ಬ್ರೇಕಿಂಗ್ ನ್ಯೂಸ್
16-02-22 10:52 pm Bengaluru Correspondent ಕರ್ನಾಟಕ
ಬೆಂಗಳೂರು, ಫೆ.16 : ಹಿಜಾಬ್ ಕುರಿತ ಅರ್ಜಿಗಳ ವಿಚಾರಣೆಯಲ್ಲಿ ಇಂದು ಹಿರಿಯ ವಕೀಲ ರವಿವರ್ಮ ಕುಮಾರ್ ಪ್ರಬಲ ವಾದ ಮಂಡಿಸಿದ್ದಾರೆ. ಹಿಜಾಬ್ ಧರಿಸಲು ಕಾನೂನಿನಲ್ಲಿ ನಿರ್ಬಂಧವಿಲ್ಲ ಎಂದಾಗ ಸರ್ಕಾರದ ಅಡ್ಡಿ ಏಕೆ ? ಸರ್ಕಾರದ ಆದೇಶದಲ್ಲಿ ಹಿಜಾಬ್ ಗೆ ನಿರ್ಬಂಧ ವಿಧಿಸಲಾಗಿದೆ. ಸಮಾನತೆಗೆ, ಹಿಜಾಬ್ ಅಡ್ಡಿ ಎಂದು ಸರ್ಕಾರ ಹೇಳುತ್ತಿದೆ. ಆದರೆ ಸಿಕ್ಖರಿಗೆ ಈ ನೀತಿ ಅನ್ವಯ ಆಗುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಶೈಕ್ಷಣಿಕ ಪಠ್ಯಕ್ರಮ ನಿಗದಿಗೆ ಆಯಾ ಕಾಲೇಜು ಆಡಳಿತಕ್ಕೆ ಅವಕಾಶ ನೀಡಲಾಗಿದೆ. ಒಂದು ಬಾರಿ ನಿಗದಿ ಮಾಡಿದ ಸಮವಸ್ತ್ರ ಐದು ವರ್ಷ ಬದಲಾಯಿಸಬಾರದು. ಬದಲಿಸುವುದಾದರೆ ಒಂದು ವರ್ಷ ಮುಂಚಿತವಾಗಿ ನೋಟಿಸ್ ನೀಡಬೇಕು. ಹಿಜಾಬ್ ವಿಚಾರದಲ್ಲಿ ಒಂದು ವರ್ಷ ಮುಂಚಿತವಾಗಿ ನೋಟಿಸ್ ನೀಡಬೇಕಿತ್ತು. ಆದರೆ ಅದನ್ನು ಯಾವುದೇ ಕಾಲೇಜು ಮಾಡಿಲ್ಲ ಎಂದು ಹೇಳುದರು ರವಿವರ್ಮ ಕುಮಾರ್.
ನಿರ್ಬಂಧವಿಲ್ಲ ಎಂಬ ಕಾರಣಕ್ಕೆ ಶಾಲೆಗೆ ಲೈಸನ್ಸ್ ಇರುವ ಶಸ್ತ್ರಾಸ್ತ್ರ ತೆಗೆದುಕೊಂಡು ಹೋಗಬಹುದೇ ಎಂದು ನ್ಯಾ. ಕೃಷ್ ದೀಕ್ಷಿತ್ ವಕೀಲರಿಗೆ ಪ್ರಶ್ನಿಸಿದರು. ಶಿಕ್ಷಣ ಕಾಯ್ದೆಯಡಿ ಕೆಲವು ಪ್ರಾಧಿಕಾರಕ್ಕೆ ಅಧಿಕಾರವಿದೆ. ಸರ್ಕಾರದ ಅಧೀನದಲ್ಲಿರುವ ಕೆಲವು ಅಧಿಕಾರಿಗಳಿಗೆ ಅವಕಾಶ ನೀಡಬಹುದು. ಆದರೆ ಕಾಲೇಜು ಅಭಿವೃದ್ಧಿ ಸಮಿತಿ ಪ್ರಾಧಿಕಾರವಲ್ಲ ಎಂದರು ಸಿಜೆ.
ಆದರೆ, ಅದಕ್ಕೆಂದು ಕಾಯ್ದೆಯಲ್ಲಿ ಬೇರೆ ಪ್ರಾಧಿಕಾರವಿದೆ. ಇಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಪೊಲೀಸ್ರಂತೆ ವರ್ತಿಸುತ್ತಿದ್ದಾರೆ. ಸಮಿತಿಗೆ ಸಮವಸ್ತ್ರದ ನಿಗದಿ ಪಡಿಸುವ ಅಗತ್ಯವಿಲ್ಲ. ಕಾಲೇಜು ಸಮಿತಿ ಶಾಸಕರ ಅಡಿಯಲ್ಲಿ ಕೆಲಸ ಮಾಡುತ್ತದೆ ಎಂದು ರವಿವರ್ಮ ಕುಮಾರ್ ಹೇಳಿದಾಗ, ಸಮಿತಿ ಪೊಲೀಸ್ ಅಧಿಕಾರ ಬಳಸುತ್ತದೆ ಎಂದು ಹೇಳಲಾಗುವುದಿಲ್ಲ. ಈ ಬಗ್ಗೆ ಕೋರ್ಟ್ ತೀರ್ಪುಗಳಿದ್ದರೆ ಉಲ್ಲೇಖಿಸಿ ಎಂದು ಕೇಳಿದರು ನ್ಯಾ ಕೃಷ್ಣ ದೀಕ್ಷಿತ್.
ಅದು ಕಾನೂನಿಗೆ ವಿರುದ್ಧವಾಗಿದೆ. ಸರ್ಕಾರ ಸಮಿತಿಗೆ ಅಧಿಕಾರ ನೀಡಿರುವುದೇ ಕಾನೂನು ಬಾಹಿರ. ಕಾಲೇಜು ಆಡಳಿತ ಸಮಿತಿಯಲ್ಲಿ ಎಂಎಲ್ ಎಗಳಿಗೆ ಆಡಳಿತ ಅಧಿಕಾರ ನೀಡಬಾರದು. ಅದು ಪ್ರಜಾಪ್ರಭುತ್ವದ ಕೊಲೆಯಾದಂತೆ. ವಸತಿ ಯೋಜನೆಯಲ್ಲಿ ಶಾಸಕರು ಮಧ್ಯಪ್ರವೇಶ ಮಾಡ್ತಿದ್ದರು. ಕೋರ್ಟ್ ಮೆಟ್ಟಿಲೇರಿದ್ರಿಂದ ಅದಕ್ಕೆ ಬ್ರೇಕ್ ಬಿದ್ದಿದೆ. ಎಂಎಲ್ಎ ಗಳು ಒಂದು ಪಾರ್ಟಿಯ ಪ್ರತಿನಿಧಿ. ಅವ್ರಿಗೆ ಸ್ಕೂಲ್ ಹಾಗೂ ವಿದ್ಯಾರ್ಥಿಗಳ ನೋಡಿಕೊಳ್ಳೋ ಇನ್ ಚಾರ್ಜ್ ನೀಡಬಾರದು.
ದೇವಸ್ಥಾನಗಳ ಮೇಲೆ ಪ್ರಾಣಿಗಳ ಚಿತ್ರ ಬಿಡಿಸೋದು ಹಿಂದೆ ವಿವಾದ ಇರಲಿಲ್ಲ. ಅದಾದ್ಮೇಲೆ ಆ ಕೇಸ್ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ತೀರ್ಪು ಬರುವಷ್ಟರಲ್ಲಿ ಆನೆ ಸತ್ತೋಗಿತ್ತು. ಸರ್ವೆ ವರದಿಯೊಂದರ ಪ್ರಕಾರ 56 ರಷ್ಟು ಹಿಂದೂಗಳು ಧಾರ್ಮಿಕ ಪೆಂಡೆಂಟ್ ಧರಿಸುತ್ತಾರೆ. 84 ಪರ್ಸೆಂಟ್ ಮುಸ್ಲಿಮರು ಗಡ್ಡ, ಟೋಪಿ ಧರಿಸುತ್ತಾರೆ. ಸಿಖ್ಖರಲ್ಲೂ ಶೇ. 86 ರಷ್ಟು ಜನ ಗಡ್ಡ ಬಿಡ್ತಾರೆ. ಬಳೆ ಧರಿಸುವುದು ಧಾರ್ಮಿಕ ಗುರುತು ಅಲ್ಲವೇ, ಹಿಜಾಬ್ ಗೆ ಮಾತ್ರ ನಿರ್ಬಂಧ ವಿಧಿಸಿರುವುದೇಕೆ ? ಬಳೆ , ದುಪ್ಪಟ , ಬಿಂದಿಯನ್ನು ಯಾಕೆ ನಿಷೇಧಿಸಿಲ್ಲ. ಕ್ರಿಶ್ಚಿಯನ್ ಶಿಲುಬೆ ಧರಿಸಲು ನಿಷೇಧವಿಲ್ಲ. ಹಿಜಾಬ್ ಗೆ ಮಾತ್ರ ನಿಷೇಧವೇಕೆ..?ಎಂದು ರವಿವರ್ಮ ಕುಮಾರ್ ಪ್ರಶ್ನೆ ಮಾಡಿದರು.
ಸಿಖ್ ವಿದ್ಯಾರ್ಥಿಗಳು ಟರ್ಬನ್ ತೊಡುತ್ತಾರೆ. ಇಂತಹ ಪ್ರಶ್ನೆಗಳು ಸಂವಿಧಾನ ರಚನೆಯಾದ ಕ್ಷಣದಿಂದಲೂ ಇವೆ. ಧಾರ್ಮಿಕ ಕಾರಣಕ್ಕೆ ತಾರತಮ್ಯ ಮಾಡುವಂತಿಲ್ಲ. ಉತ್ತರ ಪ್ರದೇಶ, ರಾಜಸ್ತಾನ ಹೈಕೋರ್ಟ್ ನ ತೀರ್ಪುಗಳನ್ನು ಉಲ್ಲೇಖಿಸಿ ವಾದಿಸಿದ ರವಿವರ್ಮ, ಹರಿಜನ ಮತ್ತು ಮುಸ್ಲಿಂ ಸಮುದಾಯ ನಡುವೆ ಪ್ರಕರಣ ಇತ್ತು. ಕೊನೆಗೆ ಧಾರ್ಮಿಕ ಕಾರಣಕ್ಕೆ ತಾರತಮ್ಯ ಮಾಡುವಂತಿಲ್ಲ ಎಂದು ಉತ್ತರ ಪ್ರದೇಶ, ರಾಜಸ್ತಾನ ಹೈಕೋರ್ಟ್ ತೀರ್ಪು ನೀಡಿದ್ದನ್ನು ಉಲ್ಲೇಖಿಸಿದರು.
ಕೆಲವೇ ಸಮುದಾಯಗಳು ಕಾನೂನು ಪಾಲಿಸುತ್ತವೆ ಅನ್ನೋದು ಸರಿಯಲ್ಲ. ಸರ್ಕಾರ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡೋದು ಸರಿಯಲ್ಲ. ನಮ್ಮ ವಾದ ಕೇಳದೆ ನಿರ್ಲಕ್ಷಿಸುವುದು ಹೇಗೆ ಸಾಧ್ಯ. ಭಾರತ ವೈವಿಧ್ಯತೆಯಲ್ಲು ಏಕತೆ ಕಾಣುವ ರಾಷ್ಟ್ರ. ಹಿಜಾಬ್ ನಿಂದ ನಮ್ಮನ್ನು ಶಾಲೆಯಿಂದ ಹೊರಗಿಡಲಾಗಿದೆ. ಅಧಿಕಾರವೇ ಇಲ್ಲದ ಸಮಿತಿಯ ಆದೇಶ ಇದಕ್ಕೆಲ್ಲ ಕಾರಣ. ತರಗತಿಗಳು ವೈವಿಧ್ಯತೆಯ ಪ್ರತಿನಿಧಿಯಂತಿರಬೇಕು. ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆಯೇ ಕಡಿಮೆಯಿದೆ. ಸರ್ಕಾರದ ಇಂತಹ ಆದೇಶಗಳಿಂದ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಹಿನ್ನಡೆಯಾಗುತ್ತದೆ. ಹೀಗಾಗಿ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ರವಿವರ್ಮ ಕುಮಾರ್ ಒತ್ತಾಯಿಸಿದ್ದಾರೆ.
The Karnataka hijab matter was heard for the fourth straight day in the high court on Wednesday, with the chief justice hearing arguments from Muslim students who had challenged curbs on wearing headscarves on educational campuses. Appearing on behalf of the students, advocate Ravi Varma Kumar asked the high court why no other religious symbol is considered in the impugned government order. “Why only hijab? Is it not because of their religion? Discrimination against Muslim girls is purely on the basis of religion and hence hostile discrimination."
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm