ಬ್ರೇಕಿಂಗ್ ನ್ಯೂಸ್
27-11-25 06:30 pm HK News Desk ಕರ್ನಾಟಕ
ಕಲಬುರಗಿ, ನ 27 : ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅಪಘಾತಕ್ಕೀಡಾದ ಸ್ಥಳವಾದ ಕಲಬುರಗಿಯ ಜೇವರ್ಗಿ ಬಳಿ FSL ತಂಡ ಪರಿಶೀಲನೆ ನಡೆಸುತ್ತಿದೆ. ಕುಟುಂಬಸ್ಥರಿಂದ ಕಾರ್ ಚಾಲಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಇತ್ತ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೀಳಗಿಯವರ ಸ್ನೇಹಿತ ಈರಣ್ಣ ಸಿರಸಂಗಿ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 4 ಕ್ಕೆ ಏರಿಕೆಯಾಗಿದೆ.

ಜೇವರ್ಗಿ ಬಳಿ ಮಂಗಳವಾರ ನಡೆದಿದ್ದ ಕಾರ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಈರಣ್ಣ ಸಿರಸಂಗಿ ಅವರನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದ ತೀವ್ರತೆಗೆ ದೇಹದ ಹಲವು ಎಲುಬುಗಳು ಪುಡಿ ಪುಡಿಯಾಗಿದ್ದವು. ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ನಸುಕಿನ ಜಾವ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ. ಕಾರು ಚಾಲಕನಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.
ಚಾಲಕನ ವಿರುದ್ಧ ಪ್ರಕರಣ ದಾಖಲು:
ಕಾರ್ ಅಪಘಾತಕ್ಕೆ ಸಂಬಂಧಿಸಿದಂತೆ ಕಾರ್ ಚಾಲಕ ಆರೋಕಿಯಾ ಆಂಥೋನಿ ರಾಜ್ ವಿರುದ್ಧ ಮೃತ ಮಹಾಂತೇಶ ಬೀಳಗಿ ಸಂಬಂಧಿ ಬಸವರಾಜ್ ಕಮರಟಗಿ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ. ಚಾಲಕನ ನಿರ್ಲಕ್ಷ್ಯದಿಂದ ರಸ್ತೆ ಬದಿಯ ಬ್ರಿಡ್ಜ್‌ಗೆ ಕಾರು ಡಿಕ್ಕಿಯಾಗಿ ನಾಲ್ಕೈದು ಬಾರಿ ಕಾರ್ ಪಲ್ಟಿಯಾಗಿದೆ. ಇದರಿಂದ ಸ್ಥಳದಲ್ಲಿ ಇಬ್ಬರು ಹಾಗೂ ಐಎಎಸ್ ಅಧಿಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಅನ್ವಯ 281, 125(ಅ)125(ಆ)106 ಬಿಎನ್‌ಎಸ್ ಕಾಯಿದೆ ಅಡಿ ಎಫ್‌ಐಆರ್ ದಾಖಲಾಗಿದೆ.
ಏಕಕಾಲಕ್ಕೆ ನಾಲ್ವರ ಅಂತ್ಯಕ್ರಿಯೆ;
ಇನ್ನು ಬುಧವಾರ ರಾಮದುರ್ಗ ಬಳಿ ಇರುವ ಜಮೀನಿನಲ್ಲಿ ಮಹಾಂತೇಶ್ ಬೀಳಗಿ ಸೇರಿ ಅಪಘಾತದಲ್ಲಿ ಮೃತಪಟ್ಟ ಒಟ್ಟು ನಾಲ್ವರ ಅಂತ್ಯಕ್ರಿಯೆಯನ್ನು ಏಕಕಾಲಕ್ಕೆ ನೆರವೇರಿಸಲಾಯಿತು.
ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗಿದ್ದು, ಮಹಾಂತೇಶ್ ಬೀಳಗಿ ಅವರ ತಾಯಿ ಸಮಾಧಿ ಪಕ್ಕದಲ್ಲೇ ಅವರ ಅಂತಿಮ ಕಾರ್ಯ ನಡೆದಿದೆ.
ಇದಕ್ಕೂ ಮುನ್ನ ರಾಮದುರ್ಗ ಪಟ್ಟಣದ ಪಂಚಗಟ್ಟಿಮಠ ಶಾಲಾ ಮೈದಾನದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನ ಆಗಮಿಸಿ ಅಂತಿಮ ದರ್ಶನ ಪಡೆದರು.
An FSL team inspected the accident site near Jewargi where IAS officer Mahantesh Bilagi died in a tragic car crash. The officer’s family has filed a case against the car driver, alleging overspeeding and negligence.
27-11-25 08:14 pm
HK News Desk
ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು ; ಕುಟುಂಬಸ...
27-11-25 06:30 pm
ಕಾಂಗ್ರೆಸ್ ಕಚ್ಚಾಟದಲ್ಲಿ ಯಾರು ಹೊರಬಂದರೂ ಬಿಜೆಪಿ ಬೆ...
27-11-25 04:27 pm
ಹೊಸಕೋಟೆ ಬಳಿ KSRTC ಬಸ್ ಹಾಗೂ ಕ್ಯಾಂಟರ್ ನಡುವೆ ಭೀ...
27-11-25 12:56 pm
ಡಿಕೆಶಿ ಮುಖ್ಯಮಂತ್ರಿಯಾದರೆ ಒಪ್ಪಿಕೊಳ್ಳುತ್ತೇವೆ ; ಮ...
27-11-25 12:55 pm
26-11-25 07:16 pm
HK News Desk
ಅಯೋಧ್ಯೆಯಲ್ಲಿ ಹತ್ತಡಿ ಎತ್ತರದ ಬೃಹತ್ ಭಗವಾಧ್ವಜ ಅನಾ...
25-11-25 04:30 pm
ಚೆನ್ನೈ ; ಎರಡು ಖಾಸಗಿ ಬಸ್ಗಳ ನಡುವೆ ಅಪಘಾತ, 6 ಮಂದ...
24-11-25 10:04 pm
ಬಾಲಿವುಡ್ ಚಿತ್ರರಂಗದ ದಂತಕಥೆ, 'ಹೀ ಮ್ಯಾನ್' ಖ್ಯಾತ...
24-11-25 03:37 pm
Explosives Gelatin Sticks, High Alert in Utta...
23-11-25 09:21 pm
26-11-25 07:21 pm
Mangalore Correspondent
ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್ ವರೆಗೆ ಮೋದಿ ರೋಡ್ ಶ...
26-11-25 03:34 pm
ಪ್ರಧಾನಿ ಮೋದಿ ಆಗಮನದಿಂದ ಸಂಚಾರ ತೊಡಕು ; ನ.28ರಂದು...
25-11-25 10:51 pm
ಪುಸ್ತಕ ಮೇಳದಲ್ಲಿ ಸಾಹಿತಿಗಳ ಗೌರವಕ್ಕಾಗಿ 25 ಸಾವಿರದ...
25-11-25 10:07 pm
ಕ್ಯಾಂಪ್ಕೋ ಆಡಳಿತ ಮಂಡಳಿಗೆ ಚುನಾವಣೆ ; ಸಹಕಾರ ಭಾರತಿ...
25-11-25 09:53 pm
26-11-25 10:43 pm
Mangalore Correspondent
Mangalore Crime, Ullal Police: 916 ಹಾಲ್ ಮಾರ್ಕ...
26-11-25 06:26 pm
ಲಂಡನ್ ಲೇಡಿಯೆಂದು ಹೇಳಿ ವಂಚನೆ ; 30 ಲಕ್ಷದ ಪೌಂಡ್ಸ್...
26-11-25 02:39 pm
ಎಡಪದವು ; ಯುವಕನಿಗೆ ತಲವಾರು ದಾಳಿ ನಡೆಸಿದ ನಾಲ್ವರು...
26-11-25 12:10 pm
Hubballi Gold Robbery: ಬೆಂಗಳೂರು ದರೋಡೆ ಬೆನ್ನಲ್...
25-11-25 05:03 pm