ಬ್ರೇಕಿಂಗ್ ನ್ಯೂಸ್
26-08-21 10:54 am Headline Karnataka News Network ಕರ್ನಾಟಕ
ಮಂಡ್ಯ, ಆಗಸ್ಟ್ 26: ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವ ವಿಚಾರದಲ್ಲಿ ಮತ್ತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆ ನೀಡಿದ್ದಾರೆ. ಎಲ್ಲವನ್ನು ಕಾಂಗ್ರೆಸ್ ನವರೇ ಕೊಟ್ಟಿದ್ದಾರೆಂದು ಒಂದು ಭ್ರಮೆ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಅನ್ನಪೂರ್ಣೇಶ್ವರಿ ಹೆಸರು ಹೇಳುತ್ತಿದ್ದೇವೆ. ಅನ್ನಪೂರ್ಣೇಶ್ವರಿ ಬಿಜೆಪಿಯ ಪ್ರೈಮರಿ ಮೆಂಬರ್ ಶಿಪ್ ಅಂತೂ ತೆಗೆದುಕೊಂಡಿಲ್ಲ. ಅನ್ನಪೂರ್ಣೇಶ್ವರಿ ನಮ್ಮ ಬಿಜೆಪಿ ಪಕ್ಷದ ನಾಯಕಿಯೂ ಅಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ರಾಜಕೀಯ ಕಾರಣಕ್ಕೆ ತಮ್ಮ ಪಕ್ಷದ ನೇತಾರರ ಹೆಸರಿಡುತ್ತಾರೆ ಅನ್ನೋದಾದ್ರೆ ನಾವು ರಾಜಕೀಯೇತರವಾಗಿ ಆಲೋಚನೆ ಮಾಡ್ತೇವೆ. ಯಾವ ಯೋಜನೆಗಳಿಗೂ ರಾಜಕಾರಣದ ಬಣ್ಣ ಇರಬಾರದು. ಕ್ಯಾಂಟೀನ್ ಅನ್ನು ರಾಜಕೀಯ ಬಣ್ಣದಿಂದ ಸಾಂಸ್ಕೃತಿಕ ಬಣ್ಣಕ್ಕೆ ಬದಲಾಯಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಸಿಟಿ ರವಿ, ರಾಜ್ಯದಲ್ಲಿ 17 ವಿವಿಧ ಯೋಜನೆಗಳಿಗೆ ಒಂದು ಕುಟುಂಬದ ಹೆಸರಿಟ್ಟಿದ್ದಾರೆ. ಆ ಕುಟುಂಬ ಬಿಟ್ಟು ಇನ್ಯಾರದು ಕೊಡುಗೆ ಇಲ್ವಾ? ಜನ ಅಭಿಮಾನದಿಂದ ಹೆಸರು ಕೊಡುವುದು ಬೇರೆ ಎಂದು ಹೇಳಿದರು.
ಭಾರತ ರತ್ನವನ್ನು ಮೊದಲ ಪ್ರಧಾನಿ ನೆಹರು ಸ್ವಯಂ ಅವರಿಗೆ ಅವರೇ ಡಿಕ್ಲೇರ್ ಮಾಡಿಕೊಂಡಿದ್ದಾರೆ. ಇಂದಿರಾ ಗಾಂಧಿ ಕೂಡ ಅವರಿಗೆ ಅವರೇ ಡಿಕ್ಲೇರ್ ಮಾಡ್ಕೊಂಡ್ರು. ರಾಜೀವ್ ಗಾಂಧಿಯವರಿಗೆ 91ನೇ ಇಸವಿಯಲ್ಲಿ ಕೊಟ್ರು. ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡೋಕೆ 90 ರ ವರೆಗೆ ಕಾಯಬೇಕಾಗಿತ್ತು. ಅಂಬೇಡ್ಕರ್ ಅವರಿಗೆ ಕೊಡೋಕೆ ಅಟಲ್ ಜೀ ಪ್ರಪೊಸ್ ಮಾಡಬೇಕಾಗಿ ಬಂದಿತ್ತು. ನಮ್ಮ ಬಿಜೆಪಿ ಬೆಂಬಲ ನೀಡಿದ್ದಾಗ ಭಾರತರತ್ನ ಕೊಟ್ಟಿದ್ದು. ಈ ತರಹದ ತಾರತಮ್ಯ ಸರಿಯಾಗಬೇಕು. ಇಲ್ಲಿ ಯೋಜನೆಗಳಿಗೆ ಕೊಡುಗೆಗಳನ್ನು ನೆನಪಿಸಿದರೆ, ಎಲ್ಲವನ್ನು ಅವರೇ ಕೊಟ್ಟಿದ್ದಾರೆ ಎಂದು ಒಂದು ಭ್ರಮೆ ನಿರ್ಮಾಣ ಮಾಡಿದ್ದಾರೆ. ಆ ಭ್ರಮೆಯ ವಿರುದ್ಧ ನಾವಿದ್ದೇವೆ. ಇವರ ಬಿಟ್ಟರೆ ದೇಶನೇ ಇಲ್ಲ ಅನ್ನೋ ಭ್ರಮೆ ನಿರ್ಮಾಣ ಮಾಡಿದ್ದಾರೆ.
ನಾಲ್ಕು ತಲೆಮಾರು ರಾಜಕಾರಣ ಮಾಡಿದ್ದಾರೆ. ಮಹಾತ್ಮ ಗಾಂಧಿ ಅವರ ಮಕ್ಕಳು ಎಷ್ಟು ಜನ ರಾಜಕಾರಣದಲ್ಲಿದ್ದಾರೆ. ಇವರು ಮೂರು ತಲೆಮಾರು ರಾಜಕಾರಣ ಮುಗಿಸಿ ನಾಲ್ಕನೇ ತಲೆಮಾರು ಮಾಡ್ತಿದ್ದಾರೆ. ಇವರು ದೇಶದಿಂದ ತೆಗೆದುಕೊಂಡಿದ್ದು ಎಷ್ಟು, ದೇಶಕ್ಕೆ ಕೊಟ್ಟಿದ್ದು ಎಷ್ಟು ? ಕೊಟ್ಟಿದ್ದನ್ನ ಮಾತ್ರ ನೆನಪಿಸುತ್ತಾರೆ, ಅವರ ಸಾಲಿನಲ್ಲಿ ನಡೆಸಿದ ಹಗರಣದ ಬಗ್ಗೆಯೂ ನೆನಪಿಸಬೇಕು. ಲಕ್ಷ ಲಕ್ಷ ಕೋಟಿ ಹಗರಣ ಮಾಡಿದ್ದಾರೆ, ಇದರ ಹೊಣೆ ಯಾರು ಹೊರುತ್ತಾರೆ ಎಂದು ಗಾಂಧಿ ಕುಟುಂಬದ ಬಗ್ಗೆ ಹೆಸರೆತ್ತದೆ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.
Bharatiya Janata Party national general secretary C.T. Ravi called on Chief Minister Basavaraj Bommai to rename Indira Canteens, a flagship programme of the previous Congress government named after former Prime Minister Indira Gandhi, triggering a row as Congress rushed to defend their leader
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm