ಬ್ರೇಕಿಂಗ್ ನ್ಯೂಸ್
14-11-21 03:34 pm H.K, Bengaluru Desk ಕರ್ನಾಟಕ
ಬೆಂಗಳೂರು, ನ.14: ಬಿಟ್ ಕಾಯಿನ್ ಹಗರಣದಲ್ಲಿ ಯಾರೇ ಭಾಗಿಯಾದ್ದರೂ ಬಿಟ್ಟುಬಿಡುವ ಪ್ರಶ್ನೆಯೇ ಇಲ್ಲ. ಯಾರೇ ಇದ್ದರೂ ಮುಲಾಜಿಲ್ಲದೆ ಕ್ರಮ ಜರುಗಿಸಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನರುಚ್ಚರಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಕಾಂಗ್ರೆಸಿನವರು ಯಾರೋ ಇಬ್ಬರು ಇದ್ದಾರೆ ಎನ್ನುತ್ತಿದ್ದಾರೆ. ಆ ಇಬ್ಬರು ಯಾರೆಂದು ಹೇಳಲಿ. ನಾವು ಕ್ರಮ ಜರುಗಿಸುತ್ತೇವೆ. ಈ ಪ್ರಕರಣದಲ್ಲಿ ಯಾರಿಗಾದ್ರೂ ಮೋಸ ಆಗಿದ್ದರೆ, ದೇಶಕ್ಕೆ ನಷ್ಟ ಆಗಿದ್ದರೆ ಅದರ ಬಗ್ಗೆ ಮಾಹಿತಿ ನೀಡಲಿ. ನಾವು ತನಿಖೆ ನಡೆಸುತ್ತಿದ್ದೇವೆ. ನಿಮ್ಮದ್ದನ್ನು ಮುಚ್ಚಿಟ್ಟುಕೊಳ್ಳಲು ಯಾರದ್ದೋ ಹೆಸರನ್ನು ತೇಲಿ ಬಿಡುವುದು ಸರಿಯಲ್ಲ ಎಂದು ಹೇಳಿದರು.
ಬಿಟ್ ಕಾಯಿನ್ ಪ್ರಕರಣವನ್ನು ಭೇದಿಸಿದ್ದೇ ನಾವು. ಆರೋಪಿಯನ್ನು ಬಂಧಿಸಿದ್ದು, ಚಾರ್ಜ್ ಶೀಟ್ ಹಾಕಿದ್ದು ನಾವು. ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ. ಈ ಬಗ್ಗೆ ಇಡಿ ತನಿಖೆಗೆ ಶಿಫಾರಸು ಮಾಡಿದ್ದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಿಬಿಐ, ಇಂಟರ್ ಪೋಲ್ ನವರು ಹಲವಾರು ಮಾಹಿತಿ ಕೇಳಿದ್ದಾರೆ, ನಾವು ಮಾಹಿತಿಗಳನ್ನು ಕೊಟ್ಟಿದ್ದೇವೆ. ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರ ಪ್ರಶ್ನೆಗಳಿಗೆ ನಾವು ಉತ್ತರ ಕೊಟ್ಟಿದ್ದೇವೆ. ಅವರೇ ಹೇಳುವಂತೆ, 2016ರಲ್ಲಿ ಶ್ರೀಕಿ ಹ್ಯಾಕ್ ಮಾಡಿದ್ದಾನೆ ಅಂದರೆ, ಆಗಲೇ ಯಾಕೆ ಇವರು ತನಿಖೆ ಮಾಡಿರಲಿಲ್ಲ. ಈ ಪ್ರಕರಣಕ್ಕೂ ರಾಜ್ಯಕ್ಕೂ ಸಂಬಂಧ ಇದ್ದರೆ ತನಿಖೆ ನಡೆಸಬೇಕಿತ್ತು ಎಂದು ಸಿಎಂ ಬೊಮ್ಮಾಯಿ ಹೇಳಿದರು.
2018ರಲ್ಲಿ ನೀವು ಆರೋಪಿಯನ್ನು ಬಿಟ್ಟು ಕಳುಹಿಸಿದ್ದೀರಿ. ನಿರೀಕ್ಷಣಾ ಜಾಮೀನು ಪಡೆದರೂ ವಿಚಾರಣೆ ನಡೆಸಬಾರದು ಅಂತೇನಿಲ್ಲ. 2020ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ ಹ್ಯಾಕಿಂಗ್ ಪ್ರಕರಣ ಗೊತ್ತಾಗಿದೆ. ನೀವು ಅಧಿಕಾರದಲ್ಲಿದ್ದಾಗ ಇವೆಲ್ಲದಕ್ಕೂ ಅವಕಾಶ ನೀಡಿದ್ದಿರಿ. ಈಗ ನಾವು ಬಂಧಿಸಿ ವಿಚಾರಣೆ ನಡೆಸುವಾಗ ನಮಗೇ ಪ್ರಶ್ನೆ ಹಾಕುತ್ತೀರಾ ಎಂದು ಕೇಳಿದರು.
ಏನೋ 5 ಸಾವಿರ ಬಿಟ್ ಕಾಯಿನ್ ಕಳವಾಗಿದೆ ಅಂತ ಯಾವ ಆಧಾರದಲ್ಲಿ ನೀವು ಹೇಳಿದ್ದೀರಿ. ಒಂದು ಟ್ವಿಟರ್ ಹ್ಯಾಂಡಲ್ ಆರೋಪ ಮಾಡಿದ್ದನ್ನೇ ಆಧಾರವಾಗಿಟ್ಟು ಈ ಮಾತು ಹೇಳೋದಾದ್ರೆ ನಿಮ್ಮ ಚಿಂತನೆ ಎಷ್ಟು ದಿವಾಳಿಯಾಗಿದೆ ಎಂದು ಗೊತ್ತಾಗುತ್ತದೆ. ನಿಶ್ಚಿತ ಪುರಾವೆ, ಸಾಂದರ್ಭಿಕ ಸಾಕ್ಷ್ಯಗಳನ್ನು ಇಟ್ಟುಕೊಂಡೇ ಮಾತನಾಡಬೇಕಿತ್ತು ಎಂದು ಬೊಮ್ಮಾಯಿ, ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾಗೆ ತಿರುಗೇಟು ನೀಡಿದ್ದಾರೆ.
Under fire from the Congress over the alleged Bitcoin scam, the Chief Minister Basavaraj Bommai on November 14 hit back at the Congress by stating that he need not take lessons from those who had let off the accused in the Bitcoin scam charged with hacking earlier.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm