ಬ್ರೇಕಿಂಗ್ ನ್ಯೂಸ್
19-01-22 10:05 pm HK Desk news ಕರ್ನಾಟಕ
ಬೆಂಗಳೂರು, ಜ.19 : ಬೆಂಗಳೂರು ಏರ್ಪೋರ್ಟ್ ನಲ್ಲಿ ಮೇಲಕ್ಕೆ ಹಾರಿದ ಎರಡು ಇಂಡಿಗೋ ವಿಮಾನಗಳು ಆಗಸದಲ್ಲಿ ಪರಸ್ಪರ ಡಿಕ್ಕಿಯಾಗುವುದರಿಂದ ಸ್ವಲ್ಪದರಲ್ಲಿ ತಪ್ಪಿದ ಘಟನೆ ಜನವರಿ 9ರಂದು ಬೆಳಗ್ಗೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ವಿಮಾನ ಯಾನ ಸಚಿವಾಲಯ ತನಿಖೆಗೆ ಆದೇಶ ಮಾಡಿದೆ.
ಈ ಬಗ್ಗೆ ಏರ್ಪೋರ್ಟ್ ಇಂಡಿಯಾ ಅಥಾರಿಟಿ ಸಂಸ್ಥೆಯಾಗಲೀ, ಬೆಂಗಳೂರು ಏರ್ಪೋರ್ಟ್ ಸಂಸ್ಥೆಯಾಗಲೀ ವಿಷಯ ಬಹಿರಂಗ ಪಡಿಸಿಲ್ಲ. ಆದರೆ, ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್, ಈ ಬಗ್ಗೆ ತನಿಖೆ ನಡೆಸಲು ಆದೇಶ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಿಂದ ಕೊಲ್ಕತ್ತಾ ಹೊರಟಿದ್ದ ಇಂಡಿಗೋ ವಿಮಾನ (6E455) ಮತ್ತು ಬೆಂಗಳೂರಿನಿಂದ ಭುವನೇಶ್ವರ ಹೊರಟಿದ್ದ (6E246) ಇಂಡಿಗೋ ವಿಮಾನ 5 ನಿಮಿಷದ ಅಂತರದಲ್ಲಿ ಟೇಕ್ ಆಫ್ ಆಗಿದ್ದು, ಆಗಸದಲ್ಲಿ ವರ್ಟಿಕಲ್ ಮತ್ತು ಹಾರಿಜಂಟಲ್ ಆಗಿ ಸಾಗುವ ದಿಕ್ಕಿನಲ್ಲಿ ನಿಯಮ ಉಲ್ಲಂಘಿಸಿದೆ. ರಾಡಾರ್ ಸೂಚನೆಯನ್ನು ಉಲ್ಲಂಘಿಸಿ, ಒಂದಕ್ಕೊಂದು ಏಕಪ್ರಕಾರದಲ್ಲಿ ಸಾಗಿದ್ದವು. ಇದರಿಂದ ಕೆಲವೇ ಕ್ಷಣಗಳ ಅಂತರದಲ್ಲಿ ಆಗಸದಲ್ಲಿ ವಿಮಾನಗಳ ಡಿಕ್ಕಿಯಾಗುವ ಸಾಧ್ಯತೆ ಕಂಡುಬಂದಿದ್ದು ಸ್ವಲ್ಪದರಲ್ಲಿ ಅವಘಡ ತಪ್ಪಿತ್ತು ಎಂದು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಮತ್ತು ಇಂಡಿಗೋ ಸಂಸ್ಥೆಯ ಪ್ರತಿನಿಧಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ದುಬೈ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗಿದ್ದ ಭಾರತ ಮೂಲದ ಎರಡು ವಿಮಾನಗಳು ಇದೇ ರೀತಿ ಅಪಘಾತ ಆಗುವುದರಿಂದ ಸ್ವಲ್ಪದರಲ್ಲಿ ತಪ್ಪಿದ ಘಟನೆ ನಡೆದಿತ್ತು.
Two IndiGo planes taking off from the Kempegowda International Airport came close to colliding with each other mid-air while taking off. The flights involved in the incident were the IndiGo flights 6E 455 departing for Kolkata and 6E 246 for Bhubaneswar.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 01:34 pm
Udupi Correspondent
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm