ಬ್ರೇಕಿಂಗ್ ನ್ಯೂಸ್
03-01-22 11:56 am HK Desk news ಕರ್ನಾಟಕ
ಬೆಂಗಳೂರು, ಜ.3 : ತಾಲಿಬಾನ್ ಸಿದ್ಧಾಂತ ಎನ್ನುವುದು ಧಾರ್ಮಿಕ ಕುರುಡುತನ. ಅಲ್ಪಸಂಖ್ಯಾತರ ಮತದ ಮೇಲೆ ಕಣ್ಣಿಟ್ಟುಕೊಂಡು ಕಾಂಗ್ರೆಸ್ ಈ ರೀತಿಯ ಕುರುಡುತನವನ್ನು ಪ್ರದರ್ಶಿಸುತ್ತಿದೆ. ಕಾಂಗ್ರೆಸಿಗರ ವರ್ತನೆಯನ್ನು ನೋಡಿದರೆ ತಾಲಿಬಾನಿಗರ ರೀತಿಯೇ ಕಾಣುತ್ತದೆ. ಈ ರೀತಿಯ ವರ್ತನೆಯಿಂದಾಗಿ ಬಹುಸಂಖ್ಯಾತ ಹಿಂದುಗಳು ಕಾಂಗ್ರೆಸನ್ನು ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸಿ.ಟಿ.ರವಿ, ಕಾಂಗ್ರೆಸ್ ಪಕ್ಷವು ಬಹುಸಂಖ್ಯಾತರ ಭಾವನೆಗಳಿಗೆ ಒಂದಂಶದ ಗೌರವವನ್ನೂ ನೀಡುತ್ತಿಲ್ಲ. ಕಾಂಗ್ರೆಸ್ ಹಳೆಯ ಸಾಮ್ರಾಜ್ಯಶಾಹಿ ಪದ್ಧತಿಯಲ್ಲೇ ಇದ್ದು, ಪ್ರಭುತ್ವದಿಂದ ಆಳಲ್ಪಡುತ್ತಿದೆ. ಕಾಲಕ್ಕೆ ತಕ್ಕಂತೆ ಬದಲಾಗುವ ಮಾನಸಿಕತೆಯನ್ನೂ ಬೆಳೆಸಿಕೊಳ್ಳದೆ ಹಳ್ಳ ಹಿಡಿದಿದೆ. ಬಿಜೆಪಿಯ ಪ್ರತಿ ನಡೆಯನ್ನು ವಿರೋಧಿಸುವುದನ್ನೇ ಕಾಂಗ್ರೆಸಿಗರು ಹವ್ಯಾಸ ಮಾಡಿಕೊಂಡಿರುವುದು ದುರದೃಷ್ಟಕರ ಎಂದು ಹೇಳಿದರು.
ಈವತ್ತಿನ ಕಾಂಗ್ರೆಸ್ ಅನ್ನುವುದು ಹಳೆಯ ಮಹಾತ್ಮ ಗಾಂಧಿ ಇದ್ದಾಗಿನ ಕಾಂಗ್ರೆಸ್ ಆಗಿ ಉಳಿದಿಲ್ಲ. ಈಗ ಇರುವುದು ಸೋನಿಯಾ ಗಾಂಧಿ ಪ್ರಣೀತ ಕಾಂಗ್ರೆಸ್. ಇತ್ತೀಚಿನ ಚುನಾವಣಾ ಫಲಿತಾಂಶಗಳನ್ನು ನೋಡಿಯಾದರೂ ಕಾಂಗ್ರೆಸಿಗರು, ತಮ್ಮ ನಿಲುವುಗಳನ್ನು ಬದಲಿಸಿಕೊಳ್ಳಬೇಕಿತ್ತು. ತಮ್ಮದೇ ನಿಲುವುಗಳನ್ನು ತೋರಿಸುತ್ತಾ ಮುನ್ನಡೆದರೆ, ಜನರೇ ಅವರಿಗೆ ಪಾಠ ಕಲಿಸುತ್ತಾರೆ. ಕಾಂಗ್ರೆಸಿಗರ ಭ್ರಷ್ಟಾಚಾರ, ಒಡೆದಾಳುವ ನೀತಿಯನ್ನು ಇಂದಿನ ಜನರು ಒಪ್ಪಿಕೊಳ್ಳವುದಿಲ್ಲ ಎಂದರು ಸಿಟಿ ರವಿ.
ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ, ಸರಕಾರ ದೇಗುಲದ ಆದಾಯಕ್ಕೆ ಕಣ್ಣು ಹಾಕುವುದು, ಅದರ ಮೇಲೆ ಪ್ರಭುತ್ವ ಸಾಧಿಸುವುದು ಅಂದರೆ, ಸ್ವಾತಂತ್ರ್ಯದ ಕಲ್ಪನೆಯನ್ನೇ ವಿರೋಧಿಸಿದಂತೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರು ದೇಗುಲದ ಮೇಲೆ ಕೈಯಿಟ್ಟರೆ ಬಿಜೆಪಿಯವರು ಭಸ್ಮವಾಗಲಿದ್ದಾರೆ ಎಂದಿದ್ದಾರೆ. ಆದರೆ, ಅವರಿಗೆ ಒಂದು ಹೇಳಬೇಕಾಗುತ್ತದೆ. ಈಗಲೇ ಸಿಬಿಐ, ಇಡಿಗಳಿಂದ ತನಿಖೆ ಎದುರಿಸುತ್ತಿರುವ ಡಿಕೆಶಿಯವರೇ ಭಸ್ಮಾಸುರ ಇದ್ದಂತೆ. ಯಾರ ತಲೆ ಮೇಲೆ ಕೈಯಿಟ್ಟರೂ ಭಸ್ಮ ಆಗುತ್ತಿದ್ದಾರೆ. ಜೊತೆಗಿದ್ದವರೇ ಕೈಬಿಟ್ಟು ಹೋಗುತ್ತಿದ್ದಾರೆ. ಇನ್ನು ತನ್ನದೇ ತಲೆ ಮೇಲೆ ಕೈಯಿಡುವ ಸ್ಥಿತಿ ಬರಲಿದೆ, ತನ್ನನ್ನೇ ಭಸ್ಮ ಮಾಡಿಕೊಳ್ಳಲಿದ್ದಾರೆ ಎಂದು ವ್ಯಂಗ್ಯವಾಡಿದರು.
“The ideology of Taliban is religious blindness. Congress follows blindness for the sake of minority votes. The attitude of Congress is in line of Taliban. Majority Hindus are not in a position to believe Congress,” said National chief secretary of BJP C T Ravi. Speaking at a press conference in the city on Sunday, Ravi said, “Congress party is not giving an ounce of respect to the feelings of majority. The party which is led by dynasty, does not have the mental status of changing according to times. It is unfortunate that Congress has the habit of opposing every change the BJP tries to implement.
02-02-26 11:02 pm
HK News Desk
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
ಆಸ್ತಿ ವಿಚಾರದಲ್ಲಿ ಗಲಾಟೆ ; ಬಾವನಿಗೆ ಕತ್ತಿಯೇಟು, ಅ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
02-02-26 10:40 pm
HK News Desk
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 10:37 pm
Bangalore Correspondent
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm