ಬ್ರೇಕಿಂಗ್ ನ್ಯೂಸ್
23-12-21 09:30 pm HK Desk news ಕರ್ನಾಟಕ
ಬೆಂಗಳೂರು, ಡಿ.23 : ವಿಪಕ್ಷಗಳ ಗದ್ದಲ, ಧರಣಿಯ ನಡುವೆಯೇ ರಾಜ್ಯ ಬಿಜೆಪಿ ಸರಕಾರ ಮತಾಂತರ ತಡೆಯುವ ಉದ್ದೇಶದ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ವಿಧೇಯಕವನ್ನು ಧ್ವನಿ ಮತದಿಂದ ವಿಧಾನಸಭೆಯಲ್ಲಿ ಅಂಗೀಕರಿಸಿದೆ.
ಎರಡು ದಿನಗಳ ಕಾಲ ಅಧಿವೇಶನದಲ್ಲಿ ತೀವ್ರ ಚರ್ಚೆ ನಡೆದ ಬಳಿಕ ಗುರುವಾರ ಸಂಜೆ ಮಸೂದೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮತಕ್ಕೆ ಹಾಕಿದರು. ಆದರೆ ಮಸೂದೆಯನ್ನು ಮತಕ್ಕೆ ಹಾಕುವುದನ್ನು ವಿರೋಧಿಸಿ ವಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ತೀವ್ರ ಗದ್ದಲ ಎಬ್ಬಿಸಿದರು. ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದಂತೆಯೇ ಸ್ವೀಕರ್, ಮಸೂದೆಯನ್ನು ಧ್ವನಿ ಮತದಿಂದ ಅಂಗೀಕರಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಸದನದಲ್ಲಿ ಹೆಚ್ಚು ಬಿಜೆಪಿ ಸದಸ್ಯರು ಇರುವುದರಿಂದ ಧ್ವನಿ ಮತದಿಂದ ಮಸೂದೆ ವಿಧಾನಸಭೆಯ ಅಂಕಿತ ಪಡೆದಿದೆ.
ವಿಪಕ್ಷಗಳ ವಿರೋಧ ಮಧ್ಯೆಯೇ ಸದನವು ಮಸೂದೆಯನ್ನು ಅಂಗೀಕರಿಸಿದ್ದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕಟುವಾಗಿ ವಿರೋಧಿಸಿದ್ದಾರೆ. ಬಿಜೆಪಿ ಸರಕಾರ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ತೋರಿಸಿದೆ ಎಂದು ಕಿಡಿಕಾರಿದ್ದಾರೆ. ಮಸೂದೆ ಇನ್ನು ವಿಧಾನ ಪರಿಷತ್ತಿನ ಅಂಗೀಕಾರ ಪಡೆಯಬೇಕಿದೆ. ಪರಿಷತ್ತಿನಲ್ಲಿ ಶುಕ್ರವಾರ ಈ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ.

ಕಾಂಗ್ರೆಸ್ ಗದ್ದಲ, ವಿರೋಧ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಾವು ಹಿಂದುಳಿದ ವರ್ಗ, ಎಸ್ಸಿ – ಎಸ್ಟಿ ಸಮುದಾಯದ ಜನರ ಹಿತವನ್ನು ಕಾಯುವುದಕ್ಕಾಗಿ ಈ ಮಸೂದೆ ತಂದಿದ್ದೇವೆ. ಆದರೆ, ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದ್ದು, ಅವರು ಎಸ್ಸಿ- ಎಸ್ಟಿ ಸಮುದಾಯಗಳ ವಿರೋಧಿಯಾಗಿ ನಡೆದುಕೊಂಡಿದೆ. ಬಲವಂತದ ಮತಾಂತರ ಪಿಡುಗಿನಿಂದ ಅತಿ ಹೆಚ್ಚು ಬಾಧಿತರಾದವರು ದಲಿತರು ಎಂದು ಹೇಳಿದರು.
ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಅಂಗೀಕಾರ ಆಗಿರುವುದಕ್ಕಾಗಿ ಬಿಜೆಪಿ ಶಾಸಕರನ್ನು ಮಾಜಿ ಸಿಎಂ ಯಡಿಯೂರಪ್ಪ ಅಭಿನಂದಿಸಿದ್ದಾರೆ. ವಂಚನೆಯ, ಬಲವಂತದ, ಆಮಿಷದ ಮತಾಂತರ ಎನ್ನುವ ಪಿಡುಗನ್ನು ಕಿತ್ತೊಗೆಯಬೇಕು ಅನ್ನುವುದು ಪಕ್ಷದ ಬದ್ಧತೆ. ಈ ನಿಟ್ಟಿನಲ್ಲಿ ವಿಧೇಯಕದ ಅನುಮೋದನೆ ಚರಿತ್ರಾರ್ಹವಾಗಿದೆ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
Despite not getting support from the opposition in the Assembly and from several quarters in the society, the ruling BJP government in Karnataka passed the Protection of Right to Freedom of Religion Bill, 2021, commonly referred to as Anti-Conversion Bill, on Thursday by voice vote in the state legislative assembly. The bill will still need to be approved by the Legislative Council, where BJP doesn't have a majority.
02-02-26 09:52 pm
HK News Desk
ಆಸ್ತಿ ವಿಚಾರದಲ್ಲಿ ಗಲಾಟೆ ; ಬಾವನಿಗೆ ಕತ್ತಿಯೇಟು, ಅ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
ಮಾವನ ಮಗನ ಜೊತೆ ಎಂಗೇಜ್ಮೆಂಟ್ ; ಮದುವೆಗೆ ತಿಂಗಳು...
02-02-26 03:02 pm
02-02-26 11:59 am
HK News Desk
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 12:16 pm
HK News Desk
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm