ಬ್ರೇಕಿಂಗ್ ನ್ಯೂಸ್
02-10-21 12:57 pm Source: Kannada Drivespark ಕರ್ನಾಟಕ
Photo credits : kannada.drivespark.com
ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ನಿಟ್ಟಿನಲ್ಲಿ ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕರ್ನಾಟಕ ಸರ್ಕಾರವು ಸಹ ಇದೇ ನಿಟ್ಟಿನಲ್ಲಿ ಹಲವು ಹೊಸ ಯೋಜನೆಗಳೊಂದಿಗೆ ಸಾರಿಗೆ ವಲಯದಲ್ಲಿ ಮಹತ್ವದ ಬದಲಾವಣೆಗೆ ಹಸಿರು ನಿಶಾನೆ ತೋರಿದೆ.
ಹೌದು, ಕರ್ನಾಟಕ ಸರ್ಕಾರವು ಎಲೆಕ್ಟ್ರಿಕ್ ವಾಹನ ಸಂಚಾರವನ್ನು ಉತ್ತೇಜಿಸಲು ಈಗಾಗಲೇ ಕೆಲವು ಯೋಜನೆಗಳು ಜಾರಿಗೊಳಿಸಿದ್ದು, ವಿದ್ಯುತ್ ವಾಹನಗಳ ಖರೀದಿಗೆ ಸಬ್ಸಡಿ ಸೇರಿದಂತೆ ಸಾರ್ವಜನಿಕ ಸಾರಿಗೆ ವಲಯದಲ್ಲೂ ಮಹತ್ವದ ಬದಲಾವಣೆ ತರಲಾಗುತ್ತಿದೆ.
ಹೆಚ್ಚುತ್ತಿರುವ ಮಾಲಿನ್ಯ ಮತ್ತು ಡೀಸೆಲ್ ವಾಹನಗಳ ನಿರ್ವಹಣಾ ವೆಚ್ಚಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಹೆಚ್ಚಿಸಲು ಸಿದ್ದವಾಗಿರುವ ರಾಜ್ಯ ಸರ್ಕಾರವು ಗುತ್ತಿಗೆ ಆಧಾರದ ಮೇಲೆ ಜೆಬಿಎಂ ನಿರ್ಮಾಣದ 90 ಎಲೆಕ್ಟ್ರಿಕ್ ಬಸ್‌ಗಳನ್ನು ಅಳವಡಿಸಿಕೊಳ್ಳುತ್ತಿದೆ.
2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಜೆಬಿಎಂ ಇಕೋ ಲೈಫ್ ಎಲೆಕ್ಟ್ರಿಕ್ ಬಸ್‌ಗಳು ಇದೀಗ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಂಚಾರಕ್ಕೆ ಸಿದ್ದವಾಗಿದ್ದು, ವಿವಿಧ ರಾಜ್ಯಗಳ ಸಾರಿಗೆ ಸಂಸ್ಥೆಗಳ ಬೇಡಿಕೆ ಆಧಾರದ ಮೇಲೆ 9 ಮೀಟರ್ ಮತ್ತು 12 ಮೀಟರ್ ಉದ್ದದ ಇ-ಬಸ್‌ಗಳನ್ನು ಪೂರೈಕೆ ಮಾಡುತ್ತಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 9 ಮೀಟರ್ ಉದ್ದದ ಇ-9 ಮಾದರಿಯನ್ನು ಗುತ್ತಿಗೆ ಆಧಾರದ ಮೇಲೆ ಬಳಕೆ ಮಾಡಲಿದ್ದು, ಚಾಲಕ ಸೇರಿ 34 ಆಸನಗಳನ್ನು ಹೊಂದಿರುವ ಈ ಎಲೆಕ್ಟ್ರಿಕ್ ಬಸ್ ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ.
ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಜೆಬಿಎಂ ಇಕೋ ಲೈಫ್ ಇ-9 ಎಲೆಕ್ಟ್ರಿಕ್ ಬಸ್ ಮಾದರಿಗಳು ಹವಾ ನಿಯಂತ್ರಣ ರಹಿತ ಮಾದರಿಗಳಾಗಿದ್ದು, ನಗರದ ಪ್ರಮುಖ ಮಾರ್ಗಗಳಲ್ಲಿ ಒಟ್ಟು 90 ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲಿವೆ.
ಜೆಬಿಎಂ ಗ್ರೂಪ್ ಕಂಪನಿಯು ಸದ್ಯ ಒಂದು ಇ-9 ಬಸ್ ಮಾದರಿಯನ್ನು ಬೆಂಗಳೂರಿನಲ್ಲಿ ಪ್ರದರ್ಶನಗೊಳಿಸಿದ್ದು, ಹಂತ-ಹಂತವಾಗಿ ಮುಂದಿನ ಡಿಸೆಂಬರ್ ವೇಳೆಗೆ 90 ಇ-ಬಸ್‌ಗಳನ್ನು ರಸ್ತೆಗಿಳಿಸಲಿದೆ.
ಹೊಸ ಎಲೆಕ್ಟ್ರಿಕ್ ಬಸ್ ತಾಂತ್ರಿಕ ಅಂಶಗಳ ಕುರಿತು ಪರಿಶೀಲನೆ ಮಾಡಿದ ಸಾರಿಗೆ ಸಚಿವ ಬಿ. ಶ್ರೀರಾಮಲು ಅವರು ಮುಂದಿನ ತಿಂಗಳು ರಾಜ್ಯೋತ್ಸವದ ಸಂಭ್ರಮಕ್ಕೆ ಹೊಸ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಅಧಿಕೃತ ಚಾಲನೆ ದೊರೆಯಲಿದ್ದು, ಪರಿಸರ ಸ್ನೇಹಿ ವಾಹನಗಳ ಮೂಲಕ ನಗರದ ಸ್ವಚ್ಚತೆಗೆ ಮತ್ತು ಭವಿಷ್ಯ ಸಾರಿಗೆ ವ್ಯವಸ್ಥೆಯನ್ನು ಸದೃಡಪಡಿಸಲು ರಾಜ್ಯ ಸರ್ಕಾರ ಬದ್ದವಾಗಿದೆ ಎಂದರು.
ಜೊತೆಗೆ ಗುತ್ತಿಗೆ ಆಧಾರದ ಮೇಲೆ ಖರೀದಿಸುತ್ತಿರುವ ಎಲೆಕ್ಟ್ರಿಕ್ ಬಸ್‌ಗಳಿಂದಾಗಿ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡಲಾಗುತ್ತಿದೆ ಎನ್ನುವ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ ಸಾರಿಗೆ ಸಚಿವರು ಇದು ಖಾಸಗಿಕರಣವಲ್ಲ ಇದೊಂದು ಹೊಸ ಪ್ರಯತ್ನದ ಭಾಗವಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಅಳವಡಿಸಿಕೊಳ್ಳುತ್ತಿರುವುದಾಗಿ ಸ್ಪಷ್ಟಪಡಿಸಿದರು.
ಗುತ್ತಿಗೆ ಆಧಾರದ ಮೇಲೆ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಎಂಟಿಸಿಗೆ ಹಸ್ತಾಂತರಿಸುತ್ತಿರುವ ಜೆಬಿಎಂ ಕಂಪನಿಯು ಗುತ್ತಿಗೆ ಷರತ್ತಿನ ಅನ್ವಯ 10 ವರ್ಷಗಳ ಕಾಲ ಕಂಪನಿಯೇ ಇ-ಬಸ್‌ಗಳನ್ನು ನಿರ್ವಹಣೆ ಮಾಡಲಿದೆ.
ಜೆಬಿಎಂ ಕಂಪನಿಯು ಹೊಸ ಇ-ಬಸ್ ಚಾಲನೆಗೆ ತರಬೇತಿ ಹೊಂದಿರುವ ತನ್ನದೆ ಚಾಲಕರನ್ನು ನಿಯೋಜಿಸಲಿದ್ದು, ಬಿಎಂಟಿಸಿ ಸಂಸ್ಥೆಯು ನಿರ್ವಾಹಕನನ್ನು ನಿಯೋಜಿಸಲಿದೆ. ಬಸ್ ಸಂಚಾರದ ಆಧಾರದ ಮೇಲೆ ಪ್ರತಿ ಕಿ.ಮೀ ಗೆ ಬಿಎಂಟಿಸಿ ಸಂಸ್ಥೆಯು ಜೆಬಿಎಂ ಕಂಪನಿಗೆ ರೂ. 51.67 ಪಾವತಿಸಲಿದೆ ಎನ್ನಲಾಗಿದೆ.
ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಾಗಿರುವ ಫಾಸ್ಟ್ ಚಾರ್ಜಿಂಗ್ ನಿಲ್ದಾಣವನ್ನು ಸಹ ಜೆಬಿಎಂ ಕಂಪನಿಯೇ ನಿರ್ವಹಣೆ ಮಾಡಲಿದ್ದು, ಸದ್ಯಕ್ಕೆ ಕೆಂಗೇರಿ ಡಿಪೋದಲ್ಲಿ ಫಾಸ್ಟ್ ಚಾರ್ಜಿಂಗ್ ನಿರ್ಮಾಣ ಮಾಡಲಿರುವ ಕಂಪನಿಯು ಮುಂಬರುವ ದಿನಗಳಲ್ಲಿ ನಗರದ ಯಾವುದೇ ಭಾಗಕ್ಕೂ ಇ-ಬಸ್ ಸಂಚಾರಕ್ಕೆ ಅನುಕೂಲವಾಗುವಂತೆ ನಗರ ಪ್ರಮುಖ ಡಿಪೋಗಳಲ್ಲಿ ಹೆಚ್ಚಿನ ಸಂಖ್ಯೆಯ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದೆ.
ಇ-9 ಮಾದರಿಯು ಸದ್ಯ ನವಿ ಮುಂಬೈಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಇ-9 ಬಸ್ ಮಾದರಿಯನ್ನು ಕಂಪನಿಯು ಎರಡು ಮಾದರಿಯ ಬ್ಯಾಟರಿ ಪ್ಯಾಕ್ ಜೋಡಣೆ ಮಾಡುತ್ತಿದೆ. ಸಾರಿಗೆ ಸಂಸ್ಥೆಗಳ ಬೇಡಿಕೆ ಆಧಾರದ ಮೇಲೆ 120kw ಮತ್ತು 160kw ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡುತ್ತಿದೆ.
ಬ್ಯಾಟರಿ ಪ್ಯಾಕ್ ಆಧರಿಸಿ ಇ-9 ಬಸ್ ಮಾದರಿಯು ಪ್ರತಿ ಚಾರ್ಜ್‌ಗೆ ಕನಿಷ್ಠ 120 ಕಿ.ಮೀ ನಿಂದ 160 ಕಿ.ಮೀ ತನಕ ಮೈಲೇಜ್ ಹಿಂದಿರುಗಿಸಲಿದ್ದು, ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಮೂಲಕ ಕೇವಲ 90 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದಾಗಿದೆ.
ಜೆಬಿಎಂ ಕಂಪನಿಯ ತನ್ನ ಹೈ ಎಂಡ್ ಮಾದರಿಯಾದ ಇ-12 ಮಾದರಿಯು 12 ಮೀಟರ್ ಉದ್ದಳತೆಯೊಂದಿಗೆ 200kw ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದ್ದು, ಇದು ಪ್ರತಿ ಪ್ರತಿ ಚಾರ್ಜ್‌ಗೆ 200 ಕಿ.ಮೀ ಮೈಲೇಜ್ ಹೊಂದಿದೆ. ಕಂಪನಿಯು ಎರಡು ಬಸ್ ಮಾದರಿಗಳಲ್ಲೂ ಅತ್ಯುತ್ತಮ ಆಸನ ಸೌಲಭ್ಯದೊಂದಿಗೆ ಪ್ರಯಾಣಿಕ ಸುರಕ್ಷತೆಗೆ ಗರಿಷ್ಠ ಫೀಚರ್ಸ್‌ಗಳನ್ನು ಜೋಡಣೆ ಮಾಡಿದೆ.
ಇ-9 ಬಸ್‌ಗಳಲ್ಲಿ ಸಿಸಿಟಿವಿ ಕಣ್ಣಗಾವಲು, ಇನ್‌ಫಾರ್ಮ್‌ಮೆಷನ್ ಡಿಸ್‌ಪ್ಲೇ ಬೋರ್ಡ್, ವಿಶೇಷ ಚೇತನರಿಗಾಗಿ ವ್ಹೀಲ್ ಚೇರ್ ಸೌಲಭ್ಯ ಮತ್ತು ಪ್ರತಿ ಆಸನದಲ್ಲೂ ಪ್ಯಾನಿಕ್ ಬಟನ್‌ಗಳನ್ನು ನೀಡಲಾಗಿದ್ದು, ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಡಿ ಈ ಮಿನಿ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಎಂಟಿಸಿ ಸಂಸ್ಥೆಗೆ ಹಸ್ತಾಂತರ ಮಾಡಲಾಗುತ್ತಿದೆ. ಇದರ ಜೊತೆಗೆ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದ ಫೇಮ್-2 ಯೋಜನೆ ಅಡಿಯಲ್ಲೂ ಕೂಡಾ ಬರೋಬ್ಬರಿ 300 ಎಲೆಕ್ಟ್ರಿಕ್ ಬಸ್‌ಗಳು ಬರಲಿದ್ದು, ಮುಂದಿನ ತಿಂಗಳು ಫೇಮ್ 2 ಯೋಜನೆ ಅಡಿಯ ಇ-ಬಸ್‌ಗಳ ಖರೀದಿಗಾಗಿ ಪ್ರತ್ಯೇಕವಾದ ಟೆಂಡರ್ ಕರೆಯಲಾಗುತ್ತಿದೆ. 300 ಇ-ಬಸ್‌ಗಳಲ್ಲಿ ರಾಜ್ಯದ ಇತರೆ ಸಾರಿಗೆ ಸಂಸ್ಥೆಗಳಿಗೂ ಹಂಚಿಕೆಯಾಗಲಿದ್ದು, ಇವುಗಳನ್ನು ಸಂಪೂರ್ಣವಾಗಿ ಸಾರಿಗೆ ಇಲಾಖೆಯೇ ನಿರ್ವಹಣೆ ಮಾಡಲಿದೆ.
26-08-25 07:07 pm
Bangalore Correspondent
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
SIT Issues Notice, Sujatha Bhat: ಸುಳ್ಳಜ್ಜಿ ಸು...
25-08-25 10:55 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
26-08-25 05:24 pm
HK News Desk
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm