ರಾಷ್ಟ್ರಪತಿಗಳೇ ಆಗಿರಲಿ ಅಥವಾ ನಾನೇ ಆಗಿರಲಿ, ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು ; 'ವರ್ಡ್ ಪವರ್ ಈಸ್ ವರ್ಲ್ಡ್ ಪವರ್', ಸಿದ್ದುಗೆ ಪರೋಕ್ಷವಾಗಿ ಡಿಕೆ ಟಾಂಗ್‌ ?  

27-11-25 11:55 am       Bangalore Correspondent   ಕರ್ನಾಟಕ

ರಾಜ್ಯ ರಾಜಕೀಯದಲ್ಲಿ ಮತ್ತೆ ‘ಕುರ್ಚಿ’ಯ ಕನವರಿಕೆ ಶುರುವಾಗಿದೆ. ಇದೇ ಹೊತ್ತಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಬೆಂಗಳೂರಿನಲ್ಲಿ ನೀಡಿದ ಒಂದು ಹೇಳಿಕೆ ಈಗ ಕಾಂಗ್ರೆಸ್ ಪಾಳಯದಲ್ಲಿ ಅಷ್ಟೇ ಅಲ್ಲ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು, ನ 27 : ರಾಜ್ಯ ರಾಜಕೀಯದಲ್ಲಿ ಮತ್ತೆ ‘ಕುರ್ಚಿ’ಯ ಕನವರಿಕೆ ಶುರುವಾಗಿದೆ. ಇದೇ ಹೊತ್ತಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಬೆಂಗಳೂರಿನಲ್ಲಿ ನೀಡಿದ ಒಂದು ಹೇಳಿಕೆ ಈಗ ಕಾಂಗ್ರೆಸ್ ಪಾಳಯದಲ್ಲಿ ಅಷ್ಟೇ ಅಲ್ಲ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ವರ್ಡ್ ಪವರ್ ಈಸ್ ವರ್ಲ್ಡ್ ಪವರ್' (ಮಾತಿನ ಶಕ್ತಿಯೇ ವಿಶ್ವದ ಶಕ್ತಿ) ಎಂದು ಡಿಕೆಶಿ ಹೇಳುವ ಮೂಲಕ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ಹಳೆಯ ಒಪ್ಪಂದವನ್ನು ನೆನಪಿಸಿದ್ದಾರೆ ಎಂಬ ವಿಶ್ಲೇಷಣೆಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.

ಆದರೆ, ಕಾಂಗ್ರೆಸ್‌ ನಾಯಕರ ನಡುವೆ ನಡೆದಿದೆ ಎನ್ನಲಾದ ಆ ಒಪ್ಪಂದವಾದರೂ ಏನು? ಡಿಕೆ ಶಿವಕುಮಾರ್‌ ಅವರಿಗೆ ನೀಡಿದ್ದ ಮಾತು ಏನು? ಈ ಮಾತು ಕೊಟ್ಟವರು ಯಾರು? ಈ ಯಾವೊಂದು ವಿಚಾರವನ್ನೂ ತಿಳಿಸದೆ ಒಗಟಿನ ರೀತಿಯಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳು ಮಾತನಾಡಿದ್ದಾರೆ.

ಮಾತಿನ ಮರ್ಮವೇನು?

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ, “ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ಅತಿ ದೊಡ್ಡ ಶಕ್ತಿ. ಅದು ನ್ಯಾಯಾಧೀಶರೇ ಆಗಿರಲಿ, ರಾಷ್ಟ್ರಪತಿಗಳೇ ಆಗಿರಲಿ ಅಥವಾ ನಾನೇ ಆಗಿರಲಿ, ಯಾರೇ ಆಗಿದ್ದರೂ ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು,” ಎಂದು ಪ್ರತಿಪಾದಿಸಿದರು.

ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ತತ್ವದಂತೆ ಕಂಡರೂ, ಪ್ರಸ್ತುತ ರಾಜ್ಯ ರಾಜಕೀಯದ ಸನ್ನಿವೇಶದಲ್ಲಿ ಇದು ಮುಖ್ಯಮಂತ್ರಿ ಹುದ್ದೆಯ ಹಂಚಿಕೆಯ ಒಪ್ಪಂದದ ಕುರಿತಾದ ನೇರ ಸಂದೇಶ ಎಂದೇ ಭಾವಿಸಲಾಗುತ್ತಿದೆ.

Karnataka politics has heated up again as Deputy CM and KPCC president DK Shivakumar sparked discussions with a cryptic statement during a Constitution Day event. Saying “Word power is world power…