ಬ್ರೇಕಿಂಗ್ ನ್ಯೂಸ್
13-12-25 10:47 pm HK News Desk ಕರ್ನಾಟಕ
ದಾವಣಗೆರೆ, ಡಿ 13 : ಭಯಂಕರ ಶಬ್ದದೊಂದಿಗೆ ಭೂಮಿ ಕೆಲ ಸೆಕೆಂಡ್ ಗಳ ಕಾಲ ಕಂಪಿಸಿದ ಅನುಭವ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮಲ್ಲಹಳ್ಳಿ ಗ್ರಾಮದ ಜನರಿಗೆ ಆಗಿದೆ.
ಚಿಕ್ಕಮಲ್ಲಹಳ್ಳಿ ಅಷ್ಟೇ ಅಲ್ಲದೇ ಸುತ್ತಲಿನ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಲ್ಲಹಳ್ಳಿ, ಚಿತ್ರದುರ್ಗ ತಾಲೂಕಿನ ಕೋಲನ್ಮಳ್ಳಿ ಗ್ರಾಮಗಳಲ್ಲಿಯೂ ಇದೇ ರೀತಿಯ ಅನುಭವವಾಗಿದ್ದು ಭೂ ನಡುಗಿದ್ದರಿಂದ ಕೆಲ ಮನೆಯಲ್ಲಿದ್ದ ಪಾತ್ರೆಗಳು ನೆಲಕ್ಕೆ ಬಿದ್ದಿವೆ. ಬಸ್ ನಲ್ಲಿ ಸಂಚರಿಸುತ್ತಿದ್ದವರಿಗೂ ಭೂಮಿ ಕಂಪಿಸಿದ ಅನುಭವ ಆಗಿದೆ. ಗ್ರಾಮಸ್ಥರು ಆತಂಕದಿಂದ ಮನೆಯಿಂದ ಹೊರಗಡೆ ಬಂದು ನಿಂತಿದ್ದಾರೆ.
ಜಗಳೂರು ತಹಸೀಲ್ದಾರರಿಗೆ ಗ್ರಾಮಸ್ಥರು ವಿಷಯ ತಿಳಿಸಿದ್ದು ಅವರು ಸ್ಥಳಕ್ಕೆ ಬರುವುದಾಗಿ ತಿಳಿಸಿದ್ದಾರೆ. ಇತರ ಅಧಿಕಾರಿಗಳು ಸಹ ಗ್ರಾಮಕ್ಕೆ ಆಗಮಿಸುತ್ತಿದ್ದು ಭೂಕಂಪನ ಹಾಗೂ ಕೇಳಿಬಂದ ಭಯಂಕರ ಶಬ್ಧಕ್ಕೆ ಕಾರಣ ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಇನ್ನು ವಿಜಯನಗರದ ಗಡಿ ಭಾಗದಲ್ಲಿ ಇಂದು ಸಂಜೆ ಭೂಕಂಪನದ ಅನುಭವವಾಗಿದ್ದು, ಜನ ಆತಂಕಗೊಂಡಿದ್ದಾರೆ.
ಸಂಜೆ 7.10ರ ಸುಮಾರಿಗೆ ಗಡಿ ಗ್ರಾಮ ಟಿ.ಕಲ್ಲಹಳ್ಳಿ, ಚಳ್ಳಕೆರೆ ತಾಲ್ಲೂಕಿನ ಟಿ.ಕೋಲಮ್ಮನಹಳ್ಳಿ ಸೇರಿದಂತೆ ಜಗಳೂರು ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಭಾರಿ ಶಬ್ದದೊಂದಿಗೆ ಭೂಮಿ ನಡುಗಿದ ಅನುಭವ ಜನರಿಗೆ ಅಗಿದೆ.
Residents of Chikkamallahalli village in Jagalur taluk, Davanagere district, experienced tremors accompanied by a loud rumbling sound as the ground shook for a few seconds, creating panic among villagers.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm