ಬ್ರೇಕಿಂಗ್ ನ್ಯೂಸ್
16-10-21 02:52 pm Bengaluru Correspondent ಕರ್ನಾಟಕ
ಬೆಂಗಳೂರು, ಅ.16: ಮತಾಂತರ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಾಜ್ಯದಲ್ಲಿರುವ ಮಿಶನರಿಗಳು ಮತ್ತು ಚರ್ಚ್ ಗಳ ಬಗ್ಗೆ ಸರ್ವೇ ನಡೆಸಲು ಮುಂದಾಗಿರುವುದನ್ನು ಬೆಂಗಳೂರು ಆರ್ಚ್ ಬಿಷಪ್ ವಿರೋಧಿಸಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬೆಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆವರೆಂಡ್ ಪೀಟರ್ ಮಚಾದೋ ಅವರು, ಈ ರೀತಿಯ ಸರ್ವೇಯಿಂದ ಯಾವುದೇ ಪ್ರಯೋಜನ ಸಿಗಲಾರದು. ಬದಲಿಗೆ, ಇಂಥ ಸರ್ವೇ ಕಾರ್ಯದಿಂದ ಕೆಲವೊಂದು ಚರ್ಚ್, ಪಾದ್ರಿಗಳು ಮತ್ತು ಕ್ರೈಸ್ತ ಸನ್ಯಾಸಿನಿಯರು ಕೋಮುವಾದಿ ಶಕ್ತಿಗಳಿಗೆ ಟಾರ್ಗೆಟ್ ಆಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ಗಣತಿಯನ್ನು ಮಾಡಲು ಆದೇಶ ಮಾಡಲಾಗಿದೆ ಎಂಬುದನ್ನು ಮಾಧ್ಯಮಗಳಿಂದ ತಿಳಿದುಬಂದಿದೆ. ಆದರೆ, ಇಂಥ ಗಣತಿಯನ್ನು ಕೇವಲ ಚರ್ಚ್ ಮತ್ತು ಕ್ರೈಸ್ತ ಪಾದ್ರಿಗಳನ್ನು ಮಾತ್ರ ಗುರಿಯಾಗಿಟ್ಟು ನಡೆಸುತ್ತಿರುವುದೇಕೆ ? ಈ ರೀತಿಯ ನಿರ್ಧಾರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಂತಿ, ಸುವ್ಯವಸ್ಥೆ ಹಾಳು ಮಾಡುವ ಕೋಮುವಾದಿ ಶಕ್ತಿಗಳ ಒತ್ತಡಕ್ಕೆ ಮಣಿದಿರುವುದು ಸ್ಪಷ್ಟವಾಗುತ್ತದೆ. ಕ್ರೈಸ್ತ ಸಮುದಾಯ ನಡೆಸುತ್ತಿರುವ ಶಾಲೆ, ಕಾಲೇಜು, ಆಸ್ಪತ್ರೆಗಳ ಮೂಲಕ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗಿಸಿರುವುದನ್ನು ಸರಕಾರ ಗಮನಿಸಬೇಕು. ಇಂಥ ಸಂಸ್ಥೆಗಳಲ್ಲಿ ಯಾರನ್ನಾದರೂ ಮತಾಂತರ ಮಾಡಲಾಗಿದೆಯೇ ಎಂದು ಪ್ರಶ್ನೆ ಮಾಡಿರುವ ಆರ್ಚ್ ಬಿಷಪ್, ಕ್ರೈಸ್ತರು ಚರ್ಚ್ ಗಳಲ್ಲಿ ಮತಾಂತರ ಮಾಡುವುದೇ ಆಗಿದ್ದರೆ ದೇಶದಲ್ಲಿ ಕ್ರೈಸ್ತರ ಜನಸಂಖ್ಯೆ ಪ್ರತಿ ವರ್ಷ ಯಾಕೆ ಕಡಿಮೆಯಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ನಾವು ಎಂದಿಗೂ ಬಲವಂತದ ಮತಾಂತರವನ್ನು ಒಪ್ಪುವುದಿಲ್ಲ. ಸಂವಿಧಾನದ ಆಶಯಗಳನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ಸಂವಿಧಾನದ ಪರಿಚ್ಛೇದ 25ರ ಪ್ರಕಾರ (ಕಲಂ 26, 29 ಮತ್ತು 30) ದೇಶದ ಯಾವುದೇ ನಾಗರಿಕ ತನಗೆ ಇಷ್ಟಪಟ್ಟ ಧಾರ್ಮಿಕ ಆಚರಣೆ, ನಂಬಿಕೆಯನ್ನು ಪಾಲಿಸಲು ಸ್ವತಂತ್ರನಿದ್ದಾನೆ. ಈ ಕಾನೂನಿನಡಿ ತಪ್ಪು ಮಾಡಿದವರನ್ನು ಶಿಕ್ಷಿಸುವುದಕ್ಕೂ ಅವಕಾಶ ಇದ್ದ ಮೇಲೆ ಪ್ರತ್ಯೇಕ ಮತಾಂತರ ನಿಷೇಧ ಕಾಯ್ದೆ ತರುವ ಅಗತ್ಯ ಏನಿದೆ ಎಂದು ಬಿಷಪ್ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಈ ರೀತಿಯ ಕಾನೂನು ನಿರಪರಾಧಿಗಳನ್ನು ಶೋಷಣೆ ಮಾಡಲು ದಾರಿ ಮಾಡುತ್ತದೆ. ಇತ್ತೀಚೆಗೆ ಮದ್ರಾಸ್ ಕೋರ್ಟ್ ತೀರ್ಪು ನೀಡಿದ್ದು, ಕೇವಲ ಚರ್ಚ್ ಗೆ ತೆರಳುವುದು ಮತ್ತು ಅಲ್ಲಿ ಕ್ರಿಸ್ತಿಯನ್ ಸಿಂಬಲ್ ಪ್ರದರ್ಶನ ಮಾಡಿದ ಮಾತ್ರಕ್ಕೆ ಮತಾಂತರ ಆಗಿದ್ದಾನೆ ಎಂದರ್ಥವಲ್ಲ ಎಂದಿದೆ. ಕ್ರಿಸ್ತಿಯನ್ ಸಮುದಾಯ ದೇಶದ ಬಗ್ಗೆ ಗೌರವ ಇಟ್ಟುಕೊಂಡಿದ್ದು ಕಾನೂನಿಗೆ ವಿಧೇಯವಾಗಿ ದೇಶಾದ್ಯಂತ ಬಡಜನರ ಸೇವೆಯಲ್ಲಿ ತೊಡಗಿಸಿದೆ. ಸರಕಾರ ನಮ್ಮ ಸಮುದಾಯಕ್ಕೆ ಬೆಂಬಲ ಮತ್ತು ಧೈರ್ಯ ತುಂಬಬೇಕಾಗಿದೆ ಎಂದು ಬಿಷಪ್ ಕೇಳಿಕೊಂಡಿದ್ದಾರೆ.
The Backward Classes and Minorities Welfare Department in Karnataka have reputedly launched survey into Christian missionaries, both official and unofficial, operating in the state. Archbishop Peter Machado of Bangalore archdiocese responding to the development said that nothing good will come out of it. The ‘conversion bogey’ will only whip up anti-religious feelings, he said.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm