ಬ್ರೇಕಿಂಗ್ ನ್ಯೂಸ್
18-10-21 05:42 pm Headline Karnataka News Network ಕರ್ನಾಟಕ
ಬೆಂಗಳೂರು, ಅ.18: ನೈತಿಕ ಪೊಲೀಸ್ ಗಿರಿಯ ಬಗ್ಗೆ ಸಮರ್ಥಿಸಿ ಹೇಳಿಕೆ ನೀಡಿದ್ದ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ವಕೀಲರ ವೇದಿಕೆಯೊಂದು ಲಾಯರ್ ನೋಟೀಸ್ ಜಾರಿ ಮಾಡಿದೆ. ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್ ಜಸ್ಟೀಸ್ ಎನ್ನುವ ಹೆಸರಿನ ವಕೀಲರ ವೇದಿಕೆಯ ವತಿಯಿಂದ ನೋಟೀಸ್ ನೀಡಲಾಗಿದ್ದು, ಹತ್ತು ಪುಟಗಳ ನೋಟೀಸಿನಲ್ಲಿ ಮುಖ್ಯಮಂತ್ರಿಗೆ ಹಲವು ಪ್ರಶ್ನೆಗಳನ್ನು ಹಾಕಿದೆ.
ನೈತಿಕ ಪೊಲೀಸ್ ಗಿರಿ ನೆಪದಲ್ಲಿ ಕೋಮು ಸಂಘರ್ಷಕ್ಕೆ ಎಡೆಮಾಡುವ ಸನ್ನಿವೇಶ ಇರುವಾಗ ನೀವು ಸಾಮಾಜಿಕ ನೆಲೆಯಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಸಹಜ ಎನ್ನುವ ರೀತಿ ಸಮರ್ಥನೆ ಮಾಡಿದ್ದು ಎಷ್ಟು ಸರಿ. ಧರ್ಮದ ಹೆಸರಲ್ಲಿ ಈ ರೀತಿಯ ಕೃತ್ಯಗಳನ್ನು ನಿಮ್ಮ ಹೇಳಿಕೆಯ ಮೂಲಕ ಸಾಮಾಜಿಕ ಒಪ್ಪಿಗೆ ನೀಡಿದಂತಾಗಿಲ್ಲವೇ ಎಂದು ಪ್ರಶ್ನೆ ಮಾಡಲಾಗಿದೆ. ಕಾನೂನು ಪಾಲನೆಗೆ ಪೊಲೀಸರು, ಮತ್ತಿತರ ವ್ಯವಸ್ಥೆಗಳಿರುವಾಗ ಒಂದು ಗುಂಪು ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ಹೇಗೆ ಸಮರ್ಥನೆ ಮಾಡುತ್ತೀರಿ ಎಂದು ಪ್ರಶ್ನೆ ಎತ್ತಲಾಗಿದೆ.
ಅ.13ರಂದು ಮಂಗಳೂರಿಗೆ ತೆರಳಿದ್ದ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ, ಮಾಧ್ಯಮದ ಮಂದಿ ಕೇಳಿದ ಪ್ರಶ್ನೆಗೆ ನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸುವ ರೀತಿ ಹೇಳಿಕೆ ನೀಡಿದ್ದರು. ಸಮಾಜ ಎಂದ ಮೇಲೆ ನಾವು ಸಾಮಾಜಿಕ ಜವಾಬ್ದಾರಿಗಳನ್ನು ಹೊಂದಿರಬೇಕಾಗುತ್ತದೆ. ಜನರ ಭಾವನೆಗಳಿಗೆ ಧಕ್ಕೆಯಾದ ಸಂದರ್ಭದಲ್ಲಿ ಕ್ರಿಯೆಗೆ ಪ್ರತಿಕ್ರಿಯೆಗಳು ಬರುವುದು ಸಹಜ. ಸಮಾಜದಲ್ಲಿ ಕಾನೂನು ಪಾಲನೆಯ ಜೊತೆಗೆ ಸಾಮರಸ್ಯ ಕಾಪಾಡುವುದು ಕೂಡ ಸರಕಾರದ ಹೊಣೆಯಾಗಿರುತ್ತದೆ. ಇದಕ್ಕಾಗಿ ಸಮಾಜದ ಎಲ್ಲರ ಸಹಕಾರ ಬೇಕಾಗುತ್ತದೆ. ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಪಾಲನೆ ಮಾಡದೇ ಇದ್ದಾಗ ಈ ರೀತಿಯ ಪ್ರತಿಕ್ರಿಯೆಗಳು ಬರುತ್ತವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ನೈತಿಕ ಪೊಲೀಸ್ ಗಿರಿ ಎನ್ನುವುದು ಸಹಜ ಪ್ರಕ್ರಿಯೆ ಎಂದಿದ್ದರು. ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆಗೆ ಭಾರೀ ಟೀಕೆ ಕೇಳಿಬಂದಿತ್ತು.
ಈ ಬಗ್ಗೆ ಲಾಯರ್ ನೋಟೀಸಿನಲ್ಲಿ ಆಕ್ಷೇಪಿಸಲಾಗಿದ್ದು, ಕ್ರಿಯೆಗೆ ಪ್ರತಿಕ್ರಿಯೆ ಎನ್ನುವ ಮೂಲಕ ಮುಖ್ಯಮಂತ್ರಿಯವರು ಧರ್ಮದ ಹೆಸರಲ್ಲಿ ನಡೆಸುತ್ತಿರುವ ಸೋ ಕಾಲ್ಡ್ ಮೋರಲ್ ಪೋಲೀಸಿಂಗ್ ಅನ್ನು ಸಹಜ ಪ್ರಕ್ರಿಯೆ ಎಂದಿದ್ದಾರೆ. ಇಂಥ ಹೇಳಿಕೆಯ ಮೂಲಕ ಈ ರೀತಿಯ ಕೃತ್ಯ ಎಸಗುವರಿಗೆ ಇದೊಂದು ಮೂಲಭೂತ ಹಕ್ಕು ಎನ್ನುವಂತೆ ಸಿಎಂ ಬೊಮ್ಮಾಯಿ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಹೇಳಿದ್ದಾರೆ. ಈ ವೇದಿಕೆಯಲ್ಲಿ ದೇಶಾದ್ಯಂತ ಇರುವ ವೃತ್ತಿಪರ ವಕೀಲರು, ಕಾನೂನು ವಿದ್ಯಾರ್ಥಿಗಳು ಸದಸ್ಯರಾಗಿದ್ದಾರೆ. ನೋಟೀಸ್ ಮೂಲಕ, ಮುಖ್ಯಮಂತ್ರಿಯವರು ತಮ್ಮ ಹೇಳಿಕೆಯನ್ನು ಹಿಂಪಡೆದು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹ ಮಾಡಿದ್ದಾರೆ.
The All-India Lawyers’ Association for Justice has served a notice to the Chief Minister of Karnataka, asking him to withdraw his recent statements made in Mangaluru ‘justifying’ moral policing. The notice says that the statements were in violation of his oath to the Constitution, that the CM has failed to uphold the Constitution, and that he has failed to comply with the orders of the Supreme Court on inter-caste and inter-faith marriages and on lynching.
02-02-26 12:18 pm
HK News Desk
FM Sitharaman, Mohandas Pai, PM Modi, C.J. Ro...
31-01-26 11:05 pm
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
02-02-26 11:59 am
HK News Desk
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
01-02-26 10:29 pm
Mangalore Correspondent
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
02-02-26 12:16 pm
HK News Desk
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm