ಬ್ರೇಕಿಂಗ್ ನ್ಯೂಸ್
18-01-22 08:12 pm HK Desk news ಕರ್ನಾಟಕ
ಮಂಡ್ಯ, ಜ.18 : ಬಾಬರಿ ಮಸೀದಿ ರೀತಿಯಲ್ಲೇ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಆದಷ್ಟು ಬೇಗ ಒಡೆದು ಹಾಕಬೇಕು. ಇಲ್ಲಿ ಹನುಮಾನ್ ದೇವಸ್ಥಾನವನ್ನು ಮಸೀದಿ ಮಾಡಲಾಗಿದೆ. ಇದನ್ನು ಒಡೆದು ಹಾಕಿ, ಮತ್ತೆ ದೇವಸ್ಥಾನ ನಿರ್ಮಾಣ ಮಾಡಬೇಕು ಎಂದು ಕಾಳಿಕಾ ಮಠದ ಋಷಿಕುಮಾರ ಸ್ವಾಮೀಜಿ ಹೇಳಿದ್ದಾರೆ.
ಈ ಬಗ್ಗೆ ಸ್ವಾಮೀಜಿ ಸ್ವತಃ ಅದೇ ಮಸೀದಿ ಎದುರಲ್ಲಿ ನಿಂತು ವಿಡಿಯೋ ಮಾಡಿದ್ದು ತಮ್ಮ ಕಾಳಿಕಾ ಮಠದ ಫೇಸ್ಬುಕ್ ಜಾಲತಾಣದಲ್ಲಿ ಅಪ್ಲೋಡ್ ಮಾಡಿ, ವಿವಾದ ಮೈಗೆ ಎಳೆದುಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ಹಿಂದು ಸಂಘಟನೆಗಳು ಪ್ರತಿಭಟನಾ ಜಾಥಾ ನಡೆದಿದ್ದಾಗ ಮಸೀದಿ ಒಡೆಯುವ ಹುನ್ನಾರೆ ಇದೆ ಎಂದು ಮುಸ್ಲಿಂ ಮುಖಂಡರು ಆರೋಪಿಸಿದ್ದರು. ಇದರ ಬೆನ್ನಲ್ಲೇ ಇದೀಗ ಉರಿಯುವ ಬೆಂಕಿಗೆ ತುಪ್ಪ ಸುರಿವ ಕೆಲಸವನ್ನು ಸ್ವಾಮೀಜಿ ಮಾಡಿದ್ದಾರೆ.



ಜಾಮೀಯಾ ಮಸೀದಿಯಲ್ಲಿ ಅದ್ಬುತವಾದ ಶಿಲೆಗಳಿವೆ. ಇಲ್ಲಿನ ಶಿಲೆಗಳು ದೇವಸ್ಥಾನದ ಕಟ್ಟಡವಾಗಿರುವುದರ ಕುರುಹು. ಶ್ರೀರಂಗಪಟ್ಟಣದ ದೇವಾಸ್ಥಾನವನ್ನು ಮಸೀದಿ ಮಾಡಿಕೊಂಡಿದ್ದಾರೆ. ಹಿಂದುಗಳು ಜಾಗರೂಕರಾಗಿ ಆದಷ್ಟು ಬೇಗ ಇದನ್ಬು ಒಡೆಯಬೇಕು ಎಂದು ಹೇಳಿ ವಿಡಿಯೋ ಮಾಡಿದ್ದರು. ಬಳಿಕ ವಿವಾದಾತ್ಮಕ ಹೇಳಿಕೆ ವೈರಲ್ ಆಗುತ್ತಲೇ ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ದೇವನೂರಿನ ಕಾಳಿ ಮಠದಲ್ಲಿ ಬಂಧನ
ಹಿಂದುಗಳೇ ಮಸೀದಿಯನ್ನು ಒಡೆಯಿರಿ ಎಂದು ಕರೆ ನೀಡುವ ಮೂಲಕ ಕಾಳಿ ಸ್ವಾಮೀಜಿ ಪ್ರಚೋದನೆ ನೀಡಿದ್ದಾಗಿ ಮಂಡ್ಯ ಪೊಲೀಸರು ಕೇಸು ದಾಖಲಿಸಿದ್ದು ಚಿಕ್ಕಮಗಳೂರಿನಲ್ಲಿ ಬಂಧಿಸಲಾಗಿದೆ. ಕಡೂರು ತಾಲೂಕಿನ ದೇವನೂರಿನ ಕಾಳಿ ಮಠದಲ್ಲಿದ್ದ ಋಷಿಕುಮಾರ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಸೀದಿ ಮುಂದೆ ನಿಂತು ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.
Rishi kumar swamiji arrested by chikmagalur Police for derogatory video on Mosques in Mandya. A video on his Facebook went viral where he was stating that Mosques should be destroyed.
29-08-26 10:49 pm
HK News Staffer
‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ...
29-08-26 10:47 pm
ನಾಗೇಂದ್ರ ರಾಜಿನಾಮೆ ನೀಡಿದ್ರೂ ಬಿಜೆಪಿ ಪಾದಯಾತ್ರೆ ಮ...
29-08-26 10:38 pm
ಸಿನಿಮಾಗಳಲ್ಲಿ ಮಹಿಳೆಯನ್ನು ಭೋಗದ ವಸ್ತುವನ್ನಾಗಿ ತೋರ...
28-08-26 09:35 pm
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
29-08-26 10:25 pm
HK News Staffer
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm