ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನರಲ್ಲ, ಮಂತ್ರಿಗಳನ್ನು ಪ್ರಶ್ನಿಸುವ ಹಕ್ಕು ನಮಗಿದೆ ; ಡಿಸಿಎಂ ಡಿಕೆಶಿಗೆ ಉದ್ಯಮಿ ಮೋಹನದಾಸ್ ಪೈ ಕೌಂಟರ್ 

14-12-25 02:37 pm       Bangalore Correspondent   ಕರ್ನಾಟಕ

ಅಂಪಾರ್ಟ್ಮೆಂಟ್ ಮಾಲೀಕ ಕಿರಣ್ ಹೆಬ್ಬಾರ್ ಎಂಬಾತ ಪತ್ರ ಬರೆದು ನಮಗೆ ಬೆದರಿಕೆ ಹಾಕಲು ಬರುತ್ತಿದ್ದಾನೆ. ಅಂತಹ ಗೊಡ್ಡು ಬೆದರಿಕೆಗಳಿಗೆ ನಾನು ಜಗ್ಗಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯನ್ನು ಉದ್ಯಮಿ ಮೋಹನ್‌ದಾಸ್ ಪೈ ಖಂಡಿಸಿದ್ದು ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನ ಅಲ್ಲ ಎಂದು ಕುಟುಕಿದ್ದಾರೆ.‌ 

ಬೆಂಗಳೂರು, ಡಿ.14: ಅಂಪಾರ್ಟ್ಮೆಂಟ್ ಮಾಲೀಕ ಕಿರಣ್ ಹೆಬ್ಬಾರ್ ಎಂಬಾತ ಪತ್ರ ಬರೆದು ನಮಗೆ ಬೆದರಿಕೆ ಹಾಕಲು ಬರುತ್ತಿದ್ದಾನೆ. ಅಂತಹ ಗೊಡ್ಡು ಬೆದರಿಕೆಗಳಿಗೆ ನಾನು ಜಗ್ಗಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯನ್ನು ಉದ್ಯಮಿ ಮೋಹನ್‌ದಾಸ್ ಪೈ ಖಂಡಿಸಿದ್ದು ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನ ಅಲ್ಲ ಎಂದು ಕುಟುಕಿದ್ದಾರೆ.‌ 

ಈ ರೀತಿಯ ಹೇಳಿಕೆ ದೊಡ್ಡ ತಪ್ಪು ನಡೆ. ನೀವು ನಮ್ಮ ಸಚಿವರು, ಜನರ ಪ್ರತಿನಿಧಿಯೇ ಹೊರತು ನಮ್ಮ ಯಾಜಮಾನನಲ್ಲ. ನಮ್ಮದು ಪ್ರಜಾಪ್ರಭುತ್ವ ದೇಶ ಮತ್ತು ಮಂತ್ರಿಗಳನ್ನು ಪ್ರಶ್ನಿಸುವ ಹಕ್ಕು ನಮಗಿದೆ. ನಾಗರಿಕರೊಂದಿಗೆ ಈ ರೀತಿ ಮಾತನಾಡುವುದು ಮತ್ತು ಭಯವನ್ನು ಸೃಷ್ಟಿಸುವುದು ತುಂಬಾ ತಪ್ಪು. ನಾಗರಿಕರು ಸಂಕಷ್ಟದಲ್ಲಿದ್ದಾರೆ. ಅದಕ್ಕಾಗಿ ಪತ್ರ ಬರೆದಿದ್ದಾರೆ. ಅವರಿಗೆ ಸಹಾಯದ ಅಗತ್ಯವಿದೆ. ಸಹಾಯ ಮಾಡುವುದು ನಿಮಗೆ ಒಳ್ಳೆಯದು ಎಂದು ಮೋಹನ್ ದಾಸ್ ಪೈ ಟ್ವೀಟ್ ಮಾಡಿದ್ದಾರೆ. 

ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಕುರಿತು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳ ಪ್ರತಿನಿಧಿಗಳೊಂದಿಗೆ ಡಿಕೆ ಶಿವಕುಮಾರ್ ಸಂವಾದ ನಡೆಸಿದರು. ನಿಮ್ಮ ಸೇವೆ ಮಾಡಿದರೆ ನಮಗೆ ಮತ ಹಾಕುತ್ತೀರಿ ಎಂಬುದಷ್ಟೇ ನಮ್ಮ ಆಸೆ. ಆದರೆ ಯಾವುದೋ ವಿಷಯವನ್ನಿಟ್ಟು ನನಗೆ ಎಚ್ಚರಿಕೆ ಕೊಡಲು ಬಂದರೆ ಅದು ನನ್ನ ಮೇಲೆ ಕೆಲಸ ಮಾಡುವುದಿಲ್ಲ. ಯಾವನೇ ಆಗಿರಲಿ, ಸರ್ಕಾರಕ್ಕೆ ಎಚ್ಚರಿಕೆ ನೀಡುವುದನ್ನು ಸಹಿಸುವುದಿಲ್ಲ ಎಂದು ಹೇಳಿದರು. 

ಕೆಲವರಿಗೆ ನಾನು ಯಾರೆಂದು ತಿಳಿದಿಲ್ಲ ಎಂದು ಭಾವಿಸುತ್ತೇನೆ. ನಾನು ಈ ದೇಶದ ಪ್ರಧಾನಿ ಮತ್ತು ಗೃಹ ಸಚಿವರಿಗೆ ಭಯಪಡದೆ ಜೈಲಿಗೆ ಹೋಗಿ ಬಂದಿದ್ದೇನೆ. ಅಂಪಾರ್ಟ್ಮೆಂಟ್ ಮಾಲೀಕ ಎಂದು ಕಿರಣ್ ಹೆಬ್ಬಾರ್ ಎಂಬಾತ ಪತ್ರ ಬರೆದು, ನಮಗೆ ಬೆದರಿಕೆ ಹಾಕಲು ಮುಂದಾಗಿದ್ದಾನೆ. ನಮ್ಮಲ್ಲಿ ಬಹುದೊಡ್ಡ ಮತದಾರರ ಸಮೂಹವಿದ್ದು, ಬೆಂಗಳೂರಿನ 1.30 ಕೋಟಿ ಮತದಾರರ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವಿದೆ. ಸರ್ಕಾರಗಳು ನಮ್ಮನ್ನು ನಿರ್ಲಕ್ಷಿಸಿದೆ. ಒಂದು ವೇಳೆ ಆಡಳಿತ ಪಕ್ಷ ನಮ್ಮ ಮನವಿ ನಿರ್ಲಕ್ಷಿಸಿದರೆ ಸದ್ಯದಲ್ಲೇ ಜಿಬಿಎ ಚುನಾವಣೆ ಬರುತ್ತಿದೆ, ಅದರಲ್ಲಿ ನೋಡಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು.

In a democracy, power is meant to flow upward from the people. But when those in authority forget this basic principle, the public pushback can be swift—and sharp. Karnataka’s Deputy Chief Minister D.K. Shivakumar recently found himself at the center of such a moment after remarks he made during a public interaction sparked a strong rebuttal from one of India’s most respected corporate voices, Mohandas Pai.