ಬ್ರೇಕಿಂಗ್ ನ್ಯೂಸ್
20-02-21 04:56 pm Headline Karnataka News Network ಕರ್ನಾಟಕ
ಗದಗ, ಫೆ.20: ಹಿಂದುಗಳೆಲ್ಲರು ತಮ್ಮ ಮನೆ ಎದುರಲ್ಲಿ ಖಡ್ಗ ನೇತಾಡಿಸಿ ಇಡಬೇಕು. ಹರಿತವಾದ ಕತ್ತಿ, ಖಡ್ಗ, ಭರ್ಚಿ, ಕುಡಗೋಲು, ಚಾಕು ಮನೆಯಲ್ಲಿ ನೇತು ಬಿಡ್ರಿ.. ಎದುರಲ್ಲೇ ಕಾಣುವಂತೆ ಇಡಿ, ಕದ್ದು ಮುಚ್ಚಿ ಇಟ್ಟುಕೊಳ್ಳುವುದಲ್ಲ. ಅತ್ಯಾಚಾರಿ, ಮತಾಂತರಿ, ಗೋ ಹಂತಕ, ಭಯೋತ್ಪಾದಕ, ದುರುಳ, ದುಷ್ಟರನ್ನು ಸದೆಬಡಿಯಲು ಈ ಕತ್ತಿ ಮುಂದೆ ಉಪಯೋಗಕ್ಕೆ ಬರಬಹುದು.. ಹೀಗೆಂದು ಶ್ರೀರಾಮ ಸೇನೆ ಸಂಘಟನೆಯ ಸಂಸ್ಥಾಪಕ ವರಿಷ್ಠ ಪ್ರಮೋದ್ ಮುತಾಲಿಕ್ ಹಿಂದುಗಳಿಗೆ ಕರೆ ಕೊಟ್ಟಿದ್ದಾರೆ.
ಗದಗ ಜಿಲ್ಲೆಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ ಜಯಂತಿ ಸಮಾವೇಶದಲ್ಲಿ ಮುತಾಲಿಕ್ ನಾಲಿಗೆ ಹರಿಯ ಬಿಟ್ಟಿದ್ದಾರೆ. ಶಿವಾಜಿ ಮಹಾರಾಜರ ಫೋಟೋ, ಚರಿತ್ರೆ ಪುಸ್ತಕ, ಖಡ್ಗ ಹಿಂದುಗಳೆಲ್ಲರ ಮನೆಯಲ್ಲೂ ಇಟ್ಟುಕೊಳ್ಳಿ. ಖಡ್ಗ ಕದ್ದುಮುಚ್ಚಿ ಇಡಬೇಡ್ರಿ, ಮನೆಯೊಳಗೆ ಹೋಗುತ್ತಿದ್ದಂತೆ ಕಾಣುವಂತಿಡಿ. ಹರಿತವಾದ ಖತ್ತಿ, ಖಡ್ಗ, ಭಾಚಿ, ಭರ್ಚಿ, ಕುಡಗೋಲು, ಚಾಕು ಮನೆಯಲ್ಲಿ ನೇತು ಬಿಡ್ರಿ ಅಂತ ಪ್ರಚೋದನೆಕಾರಿ ಮಾತುಗಳನ್ನಾಡಿದ್ದಾರೆ.
ಆಯುಧ ಪೂಜೆ ನಮ್ಮ ಸಂಸ್ಕೃತಿ. ಈ ಹಬ್ಬಕ್ಕೆ ಅವಮಾನ ಮಾಡಬೇಡಿ. ಹೇಡಿಗಳಾಗಬೇಡಿ, ದುರ್ಗಾ ಮಾತೆಯ ಹತ್ತು ಕೈಗಳಲ್ಲಿ ಹತ್ತು ಶಸ್ತ್ರಗಳಿವೆ. ದುಷ್ಟ, ನೀಚ, ಭ್ರಷ್ಟ, ಭಯೋತ್ಪಾದಕ, ಗೋ ಹಂತಕ, ಮತಾಂತರರನ್ನು ಕತ್ತರಿಸಲೆಂದೇ ದೇವಿ ಕೈನಲ್ಲಿ ಶಸ್ತ್ರಗಳಿವೆ. ಹಾಗೆಯೇ ಪ್ರತಿ ಹಿಂದುವಿನ ಮನೆಯಲ್ಲೂ ಈ ರೀತಿ ಕತ್ತಿ ಹಿಡಿದುಕೊಳ್ಳಬೇಕು. ಆದರೆ, ಕತ್ತಿಯನ್ನು ಕುಡಿದು ಹೊಡೆದಾಡಲು ಉಪಯೋಗಿಸಬೇಡಿ. ಬದಲಾಗಿ ದೇಶದ, ಗೋ ಮಾತೆ ಹಿತಕ್ಕೋಸ್ಕರ ಇಂದೆಲ್ಲಾ ನಾಳೆ ಬರುವ ಬೀದಿ ಕಾಳಗಕ್ಕೆ ಖಡ್ಗ ಹೊರ ತೆಗೆಯಿರಿ ಎಂದಿದ್ದಾರೆ.
ಬೆಂಗಳೂರಿನಲ್ಲಿ ಶ್ರೀರಾಮ ನಿಧಿ ಸಂಗ್ರಹಣೆ ವೇಳೆ ಮುಸ್ಲಿಮರು ಬಂದು ರಥಯಾತ್ರೆ ತಡೀತಾರೆ. ಮುಸ್ಲಿಂ ಗೂಂಡಾಗಳು ಹಿಂದೂ ಕಾರ್ಯಕರ್ತರಿಗೆ ಹೊಡೆದು ಗಾಯಮಾಡಿ ರಾಮನ ಭಾವಚಿತ್ರ ಹರಿದು ಹಾಕಿ ಗಲಭೆ ಮಾಡ್ತಾರೆ. ದೆಹಲಿಯಲ್ಲಿ ರಿಂಗೋ ಶರ್ಮಾನ ಕೊಂದ ಮುಸ್ಲಿಮರೇ, ಬೆಂಗಳೂರಿನಲ್ಲಿ ರಾಮನ ರಥಯಾತ್ರೆ ತಡೆದ ಬೊಸುಡಿಕೆಗಳೇ... ಇದು ನಮ್ಮ ಜಾಗ ಅಂತಿರಲ್ಲಾ, ಇದು ನಿಮ್ಮಪ್ಪನ ಜಾಗವೂ ಅಲ್ಲಾ.. ಅಕ್ಬರ್, ಔರಂಗಜೇಬನ ಜಾಗವೂ ಅಲ್ಲಾ... ನಿಮ್ಮ ಜಾಗ ಪಾಕಿಸ್ತಾನ್, ಅಫ್ಘಾನಿಸ್ತಾನ್, ಇರಾನ್, ಇರಾಕ್ ನಲ್ಲಿದೆ ಎಂದು ಹೇಳಿದ ಮುತಾಲಿಕ್, ಶ್ರೀರಾಮ ಸೇನೆಯ ಕಾರ್ಯಕರ್ತರು ಇಂದಲ್ಲಾ ನಾಳೆ ಅದೇ ಬೀದಿಯಲ್ಲಿ ಹೊಕ್ಕು ಮೆರವಣಿಗೆ ಮಾಡುತ್ತೇವೆ ಅಂತ ಆಕ್ರೋಶದ ಮಾತುಗಳನ್ನಾಡಿದರು. ಕ್ರಿಶ್ಚಿಯನ್ನರೇ ಮುಂದೆ ಮತಾಂತರಕ್ಕೆ ಮುಂದಾದ್ರೆ ಒದೆ ಬೀಳುತ್ತವೆ ಹುಷಾರ್..! ಅಂತ ಎಚ್ಚರಿಕೆ ನೀಡಿದರು.
Video:
Hindu Sena Chief Pramod Muthalik warns Hindu homes to Keep Sharped Swords, leathen weapons for safeguard. He gave a provocative speech at Gadag.
04-05-25 09:55 pm
HK News Desk
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
05-05-25 11:22 am
Mangalore Correspondent
Sharan Pumpwell, Mangalore, threat: ಶರಣ್ ಪಂಪ್...
04-05-25 11:26 pm
Mangalore, Hate speech, BJP MLA Harish Poonja...
04-05-25 08:49 pm
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
Mp Brijesh Chowta, Suhas Shetty Murder: ಆ್ಯಂಟ...
03-05-25 10:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm