ಬ್ರೇಕಿಂಗ್ ನ್ಯೂಸ್
16-09-21 12:54 pm Headline Karnataka News Network ಕರ್ನಾಟಕ
ಮೈಸೂರು, ಸೆ.16: ನಂಜನಗೂಡಿನಲ್ಲಿ ದೇವಸ್ಥಾನ ಒಡೆದು ಹಾಕಿದ್ದನ್ನು ವಿರೋಧಿಸಿ ಮೈಸೂರು ನಗರದಲ್ಲಿ ಬಿಜೆಪಿಯವರೇ ಪ್ರತಿಭಟನೆ ನಡೆಸಿದ್ದಾರೆ. ಹಿಂದು ಜಾಗರಣಾ ವೇದಿಕೆಯ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ದೇವಸ್ಥಾನ ಒಡೆದು ಹಾಕಿದ್ದನ್ನು ಸಮರ್ಥಿಸಿಕೊಂಡಿದ್ದ ಶಾಸಕ ರಾಮದಾಸ್ ಅವರೇ ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ. ದೇವಸ್ಥಾನ ಒಡೆದ ಮರುದಿನವೇ ಶಾಸಕ ರಾಮದಾಸ್, ಈ ಘಟನೆಯನ್ನು ಸಮರ್ಥಿಸಿ ಹೇಳಿಕೆಯನ್ನೂ ಕೊಟ್ಟಿದ್ದರು.
ಮೈಸೂರಿನ ಅರಮನೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಭಟನೆ ನಡೆದಿದ್ದು, ಕಾರ್ಯಕರ್ತರು ಶೇಮ್ ಶೇಮ್ ಬಿಜೆಪಿ ಎಂದು ಧಿಕ್ಕಾರದ ಘೋಷಣೆ ಕೂಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ವಿರುದ್ಧವೂ ಧಿಕ್ಕಾರ ಕೂಗಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಹಿಂಜಾವೇ ಮುಖಂಡ ಜಗದೀಶ ಕಾರಂತ, ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿಮ್ಮ ಗ್ರಹಚಾರ ಕೆಟ್ಟಿದೆ, ಬೊಮ್ಮಾಯಿ ಅವರೇ ಕಿವಿಗೊಟ್ಟು ಕೇಳಿ. ಹಿಂದುಗಳು ನಿಮ್ಮ ಅಡಿಯಾಳು ಅಲ್ಲ. 2009ರಲ್ಲಿ ಜಮಖಂಡಿಯಲ್ಲಿಯೂ ದೇವಾಲಯ ಧ್ವಂಸ ಮಾಡಲಾಗಿತ್ತು. ಆಗ ಸಿಎಂ ಆಗಿದ್ದ ಯಡಿಯೂರಪ್ಪ ನೆಲಸಮ ಮಾಡೋದು ಅಂತಿಮ ಎಂದು ಸುತ್ತೋಲೆ ಹೊರಡಿಸಿದ್ದರು.
ಈಗ ಮತ್ತೆ ದೇವಾಲಯ ಧ್ವಂಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಇದ್ದಾಗ ದೇಗುಲ ಧ್ವಂಸ ಆಗಿಲ್ಲ. ಈಗ ದೇಗುಲ ಧ್ವಂಸ ನಡೆಯುತ್ತಿರುವುದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ.. ದೇವಸ್ಥಾನ ಒಡೆದು ಹತ್ತು ದಿನ ಆದರೂ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಇಲ್ಲಿಗೆ ಭೇಟಿ ಕೊಟ್ಟಿಲ್ಲ. ಕಂದಾಯ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ನೋಟೀಸ್ ಕೊಟ್ಟಿದ್ದೀನಿ ಎಂದಿದ್ದಾರೆ. ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ವರದಿ ತರಿಸಿಕೊಳ್ಳಬೇಕಿತ್ತು. ಈ ಕೃತ್ಯ ನಡೆಸಿರುವ ಹೊಣೆ ಹೊರಿಸಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಮತ್ತು ತಹಸೀಲ್ದಾರ್ ಮೋಹನ್ ಕುಮಾರಿ ತಲೆದಂಡ ಪಡೆಯಲೇಬೇಕು. ಅಲ್ಲೀವರೆಗೂ ನಮ್ಮ ಹೋರಾಟ ಮುಂದವರಿಯಲಿದೆ ಎಂದು ಜಗದೀಶ ಕಾರಂತ್ ಹೇಳಿದ್ದಾರೆ.
ಇದೇ ವೇಳೆ, ಅನ್ಯಕೋಮಿನ ವ್ಯಕ್ತಿಯೊಬ್ಬ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದನ್ನು ಗಮನಿಸಿದ ಕಾರ್ಯಕರ್ತರು ಆತನನ್ನು ಹೊರ ಕಳುಹಿಸಬೇಕೆಂದು ತಳ್ಳಾಟ ನಡೆಸಿದ ಘಟನೆ ನಡೆದಿದೆ. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಭಾರೀ ತಳ್ಳಾಟ, ನೂಕಾಟ ನಡೆದಿದ್ದು, ಕಾರ್ಯಕರ್ತರನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ನಡೆಸಿದ್ದಾರೆ. ಅನ್ಯಕೋಮಿನ ವ್ಯಕ್ತಿಯನ್ನು ಹೊರ ತಳ್ಳಲು ಯತ್ನಿಸಿದ ಪ್ರತಿಭಟನಾ ನಿರತರ ಜೊತೆಗೆ ಪೊಲೀಸರು ವಾಗ್ವಾದ ನಡೆಸಿದ್ದಾರೆ. ಕೆಲಕಾಲ ಈ ವಿಚಾರ ಉದ್ರಿಕ್ತ ವಾತಾವರಣಕ್ಕೆ ಸಾಕ್ಷಿಯಾಯ್ತು. ಪ್ರತಿಭಟನೆಯ ನೆಪದಲ್ಲಿ ನೂರಾರು ಮಂದಿ ಸೇರಿದ್ದು ಕೋವಿಡ್ ನಿಯಮಗಳನ್ನೇ ಗಾಳಿಗೆ ತೂರಿ ಜನ ಗೊಂದಲ ನಿರ್ಮಿಸಿದ್ದಾರೆ.
Video:
The protest against the demolition of a temple near Nanjangud intensified with a large number of activists of VHP, Hindu Jagarana Vedike and other organisations taking to the streets in Mysuru and chanting slogans against the government, on September 16. The protesters assembled in front of Kote Anjaneyaswamy temple at the north gate of the palace, and raised slogans against the Karnataka government, embarrassing BJP MLA S.A. Ramdas and supporters of the ruling party who were in the vicinity.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm