Yatnal, Dk Shivakumar, Vijayendra: ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ; ಡಿಕೆಶಿಯನ್ನ ಅಮಿತ್ ಶಾ ಬಳಿ ಕರೆದುಕೊಂಡು ಹೋಗಿದ್ರು, ಡಿನ್ನರ್, ಇನ್ನರ್ ಎಲ್ಲಾ ನಡೆದಿದೆ,  ಹೊಸ ಬಾಂಬ್ ಸಿಡಿಸಿದ ಯತ್ನಾಳ್ ! 

12-12-25 07:47 pm       HK News Desk   ಕರ್ನಾಟಕ

ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿ ಕರೆದುಕೊಂಡು ಹೋಗಿದ್ದರು ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಈ ಕುರಿತಾಗಿ ಮಾತನಾಡಿದ ಅವರು, ರಾಜ್ಯ ರಾಜಕೀಯದ ಬಗ್ಗೆ ಮಹತ್ವದ ಮಾಹಿತಿ ನೀಡಿದರು.

ಬೆಳಗಾವಿ, ಡಿ 12 : ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿ ಕರೆದುಕೊಂಡು ಹೋಗಿದ್ದರು ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಈ ಕುರಿತಾಗಿ ಮಾತನಾಡಿದ ಅವರು, ರಾಜ್ಯ ರಾಜಕೀಯದ ಬಗ್ಗೆ ಮಹತ್ವದ ಮಾಹಿತಿ ನೀಡಿದರು.

ವಿಜಯೇಂದ್ರ ಉಪಮುಖ್ಯಮಂತ್ರಿ ಆಗಬೇಕು ಎಂಬ ನಿರೀಕ್ಷೆಯಲ್ಲಿದ್ದರು. ಅದಕ್ಕೆ ಅಮಿತ್ ಶಾ ಬಳಿ ಡಿಕೆ ಶಿವಕುಮಾರ್ ಅವರನ್ನು ಕರೆದುಕೊಂಡು ಹೋಗಿದ್ದರು ಎಂದು ಹೇಳಿಕೆ ನೀಡಿದರು.

ಡಿಕೆಶಿ ಡಿನ್ನರ್ ಮೀಟಿಂಗ್ ಬಹಳ ಜೋರಾಗಿ ನಡೆಸಿದ್ದಾರೆ. ಜನವರಿ 19ರ ಬಳಿಕ ಎಲ್ಲಾ ಗೊತ್ತಾಗುತ್ತೆ. ಡಿನ್ನರ್, ಇನ್ನರ್ ಎಲ್ಲಾ ನಡೆದಿದೆ. ಶಾಸಕರ ಬೆಂಬಲ ಯಾಚನೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಹಿಂದೆ ಒಂದು ಬಾರಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಇವರ ಬೇಡಿಕೆಯನ್ನು ತಿರಸ್ಕರಿಸಿತ್ತು ಎಂದರು. ನನಗೆ ನಂಬರ್ ಒನ್ ಸ್ಥಾನ ಕೊಟ್ಟರೆ ನಾನು ಬಿಜೆಪಿಗೆ ಹೋಗುತ್ತೇನೆ. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಆಮೇಲೆ ಸಿಎಂ ಸ್ಥಾನ. ಸುಮ್ಮನೆ ನಾನ್ಯಾಕೆ ಹೋಗಲಿ ಎಂದರು‌.

ಕೆಲವು ಬಿಜೆಪಿ ಶಾಸಕರು ನನ್ನನ್ನು ಭೇಟಿ ಮಾಡಿದ್ದರು. ನೀವು ಮತ್ತೆ ಪಕ್ಷಕ್ಕೆ ಬರುವಂತೆ ಆಹ್ವಾನ ಮಾಡಿದ್ದರು. ನಾನು ಅವರ ಬಳಿ ನಂಬರ್ ಒನ್ ಸ್ಥಾನ ಕೊಟ್ಟರೆ ಬಿಜೆಪಿಗೆ ಬರುತ್ತೇನೆ ಎಂದಿದ್ದೇನೆ. ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಿರಿಸಿದರೆ ನಾನು ಬರಲು ಸಿದ್ದನಿಲ್ಲ ಎಂದಿದ್ದೇನೆ ಎಂದು ವಿವರಿಸಿದರು.

Suspended BJP MLA Basangouda Patil Yatnal has made a sensational claim that BJP state president B.Y. Vijayendra had once taken Karnataka Deputy Chief Minister D.K. Shivakumar to meet Union Home Minister Amit Shah, allegedly in an effort to push his own political ambitions.