ಬ್ರೇಕಿಂಗ್ ನ್ಯೂಸ್
13-01-21 12:32 pm Bangalore Correspondant ಕರ್ನಾಟಕ
ಮೈಸೂರು, ಜ.12: ಯಡಿಯೂರಪ್ಪ ತಮ್ಮ ಮಾತು ಉಳಿಸಿಕೊಳ್ಳಲಿಲ್ಲ, ದೇವರು ಅವರಿಗೆ ಒಳ್ಳೇದು ಮಾಡಲ್ಲ ಎಂದು ಎಂಎಲ್ಸಿ ಎಚ್.ವಿಶ್ವನಾಥ್ ಹರಿಹಾಯ್ದಿದ್ದಾರೆ.
ಯಡಿಯೂರಪ್ಪ ಸಂಪುಟ ವಿಸ್ತರಣೆ ವೇಳೆ, ನಾಗೇಶ್ ಅವರನ್ನು ಕೈಬಿಟ್ಟಿದ್ದು ಮತ್ತು ಸರಕಾರ ಬರಲು ಕಾರಣವಾದವರಿಗೆ ಸಚಿವ ಸ್ಥಾನಕ್ಕೆ ಪರಿಗಣಿಸದ ವಿಚಾರದಲ್ಲಿ ಕಿಡಿಕಾರಿದ್ದಾರೆ. ನಾಗೇಶ್ ಅವರನ್ನು ಸಚಿವ ಸ್ಥಾನದಿಂದ ಯಾಕೆ ಕೈಬಿಡಬೇಕಿತ್ತು. ಯೋಗೀಶ್ವರ್ ಅವರನ್ನು ಯಾಕೆ ಸೇರಿಸಿಕೊಳ್ಳಬೇಕಿತ್ತು. ಮುನಿರತ್ನ ಅವರನ್ನು ಯಾಕೆ ಸಚಿವ ಸ್ಥಾನಕ್ಕೆ ಪರಿಗಣಿಸಿಲ್ಲ. ನಾವು ಸರಕಾರ ಬರಲು ಕಾರಣವಾಗಿದ್ದು. ರಾಜಕೀಯಕ್ಕಷ್ಟೆ ನಾವು ಬೇಕು. ರಾಜಕೀಯ ನಾಯಕರು ತಮ್ಮ ಮಾತು ಉಳಿಸಿಕೊಳ್ಳಲ್ಲ ಎಂದು ಟೀಕಿಸಿದರು.
ಯಡಿಯೂರಪ್ಪ ತಮ್ಮ ಮಾತು ಉಳಿಸಿಕೊಳ್ಳುತ್ತಾರೆ ಎಂದು ಭರವಸೆ ಹೊಂದಿದ್ದೆವು. ಸರಕಾರ ಬರಲು ಕಾರಣವಾಗಿದ್ದ 16 ಮಂದಿಗೆ ಸಚಿವ ಸ್ಥಾನ ಕೊಡುವ ಭರವಸೆಯನ್ನು ನೀಡಿದ್ದರು. ಮಾತು ಉಳಿಸಿಕೊಳ್ಳುವುದಾಗಿ ಹೇಳುತ್ತಾ ಬಂದಿದ್ದರು. ಮುನಿರತ್ನರಿಗೆ ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ಆದರೆ, ಸಚಿವ ಸ್ಥಾನ ನೀಡುವಾಗ ತಮ್ಮ ಮಾತನ್ನು ಮರೆತಿದ್ದಾರೆ. ಅವರಿಗೆ ದೇವರು ಒಳ್ಳೇದು ಮಾಡಲ್ಲ. ಸಿದ್ದಲಿಂಗೇಶ್ವರ ಒಳ್ಳೇದು ಮಾಡೋದಿಲ್ಲ ಅಂತಾ ಪರೋಕ್ಷವಾಗಿ ಶಾಪ ಹಾಕಿದ್ದಾರೆ.
ಯಡಿಯೂರಪ್ಪ ಸಂಪುಟಕ್ಕೆ ಹೊಸದಾಗಿ ಏಳು ಮಂದಿಯನ್ನು ಸೇರಿಸಿಕೊಳ್ಳುವುದಾಗಿ ಪ್ರಕಟಿಸಿದ್ದಾರೆ. ಇದೇ ವೇಳೆ, ಮುನಿರತ್ನ ಸೇರಿದಂತೆ ವಲಸಿಗ ಶಾಸಕರನ್ನು ಬಿಟ್ಟು ಉಳಿದವರಿಗೆ ಸ್ಥಾನ ನೀಡುತ್ತಿರುವುದಕ್ಕೆ ಅಸಮಾಧಾನ ಭುಗಿಲೆದ್ದಿದೆ.
Mysore H Vishwanath slams at CM B.S Yediyurappa over Karnataka cabinet expansion stating God do any good to him hereafter.
12-08-25 10:39 pm
Bangalore Correspondent
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
12-08-25 02:49 pm
HK News Desk
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
ಮದುವೆಯಾಗುತ್ತೇನೆಂದು ನಂಬಿಸಿ ಮೋಸ, ಇಸ್ಲಾಮಿಗೆ ಮತಾಂ...
11-08-25 08:55 pm
Rabies Death, Supreme Court: ರಾಜಧಾನಿಯಲ್ಲಿ ರೇಬ...
11-08-25 02:48 pm
12-08-25 11:06 pm
Mangalore Correspondent
ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರದಲ್ಲೇ ಹೊಸ ನಿಯಮ ;...
12-08-25 08:34 pm
Pilikula Zoo Director, Mangalore Police: ಪಿಲಿ...
12-08-25 01:49 pm
Mangalore, Manipal Health Card, Silver Jubile...
12-08-25 01:09 pm
Dharmasthala Case, SIT, Radar: ಧರ್ಮಸ್ಥಳ 13ನೇ...
11-08-25 07:39 pm
12-08-25 12:36 pm
Bangalore Correspondent
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm