ಬ್ರೇಕಿಂಗ್ ನ್ಯೂಸ್
03-10-21 04:26 pm Headline Karnataka News Network ಕರ್ನಾಟಕ
ಮೈಸೂರು, ಅ.3: ಮೈಸೂರು ಭಾಗದಲ್ಲಿ 20ಕ್ಕೂ ಹೆಚ್ಚು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಗರಂ ಆಗಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಹುಚ್ಚು ಹಿಡಿದಿದೆ. ಹೇಗಾದರೂ ಸರಿ ಸಿಎಂ ಆಗಬೇಕು ಅನ್ನುವ ಹುಚ್ಚು. ಇದಕ್ಕಾಗಿ ಬಿಜೆಪಿಯವರನ್ನ ಹೇಗಾದ್ರೂ ಎಳಕೊಳ್ಳಬೇಕು ಅನ್ನುವ ಹುಚ್ಚು ಡಿಕೆಶಿಗೆ ಇದೆ. ಇಬ್ಬರೂ ಹುಚ್ಚರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಇದಕ್ಕೆ ಬೇರೆ ಯಾವುದೇ ಉತ್ತರ ಇಲ್ಲ ಎಂದು ಸಿಡುಕಿದ್ದಾರೆ.
ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಸಿದ್ದರಾಮಯ್ಯಗೆ ಮತ್ತೆ ಅಧಿಕಾರಕ್ಕೇರುವ ಹುಚ್ಚು ಕನಸು ಹಿಡಿದಿದೆ. ಮುಖ್ಯಮಂತ್ರಿ ಕನಸು ಬಿಡಿ, ಮುಂಬರುವ ಚುನಾವಣೆಯಲ್ಲಿ ಗೆಲ್ಲಲಿ ನೋಡೋಣ.. ಕಳೆದ ಚುನಾವಣೆಯಲ್ಲಿ ಜನ ನಿಮ್ಮನ್ನು ಯಾಕೆ ಕೈ ಬಿಟ್ರು ? ಚಾಮುಂಡೇಶ್ವರಿಲಿ ಯಾಕ್ ಸೋತ್ರಿ..? ಅದನ್ನು ಮೊದಲು ಹೇಳಿ, ಆಮೇಲೆ ಕನಸು ಕಾಣುವಿರಂತೆ ಎಂದು ಟಾಂಗ್ ನೀಡಿದ್ದಾರೆ.
ಇವರ ಸರಕಾರ ಇದ್ದಾಗ ಜಾತಿಗಣತಿ ಮಾಡಿದ್ರು. ತಮ್ಮದೇ ಸಂಘಟನೆ ಮಾಡಲು ಅಡ್ಡ ದಾರಿ ತುಳಿದಿದ್ದರು. ಆದರೆ, ಗಣತಿ ಮಾಡಿದ ಬಳಿಕ ಸದನದಲ್ಲಿ ಯಾಕೆ ಮಾತಾಡ್ಲಿಲ್ಲ. ಸಿದ್ದರಾಮಯ್ಯನವರೇನು ಬಾಯಲ್ಲಿ ಕಡುಬು ಇಟ್ಟುಕೊಂಡಿದ್ರಾ..? ಸದನದಲ್ಲಿ ಜಾತಿಗಣತಿಯ ಬಗ್ಗೆ ಧ್ವನಿ ಮಾಡ್ತೀವಿ ಅಂದಿದ್ರಿ, ಮಾಡಿದ್ರಾ..? ಯಾಕೆ ಜಾತಿಗಣತಿ ಬಗ್ಗೆ ಮಾತಾಡಲಿಲ್ಲ. ಹಿಂದುಳಿದಿರುವ, ಅಲ್ಪಸಂಖ್ಯಾತರು ನಿಮಗೆ ಹೆಸರಿಗೆ ಮಾತ್ರನಾ..? ಎಂದು ಪ್ರಶ್ನೆ ಮಾಡಿದರು.
ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಜಾತಿಗಣತಿ ವರದಿ ಸಿದ್ಧವಾಗಿದ್ದರೂ ಕುಮಾರಸ್ವಾಮಿ ಮಂಡಿಸಲಿಲ್ಲ. ಮಂಡನೆ ಸಾಧ್ಯವಾಗದೇ ಇದ್ರೆ ಆಗ ನಿಮ್ಮ ಬೆಂಬಲ ವಾಪಸ್ ತಗೋಬೇಕಿತ್ತು. ನಿಮ್ಮ ಬಲ ತೋರಿಸಬೇಕಿತ್ತು. ಯಾಕೆ ಅಂಥ ನಿರ್ಧಾರ ತೆಗೆದುಕೊಳ್ಳಲಿಲ್ಲ. ಇವರಿಗೆ ಇದು ಯಾವುದೂ ಬೇಕಾಗಿಲ್ಲ. ಅಧಿಕಾರವೊಂದೇ ಇವರ ಗುರಿ. ಆದರೆ ಒಂದು ಮಾತು ಹೇಳ್ತೀನಿ, ಮುಂದಿನ ವಿಧಾನ ಸಭೆ ಚುನಾವಣೆಗೆ ಮುಂಚೆನೇ ಇವರ ಕಾಂಗ್ರೆಸ್ ಎರಡು ಹೋಳಾಗುತ್ತೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇನ್ನೂ ಒಂದೂವರೆ ವರ್ಷ ಕಾಯುವ ಅವಶ್ಯಕತೆ ಇಲ್ಲ ಅನಿಸತ್ತೆ. ಡಿ.ಕೆ.ಶಿವಕುಮಾರ್ ಗೂ ಅಧಿಕಾರ ಬೇಕು. ಸಿದ್ದರಾಮಯ್ಯರಿಗೂ ಅಧಿಕಾರ ಬೇಕು. ಇವರ ನಡುವಿನ ಹೊಯ್ದಾಟದಿಂದ ಕಾಂಗ್ರೆಸ್ ಎರಡು ಹೋಳಾಗಲಿದೆ ಎಂದು ಸಚಿವ ಈಶ್ವರಪ್ಪ ಭವಿಷ್ಯ ನುಡಿದರು.
Minister for Rural Development and Panchaya Raj K S Eshwarappa on Sunday said Karnataka Congress will be divided into two before the next Assembly elections. siddaramaiah and dk shivakumar have gone mad need to admit them to Mental Hospital.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm