ಬ್ರೇಕಿಂಗ್ ನ್ಯೂಸ್
29-06-26 10:22 pm HK News Staffer ಕರ್ನಾಟಕ
ಬೆಂಗಳೂರು, ಜೂನ್ 29: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪಕ್ಷದ ಒಳಗಡೆಯೇ ಪಿತೂರಿ ನಡೆದಿದ್ಯಾ ಎನ್ನುವ ಅನುಮಾನ ಕೇಳಿಬಂದಿದೆ. ದೆಹಲಿ ನಾಯಕರ ಆಪ್ತನೆಂದು ಹೇಳಲಾದ ವ್ಯಕ್ತಿಯೊಂದಿಗೆ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಮಾತನಾಡಿದ್ದು ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜ್ಯ ಬಿಜೆಪಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ವೈರಲ್ ಆಗಿರುವ ಆಡಿಯೋದಲ್ಲಿ, ದೆಹಲಿ ಮಟ್ಟದ ನಾಯಕರೊಂದಿಗೆ ಆಪ್ತನೆಂದು ನಂಬಲಾದ 'ಪ್ರದೀಪ್ ಜೀ' ಎಂಬ ವ್ಯಕ್ತಿಯೊಂದಿಗೆ ಇಂಗ್ಲಿಷ್ನಲ್ಲಿ ನಡೆದಿರುವ ಸಂಭಾಷಣೆಯಲ್ಲಿ ಡಿವಿ ಸದಾನಂದ ಗೌಡರ ಧ್ವನಿಯನ್ನು ಹೋಲುವ ವ್ಯಕ್ತಿ ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ, "ಬಿ.ವೈ. ವಿಜಯೇಂದ್ರ ಅವರು ಇನ್ನೂ ಎರಡು-ಮೂರು ತಿಂಗಳಲ್ಲಿ ರಾಜ್ಯಾಧ್ಯಕ್ಷರಾಗಿ ಇರಲಿ. ಈಗಲೇ ಅವರನ್ನು ಬದಲಾಯಿಸಿದರೆ ಲಿಂಗಾಯತರ ವಿರೋಧ ಕಟ್ಟಿಕೊಳ್ಳಬೇಕಾದೀತು. ಆದ್ದರಿಂದ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ವರೆಗೆ ಅವರನ್ನು ಮುಂದುವರಿಯಲು ಬಿಡಿ. ನಂತರ ಮೂರು ವರ್ಷ ಹೇಗೂ ಮುಗಿಯಿತಲ್ವಾ ಎಂದು ಹೇಳಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ ಎಂದು ಸಲಹೆ ನೀಡಿರುವ ಮಾತುಗಳಿವೆ.
"ಮೂರು ವರ್ಷದ ಅವಧಿ ಮುಗಿದ ನಂತರ ನಾಯಕತ್ವ ಬದಲಿಸಿದರೆ ಯಾರೂ ಪ್ರಶ್ನೆ ಮಾಡುವುದಿಲ್ಲ. ಪಕ್ಷದ ನಿಯಮಕ್ಕೂ ಅದು ಹೊಂದಿಕೊಳ್ಳುತ್ತದೆ. ಆಬಳಿಕ ಸೂಕ್ತ ವ್ಯಕ್ತಿಯನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದರೆ ಆರಂಭದಲ್ಲಿ ಲಿಂಗಾಯತ ಸಮುದಾಯದಿಂದ ಸ್ವಲ್ಪ ವಿರೋಧ ವ್ಯಕ್ತವಾದರೂ ನಂತರ ಪರಿಸ್ಥಿತಿ ಸಹಜವಾಗುತ್ತದೆ. ಇದು ನನ್ನ ಅಭಿಪ್ರಾಯ ಅಷ್ಟೇ" ಎಂದು ಸದಾನಂದ ಗೌಡ ಹೇಳಿದ್ದಾರೆ. ಇದರ ಜೊತೆಗೆ, "ನಾನು ಪಕ್ಷದಲ್ಲಿ ಯಾವುದೇ ಹುದ್ದೆಗಾಗಿ ಷರತ್ತು ಹಾಕುವ ವ್ಯಕ್ತಿಯಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ದೇವರಲ್ಲಿ ನಂಬಿಕೆ ಇಟ್ಟಿದ್ದೇನೆ. ಜನರ ಜೊತೆ ನನಗೆ ಉತ್ತಮ ಸಂಪರ್ಕವಿದೆ. ನಾನು ಬಸ್ ನಿಲ್ದಾಣದಲ್ಲಿ ನಿಂತರೂ 25-30 ಆಟೋ ಚಾಲಕರು ಬಂದು ಮಾತನಾಡಿಸುತ್ತಾರೆ. ಆ ರೀತಿಯ ಜನಸಂಪರ್ಕವನ್ನು ನಾನು ಹೊಂದಿದ್ದೇನೆ" ಎಂಬ ಮಾತುಗಳು ಆಡಿಯೋದಲ್ಲಿವೆ.
ಪರಿಷತ್ ಚುನಾವಣೆ ಬಿಜೆಪಿ ಶಾಸಕರ ಅಡ್ಡ ಮತದಾನದ ಬಳಿಕ ಬಿಜೆಪಿ ನಾಯಕತ್ವ ಬಗ್ಗೆ ತೀವ್ರ ಅಪಸ್ವರ ಎದ್ದಿತ್ತು. ಇದೀಗ ವೈರಲ್ ಆಡಿಯೋದಲ್ಲಿ ಹಿರಿಯ ನಾಯಕ ಸದಾನಂದ ಗೌಡರೇ ವಿಜಯೇಂದ್ರರನ್ನು ಕಿತ್ತು ಹಾಕಿ ಎಂದು ಹೇಳಿರುವುದು ಬಿಜೆಪಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ ಈ ಕುರಿತು ಸದಾನಂದ ಗೌಡ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. "ಆಡಿಯೋ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡುವುದಿಲ್ಲ. ಅದು ಯಾರದ್ದು ಎಂಬುದನ್ನು ಮಾಧ್ಯಮಗಳೇ ಪತ್ತೆಹಚ್ಚಲಿ. ನನ್ನದಲ್ಲದ ಆಡಿಯೋ ಅಥವಾ ವಿಡಿಯೋ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ" ಎಂದಿದ್ದಾರೆ.
ಇದೇ ವೇಳೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡ ಮತದಾನದ ವಿಚಾರವನ್ನು ಉಲ್ಲೇಖಿಸಿದ ಸದಾನಂದಗೌಡ, "ಇದು ಸಾಮಾನ್ಯ ವಿಷಯವಲ್ಲ, ದೊಡ್ಡ ವಿಷಯ. ನಮ್ಮ ಕೆಲ ಶಾಸಕರು ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿದ್ದರು. ನಾನು ಈ ವಿಚಾರವನ್ನು ಪಕ್ಷದೊಳಗೆ ಹೇಳದೇ ಇದ್ದಿದ್ದರೆ ಹೈಕಮಾಂಡ್ಗೆ ಹೇಗೆ ಗೊತ್ತಾಗುತ್ತಿತ್ತು? ಆದರೆ ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಚರ್ಚೆ ಮಾಡುವುದಿಲ್ಲ. ರಾಷ್ಟ್ರೀಯ ನಾಯಕರು ಕೇಳಿದರೆ ಮಾತ್ರ ಉತ್ತರಿಸುತ್ತೇನೆ" ಎಂದು ಸ್ಪಷ್ಟಪಡಿಸಿದರು.
ಮಾಧ್ಯಮ ಪ್ರತಿನಿಧಿಗಳ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಅವರು, "ನಾನು ಕಳ್ಳನಲ್ಲ. ಕಳ್ಳನಾಗಿದ್ದರೆ ಬಾಗಿಲು ಹಾಕಿಕೊಂಡು ಮನೆಯಲ್ಲೇ ಕುಳಿತಿರುತ್ತಿದ್ದೆ. ರಾಷ್ಟ್ರೀಯ ಜವಾಬ್ದಾರಿ ನಿರ್ವಹಿಸಿ ಇಲ್ಲಿಗೆ ಬಂದಿದ್ದೇನೆ. ನಾನು ಮಾತನಾಡುವುದಿಲ್ಲ ಎಂದ ಮೇಲೂ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳುವುದು ಸರಿಯಲ್ಲ" ಎಂದು ಗರಂ ಆದರು. ಇದೇ ವೇಳೆ ತನ್ನ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ವಿರುದ್ಧ ತೀವ್ರ ಟೀಕಿಸಿದ ಸದಾನಂದಗೌಡ, "ಎಸ್.ಆರ್. ವಿಶ್ವನಾಥ್ ಅವರು ಮುತ್ತಪ್ಪ ರೈಯ ಕೈಕೆಳಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ. ಗೂಂಡಾಗಿರಿಯ ಹಿನ್ನೆಲೆ ಇರುವ ವ್ಯಕ್ತಿಯ ಬಗ್ಗೆ ನಾನು ಮಾತನಾಡುವುದಿಲ್ಲ. ಹಣ ಹೊಡೆಯುವುದು, ಲೂಟಿ ಮಾಡುವುದು ಅವರ ಕೆಲಸ" ಎಂದು ಆರೋಪಿಸಿದರು.
ಆಡಿಯೋ ಇಬ್ಬರು ಮಾತನಾಡಿದ ಸಂಭಾಷಣೆಯಾಗಿದ್ದರೂ ಮೊಬೈಲ್ ರೆಕಾರ್ಡ್ ಆಗಿರುವಷ್ಟು ಸ್ಪಷ್ಟವಾಗಿಲ್ಲ. ಸದಾನಂದ ಗೌಡ ಮಾತನಾಡಿದ ವೇಳೆ ಜೊತೆಗಿದ್ದ ವ್ಯಕ್ತಿಯೇ ಇದನ್ನು ರೆಕಾರ್ಡ್ ಮಾಡಿರುವಂತಿದೆ ಎನ್ನುವ ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಪ್ರದೀಪ್ ಎನ್ನುವ ವ್ಯಕ್ತಿ ಯಾರು? ಆತನ ಹಿನ್ನೆಲೆ ಏನು? ನಿಜಕ್ಕೂ ದೆಹಲಿ ನಾಯಕರ ಆಪ್ತನೇ ಅಥವಾ ಆಪ್ತನೆಂದು ಹೇಳಿಕೊಂಡು ರಾಜಕಾರಣಿಗಳ ನಡುವೆ ಪೋಸು ಕೊಟ್ಟು ತಿರುಗುವ ವ್ಯಕ್ತಿಯೇ ಎಂಬುದು ಬಹಿರಂಗವಾಗಿಲ್ಲ.
A purported audio conversation allegedly involving former Karnataka Chief Minister D.V. Sadananda Gowda has triggered a political storm within the BJP, with the viral clip suggesting a strategy to remove Karnataka BJP president B.Y. Vijayendra after October.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm