ಬ್ರೇಕಿಂಗ್ ನ್ಯೂಸ್
17-01-22 10:26 pm Hk Desk, Bengaluru ಕರ್ನಾಟಕ
ಬೆಂಗಳೂರು, ಜ.17: ಗಣರಾಜ್ಯೋತ್ಸವ ಪರೇಡ್ ಬಗ್ಗೆ ಕೇರಳ ರಾಜ್ಯವು ಶ್ರೀ ನಾರಾಯಣ ಗುರುಗಳ ಹೆಸರನ್ನು ಮುಂದಿಟ್ಟುಕೊಂಡು ಅನಾವಶ್ಯಕ ವಿವಾದ ಸೃಸ್ಟಿಸುತ್ತಿರುವುದು ಸರಿಯಲ್ಲ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ. ಈ ಬಗ್ಗೆ ಸಚಿವ ಸುನಿಲ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಪ್ರತೀ ವರ್ಷ ಜನವರಿ 26 ರ ಗಣರಾಜ್ಯೋತ್ಸವ ದಿನ ಪರೇಡ್ ಆರಂಭದಿಂದ ಈವರೆಗೆ ತನ್ನದೇ ಆದಂತಹ ನಿಲುವನ್ನು ಇಟ್ಟುಕೊಂಡು ಪೆರೇಡ್ ನಡೆಯುತ್ತ ಬಂದಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ಪದ್ಧತಿಯಂತೆ ದೇಶದ ಒಟ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ 36 ರಾಜ್ಯಗಳೆಂದು ಪರಿಗಣಿಸಿ ಪ್ರತಿ ರಾಜ್ಯವು ಗಣರಾಜ್ಯೋತ್ಸವ ನಿಮಿತ್ತ ಸ್ತಬ್ಧಚಿತ್ರಗಳನ್ನು ಗಣರಾಜ್ಯೋತ್ಸವ ಪೆರೇಡ್ ಗೆ ಕಳುಹಿಸುವುದು ಪದ್ಧತಿ. ಆದರೆ ಪ್ರತಿ ವರ್ಷ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡಿಗೆ 12 ರಾಜ್ಯಗಳ ಸ್ತಬ್ಧ ಚಿತ್ರಗಳನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಅಂದರೆ 3 ವರ್ಷಕ್ಕೊಮ್ಮೆ ಪ್ರತಿ ರಾಜ್ಯಗಳಿಗೆ ಭಾಗವಹಿಸುವ ಅವಕಾಶವಿರುತ್ತದೆ.

36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇರುವ ನಮ್ಮ ದೇಶದಲ್ಲಿ ಪ್ರತಿ ರಾಜ್ಯವೂ ಪ್ರತಿವರ್ಷ ಪೆರೇಡ್ ನಲ್ಲಿ ಭಾಗವಹಿಸುವ ಅವಕಾಶವಿರುವುದಿಲ್ಲ. ಇದು ನಮ್ಮ ದೇಶದಲ್ಲಿ ಗಣರಾಜ್ಯೋತ್ಸವ ಆರಂಭವಾದಾಗಿನಿಂದ ನಡೆದುಬಂದ ಸತ್ಸಂಪ್ರದಾಯ ಮತ್ತು ನಿಯಾಮವಳಿ ಆಗಿರುತ್ತದೆ. ಈ ಸಂಪ್ರದಾಯದಂತೆ 2018 ಮತ್ತು 2021ರಲ್ಲಿ ಕೇರಳ ರಾಜ್ಯವು ತನ್ನ ಸ್ತಬ್ಧಚಿತ್ರಗಳೊಂದಿಗೆ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿತ್ತು.
ಈ ಪುನರಾವರ್ತಿತ ನಿಯಮದಂತೆ ಕಳೆದ ವರ್ಷಗಳಲ್ಲಿ ಭಾಗವಹಿಸಿದ ರಾಜ್ಯಗಳನ್ನು ಬಿಟ್ಟು ಉಳಿದ 12 ರಾಜ್ಯಗಳಿಗೆ ಈ ವರ್ಷ ಭಾಗವಹಿಸುವ ಅವಕಾಶವಿರುತ್ತದೆ. ಕಳೆದ ವರ್ಷ ಅಂದರೆ 2021ರಲ್ಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿರುವ ಕೇರಳ ರಾಜ್ಯಕ್ಕೆ ಈ ವರ್ಷ ನಿಯಾಮವಳಿಯಂತೆ ಅವಕಾಶವಿರುವುದಿಲ್ಲ. ಆದರೆ ಈ ನಿಯಮಾವಳಿ ತಿಳಿದಿದ್ದರೂ ಕೂಡ ಕೇರಳ ರಾಜ್ಯವು ನಾರಾಯಣ ಗುರುಗಳ ವಿಚಾರವನ್ನು ಮುಂದಿಟ್ಟುಕೊಂಡು ಅನವಶ್ಯಕ ವಿವಾದವನ್ನು ಹುಟ್ಟು ಹಾಕುತ್ತಿದೆ.
2021ರಲ್ಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ್ದ ಕೇರಳ ರಾಜ್ಯಕ್ಕೆ ಇನ್ನೂ ಮೂರು ವರ್ಷ ಬಿಟ್ಟು ಅಂದರೆ 2024ರಲ್ಲಿ ನಿಯಮಾವಳಿ ಪ್ರಕಾರ ಮತ್ತೊಮ್ಮೆ ಅವಕಾಶ ಎಂಬುದಾಗಿ ತಿಳಿದಿದ್ದರೂ ಕೇರಳ ಸರ್ಕಾರ ಈ ವರ್ಷವೂ ಭಾಗವಹಿಸುವ ಅವಕಾಶ ಕೋರಿದ್ದು ನಡೆದುಬಂದ ನಿಯಮಾವಳಿಯಂತೆ ಕೇಂದ್ರ ಸರ್ಕಾರ ಈ ವರ್ಷ ಅವಕಾಶವಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದೆ.
ಈ ಎಲ್ಲಾ ನಿಯಮಾವಳಿಗಳು ಗೊತ್ತಿರುವ ಕೇರಳ ರಾಜ್ಯವು ಶ್ರೀ ನಾರಾಯಣ ಗುರುಗಳ ವಿಚಾರವನ್ನು ಎಳೆದು ತಂದು ವಿವಾದವನ್ನು ಹುಟ್ಟು ಹಾಕುತ್ತಿರುವುದು ಶೋಭೆ ತರುವಂತದ್ದಲ್ಲ. ಕಮ್ಯುನಿಸ್ಟ್ ನಿಲುವು ಹೊಂದಿರುವ ಕೇರಳ ಸರಕಾರವು ಈ ಹಿಂದೆ ಹಿಂದೂ ದೇವಾಲಯಗಳ ಬಗ್ಗೆ ತೋರಿರುವ ನಿಲುವು ಹಿಂದೂ ಕಾರ್ಯಕರ್ತರ ನಿರಂತರ ಹತ್ಯೆಗಳು ಇಂತಹ ಹಲವಾರು ಹಿಂದೂ ವಿರೋಧಿ ನೀತಿಗಳಿಂದ ಕುಖ್ಯಾತಿ ಹೊಂದಿರುವ ಕಮ್ಯುನಿಸ್ಟರಿಂದ ಶ್ರೀ ನಾರಾಯಣ ಗುರುಗಳ ತತ್ವಾದರ್ಶವನ್ನು ನಾವು ಕಲಿಯಬೇಕಾಗಿಲ್ಲ. ನಾರಾಯಣ ಗುರುಗಳು ಎಲ್ಲರಿಗೂ ಪ್ರಾತಃ ಸ್ಮರಣೀಯರು ಹಾಗೂ ಪೂಜನೀಯರು. ಆರಂಭದಿಂದಲೂ ನಡೆದು ಬಂದಿರುವ ಸಂಪ್ರದಾಯ ಮತ್ತು ನಿಯಾಮವಳಿಯನ್ನು ತಿಳಿದುಕೊಂಡು ಕೇರಳ ಸರ್ಕಾರವು ವಿವಾದ ಮಾಡದೇ ನಮ್ಮ ದೇಶದ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕೆಂದು ಈ ಮೂಲಕ ಕೇರಳ ಸರಕಾರವನ್ನು ಆಗ್ರಹಿಸುತ್ತೇನೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
Several Congress leaders, including Siddaramaiah, BK Hariprasad and B Ramanath Rai, have strongly criticised the Union Government for rejecting the tableau of saint reformer Sree Narayana Guru proposed by the Kerala government to present during this year’s Republic Day parade in Delhi. Former chief minister Siddaramaiah said the Centre has insulted Sree Narayana Guru, a great social reformer, and it should tender an apology.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm