DK Shivakumar: ಮುಖ್ಯಮಂತ್ರಿ ಬದಲಾವಣೆ ನಾಲ್ಕು ಜನರ ಮಧ್ಯೆ ನಡೆದ ರಹಸ್ಯ ಒಪ್ಪಂದ, ನಾನು ನನ್ನ ಆತ್ಮಸಾಕ್ಷಿಯನ್ನು ನಂಬುತ್ತೇನೆ ; ಡಿಕೆಶಿ ಸ್ಫೋಟಕ ಹೇಳಿಕೆ 

25-11-25 07:58 pm       Bangalore Correspondent   ಕರ್ನಾಟಕ

ರಾಜ್ಯ ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಜಟಾಪಟಿ ತೀವ್ರಗೊಳ್ಳುತ್ತಿದ್ದು, ಇದರ ನಡುವಲ್ಲೇ ಡಿ.ಕೆ. ಶಿವಕುಮಾರ್​ ಸ್ಫೋಟಕ ಹೇಳಿಕೆ ನೀಡಿದ್ದು, ನನ್ನನ್ನು ಮುಖ್ಯಮಂತ್ರಿ ಮಾಡಿ ಅಂತ ನಾನು ಕೇಳಿಯೇ ಇಲ್ಲ. ಮುಖ್ಯಮಂತ್ರಿ ಬದಲಾವಣೆ ವಿಷಯವನ್ನು ಸಾರ್ವಜನಿಕವಾಗಿ ಚರ್ಚಿಸಲು ಬಯಸುವುದೂ ಇಲ್ಲ. ಇದು ಪಕ್ಷದಲ್ಲಿ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ"ವಾಗಿದೆ. ನಾನು ಆತ್ಮಸಾಕ್ಷಿಯನ್ನು ನಂಬುತ್ತೇನೆ ಎಂದಿದ್ದಾರೆ.

ಬೆಂಗಳೂರು, ನ.25: ರಾಜ್ಯ ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಜಟಾಪಟಿ ತೀವ್ರಗೊಳ್ಳುತ್ತಿದ್ದು, ಇದರ ನಡುವಲ್ಲೇ ಡಿ.ಕೆ. ಶಿವಕುಮಾರ್​ ಸ್ಫೋಟಕ ಹೇಳಿಕೆ ನೀಡಿದ್ದು, ನನ್ನನ್ನು ಮುಖ್ಯಮಂತ್ರಿ ಮಾಡಿ ಅಂತ ನಾನು ಕೇಳಿಯೇ ಇಲ್ಲ. ಮುಖ್ಯಮಂತ್ರಿ ಬದಲಾವಣೆ ವಿಷಯವನ್ನು ಸಾರ್ವಜನಿಕವಾಗಿ ಚರ್ಚಿಸಲು ಬಯಸುವುದೂ ಇಲ್ಲ. ಇದು ಪಕ್ಷದಲ್ಲಿ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ"ವಾಗಿದೆ. ನಾನು ಆತ್ಮಸಾಕ್ಷಿಯನ್ನು ನಂಬುತ್ತೇನೆ ಎಂದಿದ್ದಾರೆ.

ನಾನು ಪಕ್ಷಕ್ಕೆ ಯಾವುದೇ ಮುಜುಗರವನ್ನುಂಟು ಮಾಡಲು ಮತ್ತು ಪಕ್ಷವನ್ನು ದುರ್ಬಲಗೊಳಿಸಲು ಬಯಸುವುದಿಲ್ಲ ಎಂದು ಹೇಳಿದ ಅವರು, ಇದ್ದರೆ ನಾವೆಲ್ಲ ಜೊತೆಗೆ, ಪಕ್ಷವನ್ನು ನಾನು ವೀಕ್ ಮಾಡುವುದಿಲ್ಲ. ಸಿದ್ದರಾಮಯ್ಯ ಬಜೆಟ್ ಮಂಡಿಸ್ತೇನೆ ಅಂದಿದ್ದಾರೆ, ಮಂಡಿಸಲಿ. ಅವರು ವಿಪಕ್ಷ ನಾಯಕರಾಗಿಯೂ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ಕೂಡ ದುಡಿದಿದ್ದಾರೆ. ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ ಎಂದು ಡಿಕೆಶಿ ಹೇಳಿದ್ದಾರೆ.

"ನಾನು ನನ್ನನ್ನು ಸಿಎಂ ಮಾಡಿ ಅಂತ ಯಾರನ್ನೂ ಕೇಳಿಲ್ಲ. ಇದು ಐದು ಮತ್ತು ಆರು ಜನರ ನಡುವಿನ ರಹಸ್ಯ ಒಪ್ಪಂದ. ನಾನು ಇದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಬಯಸುವುದಿಲ್ಲ. ನಾನು ನನ್ನ ಆತ್ಮಸಾಕ್ಷಿಯನ್ನು ನಂಬುತ್ತೇನೆ. ನಾವು ನಮ್ಮ ಆತ್ಮಸಾಕ್ಷಿಯೊಂದಿಗೆ ಕೆಲಸ ಮಾಡಬೇಕು. ಪಕ್ಷಕ್ಕೆ ಯಾವುದೇ ರೀತಿಯಲ್ಲಿ ಮುಜುಗರ ಉಂಟುಮಾಡಲು ಮತ್ತು ಅದನ್ನು ದುರ್ಬಲಗೊಳಿಸಲು ನಾನು ಬಯಸುವುದಿಲ್ಲ. ಪಕ್ಷ ಇದ್ದರೆ, ನಾವು" ಎಂದು ಡಿಕೆ ಶಿವಕುಮಾರ್ ಅವರು ವರದಿಗಾರರ ಪ್ರಶ್ನೆಗೆ ಉತ್ತರಿಸಿದರು.

ತಮ್ಮ ತವರು ಕ್ಷೇತ್ರ ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಅವರು ಹಿರಿಯ ನಾಯಕರು. ಅವರು ಪಕ್ಷಕ್ಕೆ ಆಸ್ತಿ. ಅವರು ಮುಖ್ಯಮಂತ್ರಿಯಾಗಿ 7.5 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಮುಂದಿನ ಬಜೆಟ್ ಮಂಡಿಸುವುದಾಗಿ ಹೇಳಿದ್ದಾರೆ. ಮಂಡಿಸಲಿ ಎಂದರು

Amid intense debates within the Karnataka Congress over the Chief Minister’s post, Deputy CM DK Shivakumar has made a sensational statement, claiming he never asked to be made Chief Minister. He revealed that discussions about changing the CM were part of a “secret agreement between four to five leaders” within the party. Shivakumar said he does not want to weaken the Congress or cause embarrassment to the organisation and added that he trusts his conscience in all decisions. Speaking in Kanakapura, he praised Chief Minister Siddaramaiah as a senior leader who has already completed 7.5 years as CM and is preparing to present the next state budget.