ಬ್ರೇಕಿಂಗ್ ನ್ಯೂಸ್
27-12-21 01:01 pm HK Desk news ಕರ್ನಾಟಕ
ರಾಯಚೂರು, ಡಿ.27 : ಮತಾಂತರ ನಿಷೇಧ ಕಾಯ್ದೆಯ ನೆಪದಲ್ಲಿ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದ ಜನರನ್ನು ಅಲೆಮಾರಿಗಳು, ಭಿಕ್ಷುಕರನ್ನು ಎಂದು ತೋರಿಸಿ ಅವಮಾನಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಬಿಜೆಪಿಯ ಎಲ್ಲ ಶಾಸಕರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಆರ್.ಮಾನಯ್ಯ ಎಂಬವರು ದೂರು ನೀಡಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಎಸ್ಸಿ- ಎಸ್ಟಿ ಸಮುದಾಯದ ಜನರು ಹಣ, ಅಕ್ಕಿ, ಬಟ್ಟೆ ಇನ್ನಿತರ ದೇಣಿಗೆಯ ಆಮಿಷಕ್ಕೊಳಗಾಗಿ ಮತಾಂತರ ಆಗುತ್ತಿದ್ದಾರೆ ಎಂದು ಸದನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಬಿಂಬಿಸಿದ್ದು, ಆಮೂಲಕ ಅವರನ್ನು ಹೀನಾಯವಾಗಿ ತೋರಿಸಿದ್ದಾರೆ ಎಂದು ದೂರಿದ್ದಾರೆ. ಹಾಗಾಗಿ ಮುಖ್ಯಮಂತ್ರಿ, ಗೃಹ ಸಚಿವ ಮತ್ತು ಬಿಜೆಪಿ ಶಾಸಕರ ವಿರುದ್ಧ ಜಾತಿ ನಿಂದನೆ ಕಾಯ್ದೆಯಡಿ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗೃಹ ಸಚಿವರು ಮಸೂದೆಯ ಉದ್ದೇಶ ಮತ್ತು ವಿವರಗಳನ್ನು ಸದನಕ್ಕೆ ಮಂಡಿಸುತ್ತಿದ್ದಾಗ ಬಿಜೆಪಿ ಶಾಸಕರು ಮೇಜು ಕುಟ್ಟಿ ಅನುಮೋದಿಸಿದ್ದಾರೆ. ಈ ರೀತಿಯ ಕಾಯ್ದೆ ತಂದುದನ್ನು ಬಿಜೆಪಿ ಶಾಸಕರು ಅಭಿನಂದಿಸಿದ್ದು, ಹಾಗಾಗಿ ಜಾತಿ ನಿಂದನೆ ಮಾಡಿರುವುದರಲ್ಲಿ ಅವರ ಪಾತ್ರವೂ ಇದೆ. ಎಲ್ಲರ ವಿರುದ್ಧವೂ ಕೇಸು ದಾಖಲಿಸಬೇಕೆಂದು ಠಾಣಾಧಿಕಾರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಸರಕಾರ ಮಂಡಿಸಿದ್ದು, ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ವಿರೋಧ ನಡುವೆಯೂ ಅಂಕಿತ ಪಡೆದಿದೆ. ಆದರೆ ವಿಧಾನ ಪರಿಷತ್ತಿನಲ್ಲಿ ಮಂಡನೆ ಸಾಧ್ಯವಾಗಿರಲಿಲ್ಲ. ಮುಂದಿನ ಫೆಬ್ರವರಿಯಲ್ಲಿ ನಡೆಯುವ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಮಸೂದೆ ಮಂಡಿಸಿ ಅನುಮತಿ ಪಡೆಯುವ ವಿಶ್ವಾಸದಲ್ಲಿ ಬಿಜೆಪಿ ಸರಕಾರ ಇದೆ.
A complaint has been lodged against the Chief Minister Basavaraj Bommai, state Home Minister Araga Jnanendra, Speaker Vishveshwara Hegde Kageri and all BJP legislators in connection with presenting of the controversial Karnataka Protection of Right to Freedom of Religion Bill, 2021 popularly known as Anti-conversion Bill.
08-04-26 09:35 pm
HK News Staffer
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 07:48 pm
HK News Staffer
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm