ಬ್ರೇಕಿಂಗ್ ನ್ಯೂಸ್
21-12-21 11:03 pm HK Desk news ಕರ್ನಾಟಕ
ಬೆಳಗಾವಿ, ಡಿ.21 : ಪ್ರತಿಪಕ್ಷಗಳ ಸಭಾತ್ಯಾಗ, ಗದ್ದಲದ ನಡುವೆಯೇ ವಿಧಾನಸಭಾ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಮಂಡನೆ ಮಾಡಲಾಗಿದೆ. ಕರ್ನಾಟಕ ಧಾರ್ಮಿಕ ಹಕ್ಕು ರಕ್ಷಣಾ ವಿಧೇಯಕ- 2021 ಅನ್ನು ವಿಪಕ್ಷ ವಿರೋಧದ ನಡುವೆಯೇ ಬಿಜೆಪಿ ಸರಕಾರ ಅಧಿವೇಶನದಲ್ಲಿ ಮಂಡಿಸಿದ್ದು ಬುಧವಾರ ಚರ್ಚೆಗೆ ಬರಲಿದೆ.
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕವನ್ನು ತರಾತುರಿಯಲ್ಲಿ ಮಂಡಿಸಿದ್ದು, ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ಎತ್ತಿದ್ದಾರೆ. ಅಜೆಂಡಾದಲ್ಲಿ ಇಲ್ಲದ ವಿಚಾರವನ್ನು ಹೇಗೆ ಮಂಡನೆ ಮಾಡಿದ್ರಿ. ಇದು ಆರ್ಟಿಕಲ್ 25ರ ಪ್ರಕಾರ ಕಾನೂನು ಉಲ್ಲಂಘನೆ ಎಂದು ಹರಿಹಾಯ್ದಿದ್ದಾರೆ.

ಹೊಸ ಕಾಯ್ದೆ ಪ್ರಕಾರ, ಬಲವಂತ, ಆಮಿಷ, ಇನ್ನಿತರ ತಪ್ಪಾದ ಉದ್ದೇಶಗಳಿಂದ ಯಾವುದೇ ವ್ಯಕ್ತಿಯನ್ನು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡುವುದನ್ನು ವಿರೋಧಿಸುತ್ತದೆ. ಈಗಾಗ್ಲೇ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್ ನಲ್ಲಿ ಜಾರಿಗೆ ತಂದಿರುವ ಇದೇ ರೀತಿಯ ಕಾನೂನಿಗಿಂತ ಕರ್ನಾಟಕದ ಮಸೂದೆ ಹೆಚ್ಚು ಕಠಿಣವಾಗಿರಲಿದೆ ಎನ್ನಲಾಗುತ್ತಿದೆ. ಈ ಕಾಯ್ದೆಯದಲ್ಲಿ ಕನಿಷಅಠ 3ರಿಂದ 5 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಈ ರೀತಿಯ ಮತಾಂತರ ಆದಲ್ಲಿ ಸಂಬಂಧಿತ ವ್ಯಕ್ತಿಯ ಹೆತ್ತವರು, ಸೋದರ- ಸೋದರಿ ಹೀಗೆ ರಕ್ತ ಸಂಬಂಧ ಹೊಂದಿರುವ ಯಾರು ಕೂಡ ದೂರು ನೀಡಲು ಸಾಧ್ಯವಿದ್ದು, ಪೊಲೀಸರು ಎಫ್ಐಆರ್ ದಾಖಲಿಸಬೇಕಾಗುತ್ತದೆ.
ಹೊಸ ಕಾಯ್ದೆಯನ್ನು ಸೋಮವಾರ ಸಚಿವ ಸಂಪುಟದಲ್ಲಿ ಚರ್ಚಿಸಿ, ಪಾಸ್ ಮಾಡಲಾಗಿತ್ತು. ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಈಗಾಗ್ಲೇ ಕಾಂಗ್ರೆಸ್ ಹೇಳಿದ್ದು, ಬುಧವಾರ ತೀವ್ರ ಗದ್ದಲಕ್ಕೆ ಕಾರಣವಾಗುವ ಸಾಧ್ಯತೆಯಿದೆ.
The Karnataka government on Tuesday tabled the controversial Karnataka Protection of Right to Freedom of Religion Bill, 2021 popularly known as Anti-Conversion bill in the assembly in Suvarna Vidhan Soudha at Belagavi. The discussion on the proposed bill will take place on Wednesday.
02-02-26 09:52 pm
HK News Desk
ಆಸ್ತಿ ವಿಚಾರದಲ್ಲಿ ಗಲಾಟೆ ; ಬಾವನಿಗೆ ಕತ್ತಿಯೇಟು, ಅ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
ಮಾವನ ಮಗನ ಜೊತೆ ಎಂಗೇಜ್ಮೆಂಟ್ ; ಮದುವೆಗೆ ತಿಂಗಳು...
02-02-26 03:02 pm
02-02-26 11:59 am
HK News Desk
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 12:16 pm
HK News Desk
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm