ಬ್ರೇಕಿಂಗ್ ನ್ಯೂಸ್
28-09-21 04:04 pm Headline Karnataka News Network ಕರ್ನಾಟಕ
ಅಮೃತ್ ಸರ್, ಸೆ. 28 : ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಸಿಧು,ರಾಜೀನಾಮೆ ಪತ್ರವನ್ನು ಟ್ವೀಟ್ ಮಾಡಿದ್ದಾರೆ.
ಪಂಜಾಬ್ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ರಾಜಿಯಾಗಲು ಸಿದ್ಧನಿಲ್ಲ, ಅಧ್ಯಕ್ಷ ಸ್ಥಾನ ತೊರೆದರೂ ಪಕ್ಷದಲ್ಲಿದ್ದು ದುಡಿಯುವೆ ಎಂದು ನವಜ್ಯೋತ್ ಸಿಂಗ್ ಸಿಧು ಪತ್ರದಲ್ಲಿ ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ನವಜ್ಯೋತ್ ಸಿಂಗ್ ಸಿಧು ಹೆಸರು ಕೂಡಾ ಕೇಳಿ ಬಂದಿತ್ತು. ಆದರೆ, ಚರಣ್ಜಿತ್ ಸಿಂಗ್ ಚನ್ನಿ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದು, ಸಂಪುಟ ವಿಸ್ತರಣೆ ಮಾಡಿದ್ದಾರೆ.
ಸಿಧು ರಾಜೀನಾಮೆಗೆ ಏನು ಕಾರಣ?
ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಸಿಧು ಪಿತೂರಿ ನಡೆಸಿದ್ದರು ಎಂಬ ಸುದ್ದಿ ಹಬ್ಬಿತ್ತು. ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಅಮರೀಂದರ್ ಅವರು ಸಿಧು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಸಿಎಂ ಸ್ಥಾನಕ್ಕೆ ಸಿಧು ಸೂಕ್ತರಲ್ಲ, ಪಾಕಿಸ್ತಾನಿಗಳ ಜೊತೆ ಮೈತ್ರಿ ಹೊಂದಿದ್ದಾರೆ, ಪಂಜಾಬ್ ರಾಜ್ಯಕ್ಕೆ ಸಿಧು ಸಿಎಂ ಆದರೆ ಅದು ದೊಡ್ಡ ಕಳಂಕ ಎಂದಿದ್ದರು.
ವೈಯಕ್ತಿಕ ನಿಂದನೆ, ತೇಜೋವಧೆಯನ್ನು ಸಹಿಸಲು ಸಾಧ್ಯವಿಲ್ಲ, ಪಂಜಾಬ್ ಅಭಿವೃದ್ಧಿ ಜೊತೆ ರಾಜಿಯಾಗುವುದಿಲ್ಲ ಎಂದು ಸಿಧು ಹೇಳಿದ್ದಾರೆ. ಆದರೆ, ಚರಣ್ ಜೀತ್ ಆಯ್ಕೆಯನ್ನು ಸಿಧು ಸ್ವಾಗತಿಸಿದ್ದರು.
ಆದರೆ, ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಸಿದ್ದು ರಾಜಿನಾಮೆ ನೀಡಿದ್ದಾರೆ. ಸಂಪುಟದಲ್ಲಿ ಕಳಂಕಿತ ವ್ಯಕ್ತಿ ಎನ್ನಲಾದ ರಾಣಾ ಗುರ್ಜಿತ್ ಸಿಂಗ್ ಅವರನ್ನು ಸೇರಿಸಿಕೊಳ್ಳಬಾರದು ಎಂದು ಹಠ ಹಿಡಿದಿದ್ದರು. ಆದರೆ ಲಾಬಿ ನಡೆಸಿದ್ದ ಗುರ್ಜಿತ್ ಸಿಂಗ್ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು. ಗುರ್ಜಿತ್ ಸಿಂಗ್ ಅಕ್ರಮ ಮರಳುಗಾರಿಕೆ, ಗಣಿ ನಡೆಸಿದ ಆರೋಪ ಎದುರಿಸಿದ್ದರು. ಅಮರಿಂದರ್ ಸಿಂಗ್ ಸರಕಾರದಲ್ಲಿ ಸಚಿವನಾಗಿದ್ದರೂ, ಅವರನ್ನು ಆರೋಪ ಬಂದ ಹಿನ್ನೆಲೆ ನಡುವೆ ಕೈಬಿಡಲಾಗಿತ್ತು. ಇದೀಗ ಸಿಧು ತನ್ನ ಮಾತು ನಡೆಯಲಿಲ್ಲ ಎಂಬ ನೋವಿನಲ್ಲಿ ಪಕ್ಷದ ಸಾರಥ್ಯದಿಂದಲೇ ಇಳಿದುಬಿಟ್ಟಿದ್ದಾರೆ.
— Navjot Singh Sidhu (@sherryontopp) September 28, 2021
Navjot Singh Sidhu on Tuesday resigned as the chief of the Punjab Pradesh Congress Committee. In a letter to Congress president Sonia Gandhi, Sidhu, however, said he will continue to serve the party.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 06:46 pm
HK News Desk
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
13-05-25 07:33 pm
Mangalore Correspondent
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm