ನವೆಂಬರಲ್ಲಿ ಅಧಿಕಾರ ಬಿಡಲು ಹೈಕಮಾಂಡ್ ಹೇಳಿಲ್ಲ, ಸಿದ್ದರಾಮಯ್ಯ ಸಿಎಂ ಆಗಿದ್ದರೆ ಮಾತ್ರ ರಾಜ್ಯಕ್ಕೆ ಒಳ್ಳೆದು, ಅವರೇ ಐದು ವರ್ಷ ಇರ್ತಾರೆ ; ಯತೀಂದ್ರ ಸಿದ್ದರಾಮಯ್ಯ

16-10-25 04:44 pm       HK News Desk   ಕರ್ನಾಟಕ

ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರೆ ರಾಜ್ಯಕ್ಕೆ ಒಳ್ಳೆಯದಾಗುತ್ತೆ. ಒಳ್ಳೆಯ ಆಡಳಿತ ಕೊಡಲು ಸಾಧ್ಯವಾಗುತ್ತೆ ಎನ್ನುವುದು ನಮ್ಮ ನಂಬಿಕೆ. ಹೀಗಾಗಿ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಇರುತ್ತಾರೆ ಎಂದು ಮೈಸೂರಿನಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. 

ಮೈಸೂರು, ಅ.16 : ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರೆ ರಾಜ್ಯಕ್ಕೆ ಒಳ್ಳೆಯದಾಗುತ್ತೆ. ಒಳ್ಳೆಯ ಆಡಳಿತ ಕೊಡಲು ಸಾಧ್ಯವಾಗುತ್ತೆ ಎನ್ನುವುದು ನಮ್ಮ ನಂಬಿಕೆ. ಹೀಗಾಗಿ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಇರುತ್ತಾರೆ ಎಂದು ಮೈಸೂರಿನಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. 

ನವೆಂಬರ್ ಕ್ರಾಂತಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ನನಗೆ ಯಾವುದೇ ಕ್ರಾಂತಿ ಬಗ್ಗೆ ಗೊತ್ತಿಲ್ಲ. ತಂದೆಯವರು ಕೊಟ್ಟಿರುವ ಮಾಹಿತಿ ಪ್ರಕಾರ ಹೈಕಮಾಂಡ್ ಆಗಲಿ ಬೇರೆ ನಾಯಕರಾಗಲಿ, ಯಾರು ಕೂಡ ನವೆಂಬರ್ ಆದ ಮೇಲೆ ಅಧಿಕಾರ ಬಿಡಿ ಎಂದು ಹೇಳಿಲ್ಲ. ಹೀಗಾಗಿ ಇವರೆಲ್ಲಾ ಯಾವ ಕ್ರಾಂತಿ ಬಗ್ಗೆ ಮಾತನಾಡುತ್ತಿದ್ದಾರೆ ನನಗೆ ಗೊತ್ತಿಲ್ಲ. 

ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಈಗಿನ ಪರಿಸ್ಥಿತಿ ನೋಡಿದ್ರೆ ನಮ್ಮ ತಂದೆ 5 ವರ್ಷ ಸಿಎಂ ಆಗಿ ಇರುತ್ತಾರೆ. ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲ ಇದೆ. ಇಲ್ಲ ಅಂದಿದ್ರೆ ಶಾಸಕರು ಸುಮ್ಮನೆ ಇರ್ತಿದ್ರಾ. ಹೈಕಮಾಂಡ್ ಹೋಗಿ ದೂರು ಕೊಡುತ್ತಿದ್ದರು. ಎಲ್ಲರ ಬೆ‌ಂಬಲ ಇರೋದ್ರಿಂದಲೇ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ ಎಂದು ಯತೀಂದ್ರ ಹೇಳಿದ್ದಾರೆ. 

ಸಂಪುಟ ಪುನಾರಚನೆ ಬಗ್ಗೆ ತಂದೆಯ ಜೊತೆ ಚರ್ಚೆ ಮಾಡಿಲ್ಲ. ತಂದೆಯೇ ಡಿಸೆಂಬರ್ ನಲ್ಲಿ ಸಂಪುಟ ಪುನಾರಚನೆ ಮಾಡುವುದಾಗಿ ಹೇಳಿದ್ದಾರೆ‌ ಎಂದೂ ಯತೀಂದ್ರ ಹೇಳಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿ ಎರಡೂವರೆ ವರ್ಷ ನವೆಂಬರ್ ವೇಳೆಗೆ ಪೂರ್ತಿಯಾಗುವುದರಿಂದ ಸ್ಥಾನ ಬಿಟ್ಟು ಕೊಡಲಿದ್ದಾರೆ, ಡಿಕೆಶಿ ಸಿಎಂ ಆಗುತ್ತಾರೆಂಬ ವದಂತಿ ಇದೆ. ಇದರ ಬಗ್ಗೆ ಡಿಕೆಶಿ ಬೆಂಬಲಿಗರು ಹೇಳುತ್ತಿದ್ದರೆ, ಸಿದ್ದರಾಮಯ್ಯ ಪರ ಇರುವವರು ಹಾಗೇನೂ ಇಲ್ಲ ಎಂದು ಹೇಳುತ್ತಿದ್ದಾರೆ.