ಬ್ರೇಕಿಂಗ್ ನ್ಯೂಸ್
26-02-22 11:47 am HK Desk news ಕರ್ನಾಟಕ
ಬಾಗಲಕೋಟ, ಫೆ.26 : ಉಕ್ರೇನ್ ಮೇಲೆ ನಿರಂತರವಾಗಿ ರಷ್ಯಾ ಪಡೆಗಳು ಬಾಂಬ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಕನ್ನಡಿಗ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಉಕ್ರೇನಿನ ಪೂರ್ವ ಭಾಗದ ಖಾರ್ಕೀವ್ ನಗರದಲ್ಲಿ ಸಿಲುಕಿರುವ ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿನಿ ಅಪೂರ್ವಾ ತನ್ನ ಹೆತ್ತವರಿಗೆ ವಾಟ್ಸಾಪ್ ಸಂದೇಶ ಮಾಡಿದ್ದು ಭಯ, ಆತಂಕ ತೋಡಿಕೊಂಡಿದ್ದಾರೆ.
ತಂದೆ ಸಿದ್ದಲಿಂಗೇಶ್ ಅವರಿಗೆ ಶುಕ್ರವಾರ ರಾತ್ರಿ ವಾಟ್ಸಾಪ್ ಸಂದೇಶ ಕಳಿಸಿರುವ ಅಪೂರ್ವಾ ಕದಂಪುರ, ನಮ್ಮನ್ನು ಭಾರತ ಸರಕಾರ ರಕ್ಷಣೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
ಭಾರತೀಯ ಸಮಯ 10.56 ರಾತ್ರಿ. ನಾವು ಇರುವ ಕಾರ್ಕೇವ್ ನಗರದಲ್ಲಿ ನಮ್ಮ ಕಟ್ಟಡದ ಹತ್ತಿರವೇ ಬಾಂಬ್ ಹಾಕುತ್ತಿದ್ದಾರೆ. ನಾವು ಅಪಾಯದಲ್ಲಿ ಇದ್ದೇವೆ ,ನಮ್ಮ ಫೋನ್ಗಳನ್ನು ಫ್ಲೈಟ್ ಮೋಡಿನಲ್ಲಿ ಇಡಲು ಹೇಳಿದ್ದಾರೆ. ಫೋನ್ ಸಂಪರ್ಕ ಆಗದಿದ್ದರೆ ಭಯ ಪಡಬೇಡಿ. ಆದರೆ ನಮ್ಮ ಭಾರತ ಸರ್ಕಾರಕ್ಕೆ ನಮ್ಮ ಮನವಿ ಏನೆಂದರೆ, ನಾವು ಹೆಚ್ಚು ವಿದ್ಯಾರ್ಥಿಗಳು ಇರುವುದು ಉಕ್ರೇನಿನ ಪೂರ್ವ ಭಾಗ ಕಾರ್ಕೇವ್ ನಗರದಲ್ಲಿ. ನಮ್ಮನ್ನು ಪೋಲಾಂಡ್ ಮುಖಾಂತರ ಕೊಂಡೊಯ್ಯಲು ಯತ್ನಿಸುವುದು ತುಂಬಾ ಕಷ್ಟ. ಅಲ್ಲಿಂದ ಹೋದರೆ ಸುಮಾರು 1000- 1500 ಕಿಲೋಮೀಟರ್ ದೂರ ಆಗುತ್ತದೆ.
ಅದರ ಬದಲು ನಮ್ಮನ್ನು ರೊಮೇನಿಯಾ ಮುಖಾಂತರವೇ ಸ್ಥಳಾಂತರ ಮಾಡಿದ್ರೆ ಸರಿ ಅನ್ಸುತ್ತೆ. ದಯವಿಟ್ಟು ನಮ್ಮ ಸರ್ಕಾರಕ್ಕೆ ನಮ್ಮ ಅಭಿಪ್ರಾಯ ತಲುಪಿಸಿ. ಇಲ್ಲಿ ನಾವು 8000 ಜನ ವಿದ್ಯಾರ್ಥಿಗಳಿದ್ದೇವೆ. ಯಾವುದೇ ಸಾರಿಗೆ ವ್ಯವಸ್ಥೆ ಸರಿ ಇಲ್ಲ.. ದಯವಿಟ್ಟು ನಮ್ಮ ಮನವಿಯನ್ನು ಭಾರತೀಯ ರಾಯಭಾರಿ ಕಚೇರಿಗೂ ತಲುಪಿಸಿ ಎಂದು ಅಪೂರ್ವ ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೆ, ಭಾರತ ಸರಕಾರಕ್ಕೆ ತಮ್ಮ ಮನವಿ ತಲುಪಿಸುವಂತೆ ಕೋರಿದ್ದಾರೆ. ಅಪೂರ್ವಾ ಬಾಗಲಕೋಟೆಯ ವಿದ್ಯಾಗಿರಿ ನಿವಾಸಿಯಾಗಿದ್ದು ಎಂಬಿಬಿ ಎಸ್ ಪ್ರಥಮ ವರ್ಷದ ವಿದ್ಯಾರ್ಥಿನಿ. ಇದೇ ರೀತಿ ಬನಹಟ್ಟಿ ಮೂಲದ ಕಿರಣ ಸವದಿ ಕೂಡ ಮನವಿ ಮಾಡಿದ್ದಾರೆ. ಕಿರಣ ಸವದಿ ಕೂಡ ಅದೇ ಕಾರ್ಕೀವ್ ನಗರದಲ್ಲಿದ್ದಾರೆ.
Bagalkot girl cries for help from Ukraine pleads indian govt to save her
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm