ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆ ಬರೆದ ವಿದ್ಯಾರ್ಥಿನಿ ; ಬಾಲಕಿಯ ಅಪರೂಪದ ‘ಗಾಂಧಾರಿ’ ವಿದ್ಯೆಗೆ ಬಳ್ಳಾರಿ ಮಂದಿ ಅಚ್ಚರಿ

11-12-25 12:44 pm       HK News Desk   ಕರ್ನಾಟಕ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಪರ್ಶ, ವಾಸನೆ ಹಾಗೂ ಶಬ್ದದಿಂದಲೇ ವ್ಯಕ್ತಿ ಹಾಗೂ ವಸ್ತುಗಳನ್ನು ಗುರುತಿಸುವ ಅಪರೂಪದ ‘ ಗಾಂಧಾರಿ ಕಲೆ ’ ಕರಗತಮಾಡಿಕೊಂಡಿರುವ ವಿದ್ಯಾರ್ಥಿನಿ ಹಿಮಾಬಿಂದು ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾಳೆ.

ಬಳ್ಳಾರಿ, ಡಿ 11 : ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಪರ್ಶ, ವಾಸನೆ ಹಾಗೂ ಶಬ್ದದಿಂದಲೇ ವ್ಯಕ್ತಿ ಹಾಗೂ ವಸ್ತುಗಳನ್ನು ಗುರುತಿಸುವ ಅಪರೂಪದ ‘ ಗಾಂಧಾರಿ ಕಲೆ ’ ಕರಗತಮಾಡಿಕೊಂಡಿರುವ ವಿದ್ಯಾರ್ಥಿನಿ ಹಿಮಾಬಿಂದು ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾಳೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 8ನೇ ತರಗತಿಯ ಪರೀಕ್ಷೆ ಬರೆಯುವ ಮೂಲಕ ತಮ್ಮ ಸೇಹಿತ್ನರು, ಪೋಷಕರು ಹಾಗೂ ಶಿಕ್ಷಕರಿಗೆ ಅಚ್ಚರಿ ಮೂಡಿಸಿದ್ದಾಳೆ.

ಹಿಮಾಬಿಂದು ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದ ರಾಮಾಂಜಿನಿ ಹಾಗೂ ಕವಿತಾ ದಂಪತಿ ಹಿರಿಯ ಮಗಳು. ತೀರಾ ಅಪರೂಪದ ‘ಗಾಂಧಾರಿ’ ವಿದ್ಯೆಯನ್ನು ಆನ್‌ಲೈನ್‌ನಲ್ಲಿಕರಗತಮಾಡಿಕೊಂಡಿದ್ದು ವಿಶೇಷ. ಬಳ್ಳಾರಿಯ ನಗರದ ತಾಳೂರು ರಸ್ತೆಯಲ್ಲಿನ ಕುರುವಳ್ಳಿ ತಿಮ್ಮಪ್ಪ ಮೆಮೋರಿಯಲ್‌ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ನಲ್ಲಿ8ನೇ ತರಗತಿಯನ್ನು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಪ್ರಸ್ತುತ ಶೈಕ್ಷ ಣಿಕ ವರ್ಷದ ಎಫ್‌ಎ4ನ ಆರು ವಿಷಯಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆಯನ್ನು ಬರೆದಿದ್ದಾಳೆ.

ಪದ್ಮನಾಭ ಗುರೂಜಿ ಆನ್‌ಲೈನ್‌ನಲ್ಲಿ‘ಗಾಂಧಾರಿ’ ವಿದ್ಯೆಯ ಬಗ್ಗೆ ತರಬೇತಿ ನೀಡುತ್ತಾರೆ. ಯಾವುದೇ ಶುಲ್ಕ ಪಡೆಯುವುದಿಲ್ಲ. ನಾವು ಗುರುಕಾಣಿಕೆಯಾಗಿ 2 ಸಾವಿರ ರೂ., ನೀಡಿದ್ದೇವೆ ಅಷ್ಟೇ. ನನ್ನ ಮಗಳು ನಾಲ್ಕನೇ ತರಗತಿಯಲ್ಲಿಕಲಿಕೆಯಲ್ಲಿಬಹಳ ಹಿಂದುಳಿದಿದ್ದಳು. ಗಾಂಧಾರಿ ವಿದ್ಯೆ ಕಲಿಸಿದರೇ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ, ಸದಾ ಕ್ರೀಯಾ ಶೀಲರಾಗಿ ಇರುತ್ತಾರೆ ಎನ್ನುವ ಸ್ನೇಹಿತರ ಸಲಹೆ ಮೇರೆಗೆ ಗಾಂಧಾರಿ ವಿದ್ಯೆ ಕಲಿಸಿದೆ.

ಗಾಂಧಾರಿ ವಿದ್ಯೆ ಕರಗತದಿಂದ ಜ್ಞಾಪಕ ಶಕ್ತಿ ಹೆಚ್ಚಾಗಿದೆ. ತರಗತಿಗೆ ಪ್ರಥಮ ವಿದ್ಯಾರ್ಥಿಯಾಗಿದ್ದಾಳೆ. ಗಾಂಧಾರಿ ವಿದ್ಯೆಯಲ್ಲಿ1ನೇ ಹಂತ, 2ನೇ ಹಂತ ಮತ್ತು 3ನೇ ಹಂತ ಹೀಗೆ ನಾನಾ ಹಂತಗಳಿವೆ. ಪ್ರಸುತ್ತ ನನ್ನ ಮಗಳು 2 ಹಂತದ ಗಾಂಧಾರಿ ವಿದ್ಯೆಯನ್ನು ಪೂರ್ಣಗೊಳಿಸಿದ್ದಾಳೆ ಎನ್ನುತ್ತಾರೆ ಹಿಮಾಬಿಂದು ತಂದೆ ರಾಮಾಂಜಿನಿ ರೆಡ್ಡಿ.

A young girl from Ballari has stunned teachers, parents and classmates by writing her Class 8 examinations blindfolded. Using only touch, smell, and sound to identify people and objects, the student has mastered the rare skill known as ‘Gandhari Vidya’—often compared to extraordinary sensory perception.