ಬ್ರೇಕಿಂಗ್ ನ್ಯೂಸ್
05-12-25 10:00 pm HK News Desk ಕರ್ನಾಟಕ
ಶಿವಮೊಗ್ಗ, ಡಿ.5 : ವೈದ್ಯೆಯಾಗಿದ್ದ ತಾಯಿ ಮತ್ತು ಮಗ ಪ್ರತ್ಯೇಕವಾಗಿ ತಮ್ಮ ತಮ್ಮ ಬೆಡ್ರೂಮ್ಗಳಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ನಗರದ ಅಶ್ವತ್ಥ ಬಡಾವಣೆಯಲ್ಲಿ ನಡೆದಿದೆ.
ತಾಯಿ ಡಾ.ಜಯಶ್ರೀ(57) ಮತ್ತು ಮಗ ಆಕಾಶ್(32) ಮೃತರು. ಜಯಶ್ರೀ ಶಿವಮೊಗ್ಗದ ಹೊಮ್ಮರಡಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞೆಯಾಗಿದ್ದರು. ನಿನ್ನೆ ರಾತ್ರಿ ತಾಯಿ ಮತ್ತು ಮಗನ ಮಧ್ಯೆ ಜಗಳವಾಗಿದೆ ಎನ್ನಲಾಗಿದೆ. ಬಳಿಕ ಮಗ ಹಾಗೂ ಸೊಸೆ ಹೆಸರಿಗೆ ಆಸ್ತಿ ಬರೆದಿಟ್ಟು ಡಾ. ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡೆತ್ ನೋಟ್ ಬರೆದಿಟ್ಟ ತಾಯಿ
ಆತ್ಮಹತ್ಯೆಗೂ ಮೊದಲು ತಾಯಿ ಡೆತ್ ನೋಟ್ ಬರೆದಿಟ್ಟಿದ್ದಾರೆ. ಅದನ್ನು ನೋಡಿ ಮಗ ಆಕಾಶ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೂರು ವರ್ಷದ ಹಿಂದೆಯಷ್ಟೇ ಆಕಾಶ್ನ ಮೊದಲ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಮಗ ಆಘಾತಕ್ಕೆ ಒಳಗಾಗಿದ್ದ. ಆಘಾತದಿಂದ ಹೊರಬರಲು ಕಳೆದ ಮೇ ತಿಂಗಳಲ್ಲಿ ಆಕಾಶ್ ಮತ್ತೊಂದು ಮದುವೆಯಾಗಿ ಆರು ತಿಂಗಳಾಗಿತ್ತು. ಎರಡನೇ ಪತ್ನಿ ಮನೆಯಲ್ಲಿರುವಾಗಲೇ ಆಕಾಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂಲಗಳ ಪ್ರಕಾರ, ಆಕಾಶ್ ರಿಯಲ್ ಎಸ್ಟೇಟ್‌ನಲ್ಲಿ ತಾನು ಹಣ ತೊಡಿಸಬೇಕು ಎಂದು ಅದಕ್ಕಾಗಿ ನನಗೆ ಹಣ ಬೇಕು ಎಂದು ಕೇಳುತ್ತಿದ್ದ ಎನ್ನಲಾಗುತ್ತಿದೆ. ಇದಕ್ಕೋಸ್ಕರನೇ ತಾಯಿ ಮತ್ತು ಮಗನ ಮಧ್ಯೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು. ಇದು ಇತ್ತೀಚಿಗೆ ಮದುವೆಯಾಗಿ ಬಂದ ನವ್ಯಗೆ ಕೂಡ ಮಾಮೂಲಾಗಿತ್ತು. ಆದರೆ ಈ ಜಗಳ ವಿಕೋಪಕ್ಕೆ ಹೋಗಿದ್ದು ಅದು ಈ ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಮತ್ತೊಂದು ಮೂಲಗಳ ಪ್ರಕಾರ ಇಬ್ಬರಿಗೂ ಮೊದಲನೇ ಪತ್ನಿಯ ಸಾವಿನ ಭಯ, ಖಿನ್ನತೆ ಕಾಡುತ್ತಿತ್ತು ಎನ್ನಲಾಗುತ್ತಿದೆ. ಮೂಲತಃ ನ್ಯಾಮತಿಯ ನಿವಾಸಿಗಳಾದ ಹೊಮ್ಮರಡಿ ಕುಟುಂಬಕ್ಕೆ ಆಸ್ತಿಗೇನು ಕೊರತೆ ಇರಲಿಲ್ಲ 25 ಎಕರೆ ತೋಟ, ಇರಲು ಮನೆ, ಹೊಮ್ಮರಡಿ ಕಾಂಪ್ಲೆಕ್ಸ್ ಅದರ ಬಾಡಿಗೆ ಹಣ, ಹೊನ್ನಾಳಿಯಲ್ಲಿ ಸೈಟ್‌ಗಳು ಎಲ್ಲವೂ ಇದ್ದವು ಆದರೆ ಬಹು ಮುಖ್ಯವಾಗಿ ಬೇಕಾಗಿದ್ದ ಮಾನಸಿಕ ನೆಮ್ಮದಿ ಇರಲಿಲ್ಲ ಅದುವೇ ಈ ಆತ್ಮಹತ್ಯೆಗೆ ಕಾರಣವಾಗಿರಬಹುದು ಎನ್ನಲಾಗಿದೆ.
ಇಬ್ಬರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ವಿನೋಬನಗರ ಠಾಣಾ ಪೊಲೀಸರು ಮನೆ ಪರಿಶೀಲನೆ ಮಾಡಿದ್ದಾರೆ.
A tragic incident unfolded in Ashwatha Badavane, Shivamogga, where a well-known obstetrician, Dr. Jayashree (57), and her son Akash (32) died by suicide in separate bedrooms while Akash’s second wife was present in the house.
30-04-26 08:16 pm
HK News Staffer
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
01-05-26 01:45 pm
HK News Staffer
ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂ...
01-05-26 11:48 am
ಬಾಂಬ್ ಮಾದರಿಯ ವಸ್ತು ಸ್ಫೋಟಿಸಿ ರೀಲ್ಸ್ ಶೂಟಿಂಗ್ ;...
01-05-26 10:30 am
ಗುದದ್ವಾರದಲ್ಲಿ ಮೊಬೈಲ್ ಬಚ್ಚಿಟ್ಟು ಜೈಲು ಎಂಟ್ರಿಯಾದ...
01-05-26 09:39 am
ಸೌಜನ್ಯಾ ಪ್ರಕರಣ ಮರು ತನಿಖೆಗೆ ಸುಪ್ರೀಂ ಕೋರ್ಟಿಗೆ ಅ...
30-04-26 04:30 pm