ಮಂಗಳೂರಿನ ಧನಲಕ್ಷ್ಮಿ ಪೂಜಾರಿ ಪ್ರತಿನಿಧಿಸಿದ ಮಹಿಳಾ ಕಬಡ್ಡಿ ತಂಡಕ್ಕೆ ವಿಶ್ವಕಪ್ ಕಿರೀಟ ; 13 ವರ್ಷಗಳ ಬಳಿಕ ಭಾರತೀಯ ವನಿತೆಯರಿಗೆ ಮತ್ತೊಮ್ಮೆ ಪ್ರಶಸ್ತಿ 

25-11-25 02:18 pm       Bangalore Correspondent   ಕರ್ನಾಟಕ

ಭಾರತೀಯ ಮಹಿಳಾ ತಂಡವು ಎರಡನೇ ಬಾರಿ ಕಬಡ್ಡಿ ವಿಶ್ವಕಪ್ ಗೆದ್ದಿದೆ. ಸೋಮವಾರ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ 2025ರ ಮಹಿಳಾ ಕಬಡ್ಡಿ ವಿಶ್ವಕಪ್​​ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು 35-28 ಅಂಕಗಳ ಅಂತರದಲ್ಲಿ ಸೋಲಿಸುವ ಮೂಲಕ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. 

ಬೆಂಗಳೂರು, ನ.25 : ಭಾರತೀಯ ಮಹಿಳಾ ತಂಡವು ಎರಡನೇ ಬಾರಿ ಕಬಡ್ಡಿ ವಿಶ್ವಕಪ್ ಗೆದ್ದಿದೆ. ಸೋಮವಾರ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ 2025ರ ಮಹಿಳಾ ಕಬಡ್ಡಿ ವಿಶ್ವಕಪ್​​ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು 35-28 ಅಂಕಗಳ ಅಂತರದಲ್ಲಿ ಸೋಲಿಸುವ ಮೂಲಕ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. 

ಈ ಮೂಲಕ ಭಾರತೀಯ ನಾರಿಯರು ಸತತ ಎರಡನೇ ಬಾರಿಗೆ ವಿಶ್ವಕಪ್​​ ಮುಡಿಗೇರಿಸಿದ್ದಾರೆ. 2012ರಲ್ಲಿ ಬಿಹಾರದಲ್ಲಿ ಕೊನೆಯ ಬಾರಿ ಕಬಡ್ಡಿ ಮಹಿಳಾ ವಿಶ್ವಕಪ್​​ ಪಂದ್ಯಾವಳಿ ನಡೆದಿತ್ತು. 13 ವರ್ಷಗಳ ನಂತರ ಎರಡನೇ ಆವೃತ್ತಿಯ ಮಹಿಳೆಯರ ವಿಶ್ವಕಪ್​​ ಟೂರ್ನಿ ಬಾಂಗ್ಲಾದಲ್ಲಿ ಆಯೋಜಿಸಲಾಗಿತ್ತು. ಮೊದಲ ಆವೃತ್ತಿಯಲ್ಲು ಭಾರತ ತಂಡ ಚಾಂಪಿಯನ್​ ಆಗಿತ್ತು. 

ಈ ಬಾರಿ 11 ದೇಶಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಭಾರತ ಅಗ್ರಸ್ಥಾನದಲ್ಲಿ ಹೊರಹೊಮ್ಮಿದೆ. ಮಹಿಳಾ ಮಣಿಗಳ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿ ಹಲವರು ಅಭಿನಂದಿಸಿದ್ದಾರೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಭಾರತ ತಂಡ, 33–21ರ ಅಂತರದಲ್ಲಿ ಇರಾನ್‌ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಇನ್ನೊಂದೆಡೆ ಚೈನೀಸ್ ತೈಪೆ ಸೆಮಿಫೈನಲ್‌ನಲ್ಲಿ ಆತಿಥೇಯ ಬಾಂಗ್ಲಾದೇಶವನ್ನು 25-18 ಅಂತರದಿಂದ ಸೋಲಿಸಿ ಫೈನಲ್‌ಗೆ ತಲುಪಿತ್ತು. 

ಭಾರತದ ಕಬಡ್ಡಿ ತಂಡದಲ್ಲಿ ಮಂಗಳೂರಿನ ಯುವತಿ ಧನಲಕ್ಷ್ಮೀ ಪೂಜಾರಿ ಪ್ರತಿನಿಧಿಸಿದ್ದರು. ಈ ಮೂಲಕ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಈಕೆ ಸುರತ್ಕಲ್‌ನ ಇಡ್ಯಾ ನಿವಾಸಿ ನಾರಾಯಣ ಪೂಜಾರಿ ಮತ್ತು ಶಶಿಕಲಾ ದಂಪತಿಯ ಪುತ್ರಿಯಾಗಿದ್ದು ಕಬಡ್ಡಿಯಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

The Indian women’s kabaddi team clinched the World Cup title for the second time, defeating Chinese Taipei 35–28 in the 2025 Women’s Kabaddi World Cup final held in Dhaka. This is India’s first women’s World Cup win in 13 years, with 11 nations participating. Mangaluru’s Dhanalakshmi Poojary proudly represented India, bringing glory to Karnataka and Dakshina Kannada. Leaders including PM Narendra Modi and Home Minister Amit Shah congratulated the team for their stellar performance.