ಬ್ರೇಕಿಂಗ್ ನ್ಯೂಸ್
08-10-25 11:04 pm Bangalore Correspondent ಕರ್ನಾಟಕ
ಬೆಂಗಳೂರು, ಅ.9 : ಕಾಂತಾರ- 1 ಸಿನಿಮಾವು ವಿಶ್ವಾದ್ಯಂತ ಭರ್ಜರಿ ಕಮಾಯಿ ಮಾಡುತ್ತಿದೆ. ಉತ್ತರ ಭಾರತದಲ್ಲಿ ಕಾಂತಾರ ಹಿಂದಿ ವರ್ಷನ್‌ಗೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಸದ್ಯ ಆರು ದಿನಗಳಿಗೆ ಈ ಸಿನಿಮಾದ ಗಳಿಕೆಯು 425+ ಕೋಟಿ ರೂ. ಆಗಿದೆ.
ಅಕ್ಟೋಬರ್ 2ರಂದು ತೆರೆಗೆ ಬಂದು, ಅ.8ಕ್ಕೆ ಏಳು ದಿನಗಳಾಗಿವೆ. ಒಂದು ವಾರ ತುಂಬುವುದಕ್ಕೆ 1 ದಿನ ಇರುವಾಗಲೇ ಕಾಂತಾರ 425+ ಕೋಟಿ ರೂ. ಗಳಿಕೆ ಆಗಿದೆ. ಅ.8ರ ಗಳಿಕೆಯೂ ಸೇರಿದರೆ. 450+ ಕೋಟಿ ಆಗುವುದು ನಿಶ್ಚಿತ.
2022ರಲ್ಲಿ ತೆರೆಕಂಡಿದ್ದ 'ಕಾಂತಾರ' ಸಿನಿಮಾದ ಒಟ್ಟಾರೆ ಗಳಿಕೆ 450 ಕೋಟಿ ರೂ. ಆಗಿತ್ತು. ಇದೀಗ ಹಳೆ ದಾಖಲೆಯನ್ನು ಏಳು ದಿನಗಳಲ್ಲೇ ಬ್ರೇಕ್ ಮಾಡಿದೆ. ಅಲ್ಲದೆ, ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ 2ನೇ ಸಿನಿಮಾ ಎಂಬ ಖ್ಯಾತಿಗೂ 'ಕಾಂತಾರ- 1' ಪಾತ್ರವಾಗಲಿದೆ. ಗಳಿಕೆಯ ವಿಚಾರದಲ್ಲಿ 'ಕೆಜಿಎಫ್: ಚಾಪ್ಟರ್ 2' ಮೊದಲ ಸ್ಥಾನದಲ್ಲಿದೆ.
ಕಾಂತಾರ: ಚಾಪ್ಟರ್ 1 ಸಿನಿಮಾದ ಕನ್ನಡ ವರ್ಷನ್‌ಗೆ ಆರು ದಿನಗಳಲ್ಲಿ ಭಾರತದಲ್ಲಿ ಸಿಕ್ಕಿರುವ ಹಣ ಭರ್ತಿ 90 ಕೋಟಿ ರೂಪಾಯಿ. ಹಿಂದಿ ವರ್ಷನ್‌ನಿಂದ 94 ಕೋಟಿ ಗಳಿಕೆಯಾದರೆ, ತೆಲುಗು ವರ್ಷನ್‌ನಿಂದ 58 ಕೋಟಿ ಹಣ ಸಿಕ್ಕಿದೆ. ತಮಿಳು ವರ್ಷನ್‌ನಿಂದ 28 ಕೋಟಿ ಸಿಕ್ಕರೆ, ಮಲಯಾಳಂ ವರ್ಷನ್‌ನಿಂದ 23 ಕೋಟಿ ರೂಪಾಯಿ ಗಳಿಕೆ ಆಗಿದೆ ಎಂದು ಬಾಕ್ಸ್ ಆಫೀಸ್ ಮೂಲಗಳು ತಿಳಿಸಿವೆ. ಎರಡನೇ ವಾರಾಂತ್ಯದ ಗಳಿಕೆಯೂ ಸೇರಿದರೆ, 'ಕಾಂತಾರ: ಚಾಪ್ಟರ್ 1' ಚಿತ್ರದ ಒಟ್ಟಾರೆ ಗಳಿಕೆ 600+ ಕೋಟಿ ದಾಟುವುದರಲ್ಲಿ ಅನುಮಾನ ಇಲ್ಲ.
ಸದ್ಯ ರಿಷಬ್ ಶೆಟ್ಟಿ ಉತ್ತರ ಭಾರತ ಪ್ರವಾಸದಲ್ಲಿದ್ದು, ಚಿತ್ರವನ್ನ ಪ್ರಮೋಟ್ ಮಾಡುತ್ತಿದ್ದಾರೆ. ಈಚೆಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಕಾಂತಾರ ಟೀಮ್ ಭೇಟಿ ಮಾಡಿದೆ. ಕಾಂತಾರ -1 ಚಿತ್ರವನ್ನು ನೋಡಿ ಖುಷಿಯಾಗಿರುವ ರೇಖಾ ಗುಪ್ತಾ, ''ಈ ಸಿನಿಮಾವು ಭಾರತದ ಆಧ್ಯಾತ್ಮಿಕ ಆಳ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸುಂದರವಾಗಿ ಪ್ರತಿಬಿಂಬಿಸಿದೆ. ನಮ್ಮ ಸಂಪ್ರದಾಯಗಳ ಸಾರವನ್ನು ಜೀವಂತಗೊಳಿಸಿದೆ'' ಎಂದು ಹೇಳಿದ್ದಾರೆ.
Kantara: Chapter 1 has taken the global box office by storm, earning an astonishing ₹425 crore in just six days and expected to cross ₹450 crore within a week of release. The film, which hit screens on October 2, is receiving overwhelming appreciation across all regions especially for its Hindi version, which is performing exceptionally well in North India.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am