ಬ್ರೇಕಿಂಗ್ ನ್ಯೂಸ್
14-12-25 11:37 pm HK News Desk ಕರ್ನಾಟಕ
ಬೆಂಗಳೂರು, ಡಿ.14: ದೇಶದ ಅತಿ ಹಿರಿಯ ಶಾಸಕ, ವೀರಶೈವ ಲಿಂಗಾಯತರ ಪ್ರಭಾವಿ ನಾಯಕ, ಉತ್ತರ ಕರ್ನಾಟಕದ ಅತಿ ಪ್ರಭಾವಿ ಕಾಂಗ್ರೆಸಿಗ, ದಾವಣಗೆರೆ ಜಿಲ್ಲೆಯ ಅಭಿವೃದ್ಧಿಯ ಹರಿಕಾರ, 95 ವರ್ಷದ ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ ವಿಧಿವಶರಾಗಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 2004ರಿಂದ ನಿರಂತರ ಶಾಸಕರಾಗಿರುವ ಅವರು 1998ರಲ್ಲಿ ಒಂದು ಬಾರಿ ಸೋಲು ಕಂಡಿದ್ದರು. 1993ರಲ್ಲಿ ಅವರು ವಿಧಾನಸಭೆಗೆ ಕಾಲಿಟ್ಟಾಗಲೇ ಅವರಿಗೆ 63 ಆಗಿತ್ತು. ಅದಕ್ಕೂ ಮೊದಲು ದಾವಣಗೆರೆ ನಗರಸಭೆಗೆ ಮಾತ್ರ ಸೀಮಿತರಾಗಿದ್ದರು. 1967ರಲ್ಲಿ ನಗರಸಭೆ ಮೂಲಕ ರಾಜಕೀಯ ಆರಂಭಿಸಿದ್ದ ಶಾಮನೂರು ಕಲಿತಿದ್ದು ಹತ್ತನೇ ಕ್ಲಾಸು. ತನ್ನ ಜಾಣ್ಮೆಯಿಂದ ಕಟ್ಟಿದ್ದು ಉತ್ತರ ಕರ್ನಾಟಕದಲ್ಲಿ ಅತಿ ದೊಡ್ಡ ಸಾಮ್ರಾಜ್ಯ. ಶಿಕ್ಷಣ, ಆಸ್ಪತ್ರೆ, ಸಕ್ಕರೆ ಕಾರ್ಖಾನೆ ಸೇರಿ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಯ ಹರಿಕಾರನಾಗಿ ಜೀವ ತೇಯ್ದವರು ಶಾಮನೂರು. ಸದ್ಯ ಇವರ ಉದ್ಯಮ ಸಾಮ್ರಾಜ್ಯದ ಆಸ್ತಿ ಹತ್ತು ಸಾವಿರ ಕೋಟಿಗೂ ಮಿಗಿಲಿನದ್ದು. ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಬಾರಿ ಸಚಿವರಾಗಿದ್ದು ಕೊನೆಗಾಲದಲ್ಲು ಸಕ್ರಿಯ ರಾಜಕಾರಣಿಯಾಗಿದ್ದವರು.
ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದ ಶಾಮನೂರು ಶಿವಶಂಕರಪ್ಪ ಅವರು ಆರು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ರಾಜ್ಯದ ವಿವಿಧ ಸರ್ಕಾರಗಳಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು. ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಹಾಲಿ ತೋಟಗಾರಿಕೆ ಸಚಿವರಾಗಿದ್ದು ಸೊಸೆ ಪ್ರಭಾ ಮಲ್ಲಿಕಾರ್ಜುನ ಸಂಸದೆ ಆಗಿದ್ದಾರೆ. 1931ರ ಜೂನ್ 16ರಂದು ದಾವಣಗೆರೆಯಲ್ಲಿ ಸಾಮಾನ್ಯ ವ್ಯಾಪಾರಿ ಕುಟುಂಬದಲ್ಲಿ ಜನಿಸಿದ್ದ ಶಾಮನೂರು ಶಿವಶಂಕರಪ್ಪ ಗುಮಾಸ್ತನಿಂದ ತೊಡಗಿ ಹಂತ ಹಂತವಾಗಿ ಮೇಲೇರಿದವರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗುತ್ತ ಬಂದಿದ್ದು ಹಾಲಿ ಭಾರತದಲ್ಲಿ ರಾಜ್ಯ ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯರಾಗಿದ್ದರು. ಆರು ಸಲ ಶಾಸಕರಾಗಿ, ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದಾರೆ. 1997ರಲ್ಲಿ ದಾವಣಗೆರೆ ಲೋಕಸಭೆ ಮಧ್ಯಂತರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಐದು ದೇಶಕದ ರಾಜಕೀಯ ಜೀವನದಲ್ಲಿ ಒಂದು ಬಾರಿ ಮಾತ್ರ ಸೋಲನ್ನಪ್ಪಿದ್ದರು. 1994, 2004, 2008, 2013, 2018, 2023 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಕೊನೆಯ ಬಾರಿ ತನ್ನ 94ನೇ ಇಳಿ ವಯಸ್ಸಿನಲ್ಲಿ ಶಾಸಕರಾಗಿದ್ದರು. ವಯಸ್ಸಾಗಿದೆ ಎಂದು ಅವರನ್ನು ಬದಿಗಿರಿ ಎಂದು ಹೇಳುವಷ್ಟು ಧೈರ್ಯ ರಾಜ್ಯ ಕಾಂಗ್ರೆಸಿಗೆ ಇರಲಿಲ್ಲ.
ವೀರಶೈವ, ಲಿಂಗಾಯತ ಧರ್ಮದ ಕೂಗು ಎದ್ದಾಗ ಅವೆರಡೂ ಒಂದೇ ಎಂದು ಸಾರಿದ್ದಲ್ಲದೆ, 2012ರಿಂದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದರು. ಮಾನಸಿಕವಾಗಿ ಯಡಿಯೂರಪ್ಪ ಜೊತೆಗೆ ನಿಕಟ ಬಾಂಧವ್ಯ ಇರಿಸಿಕೊಂಡಿದ್ದರು. ಲಿಂಗಾಯತ ಧರ್ಮದ ವಿಚಾರದಲ್ಲಿ ಇಬ್ಬರದ್ದೂ ಒಂದೇ ಅನಿಸಿಕೆ ಆಗಿತ್ತು. ಎಲ್ಲ ಮಠಾಧೀಶರನ್ನೂ ಒಂದೇ ತಕ್ಕಡಿಯಲ್ಲಿ ತರುವುದಕ್ಕೂ ಶಾಮನೂರು ಶ್ರಮಿಸಿದ್ದರು.
Shamanur Shivashankarappa, the country’s senior-most serving legislator, a veteran Congress leader, and a key architect of Davanagere’s development, passed away on Sunday evening at a private hospital in Bengaluru. He was 95 and had been suffering from age-related ailments.
15-12-25 02:23 pm
Bangalore Correspondent
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
Deputy Chief Minister, D.K. Shivakumar: ನೀವು...
14-12-25 03:19 pm
ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನರಲ್ಲ, ಮಂತ್ರಿಗಳ...
14-12-25 02:37 pm
14-12-25 07:20 pm
HK News Desk
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆ...
13-12-25 08:34 pm
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
14-12-25 05:48 pm
Mangalore Correspondent
ಕೇಶವನ ಬದುಕು ಬದಲಿಸಿದ ರಕ್ತಬೀಜ ! ಅಸುರೀತನದ ಜೀವನಕ್...
13-12-25 11:02 pm
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
15-12-25 12:19 pm
Udupi Correspondent
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am
ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಸ್ ಪೂರೈಕೆ ; ಸಾಗಣೆ ವ...
14-12-25 11:10 pm
ಟೀಮ್ ಎಸ್ಡಿಪಿಐ ಹೆಸರಲ್ಲಿ ಹಿಂದುಗಳ ಬಗ್ಗೆ ನಿಂದಿಸಿ...
14-12-25 09:12 pm
Illegal Cattle Transport Case: ಅಕ್ರಮ ಗೋಸಾಗಾಟ...
14-12-25 08:35 pm