಡು ಇದ್ದೇನೆ. ಮಗನನ್ನು ಮೆಡಿಕಲ್ ಓದಿಸಬೇಕೆಂಬ ಆಸೆಯಿಂದ ಓದಿಸಿದ್ದೆ. ಆದರೆ ಇಲ್ಲಿನ ಖಾಸಗಿ ಸಂಸ್ಥೆಗಳ ರಾಜಕೀಯ, ರಿಸರ್ವೇಶನ್, ಮೆಡಿಕಲ್ ಓದಲು ಕೋಟಿ ಕೇಳುವ ಶಿಕ್ಷಣ ಪದ್ಧತಿಯ ಕಾರಣ ನಮ್ಮ ಮಗ ಇಲ್ಲಿ ಓದೋಕೆ ಆಗಲಿಲ್ಲ. ಮಗನಿಗೆ 97 ಶೇಕಡಾ ಮಾರ್ಕ್ ಸಿಕ್ಕಿದರೂ ಮೆಡಿಕಲ್ ಸೀಟು ಸಿಗಲಿಲ್ಲ. ಇದು ವ್ಯವಸ್ಥೆಯ ಲೋಪವೋ ಗೊತ್ತಿಲ್ಲ. ಈ ವ್ಯವಸ್ಥೆಯನ್ನು ನಮ್ಮ ಸರಕಾರ ಸರಿ ಮಾಡಬೇಕಿದೆ ಎಂದು ಶೇಖರ ಗೌಡ ಮಾಧ್ಯಮದ ಜೊತೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಮೃತ ನವೀನ್ ಹಿರಿಯ ಸಹೋದರ ಹರ್ಷಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಅವನ ಜೊತೆ ಇದ್ದ ಗೆಳೆಯರು ಜೀವಂತವಾಗಿ ಬರ್ತಾ ಇದ್ದಾರೆ. ಕೊನೆಯ ಬಾರಿ ಅವನ ಮುಖ ಅಪ್ಪ , ಅಮ್ಮ ನೋಡಬೇಕು. ದಿನಕ್ಕೆ ಎರಡು ಮೂರು ನಿಮಿಷ ಮಾತಾಡ್ತಾ ಇದ್ವಿ ಅಷ್ಟೆ. ಇರುವಂತವರನ್ನು ತರೋಕೆ ಅಷ್ಟೊಂದು ಪ್ರಯತ್ನ ಮಾಡ್ತಾ ಇದ್ದೀರಾ. ಜೊತೆಗೆ ನನ್ನ ಸಹೋದರನ ಮೃತದೇಹವನ್ನೂ ತಗೊಂಡು ಬನ್ನಿ. ಬಾಡಿ ಬರೋ ಬಗ್ಗೆ ಸರಿಯಾದ ಮಾಹಿತಿ ನೀಡ್ತಾ ಇಲ್ಲ. ಪ್ರಯತ್ನ ಮಾಡ್ತಾ ಇದ್ದೀವಿ ಅಂತಾ ಹೇಳುತ್ತಿದ್ದಾರೆ ಅಷ್ಟೆ ಎಂದು ಸಹೋದರನನ್ನು ನೆನೆದು ಹರ್ಷಾ ಕಣ್ಣೀರು ಹಾಕಿದರು.
ನನಗಿಂತ ನಾಲ್ಕು ವರ್ಷ ಚಿಕ್ಕವನು ಅವನು. ಪ್ರತಿ ವರ್ಷ ಬರೋನು, ವರ್ಷದ ರಜೆ ಇದ್ದಾಗ ಬರೋನು. ಓದಿದ್ದೆಲ್ಲಾ ನಂಜನಗೂಡಲ್ಲಿ , ಅಲ್ಲಿನ ಫ್ರೆಂಡ್ಸ್ ಜೊತೆಗೂ ನವೀನ್ ಮಾತಾಡಿದ್ದ. ಆದ್ರೆ ಈಗ ನನ್ನ ತಮ್ಮ ಮಾತ್ರ ಇಲ್ಲವಾಗಿದ್ದಾನೆ. ಈಗ ಕನಿಷ್ಠ ಶವ ನೋಡುವುದಕ್ಕೂ ಖಚಿತತೆಯಿಲ್ಲ ಎಂದು ಬೇಸರ ತೋಡಿಕೊಂಡರು.
Ukraine Karnataka Haveri student who died of Bombing, father slams medical colleges for not sending his body to town even after taking crores of Money for medical seat.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm