ಬ್ರೇಕಿಂಗ್ ನ್ಯೂಸ್
05-10-25 07:57 pm HK News Desk ಕರ್ನಾಟಕ
ಬಾಗಲಕೋಟ, ಅ.5 : ಸಿಎಂ ಅವ್ರ ಬಗ್ಗೆ ಗೌರವ ಇದೆ, ಆದರೆ ಸಮಾಜ ವಿಘಟನೆ ಮಾಡುವವರಿಗೆ ಸಪೋರ್ಟ್ ಮಾಡುವುದನ್ನು ಬಯಸಲ್ಲ. ಆ ತಂಡದಿಂದ ಹಿಂದೆಯೂ ಅಂತರಹ ಕಾಯ್ದುಕೊಳ್ಳಿ ಅಂತ ಹೇಳಿದ್ದೆವು. ಈಗಲೂ ಅಂತರ ಕಾಯ್ದುಕೊಳ್ಳಿ ಅಂತ ಹೇಳ್ತೀವಿ. ಆ ಗುಂಪಿನಲ್ಲಿ ರಾಜ್ಯದ ಸಿಎಂ ಪಾಲ್ಗೊಳ್ಳೋದು ಸೂಕ್ತವಲ್ಲ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಕೇಡು ಬಂದೀತು ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಹಿಂದೆ ಬಹುದೊಡ್ಡ ನಾಯಕರು, ದೊಡ್ಡ ಸ್ವಾಮೀಜಿಗಳು ಪ್ರತ್ಯೇಕ ಧರ್ಮ ಮಾಡಲಿಕ್ಕೆ ಹೋಗಿ ಕೈಸುಟ್ಟುಕೊಂಡಿದ್ದಾರೆ. ಇವತ್ತು ಮತ್ತೆ ವ್ಯರ್ಥ ಪ್ರಯತ್ನ ಮಾಡ್ತಿದ್ದಾರೆ. ಬಹುಶಃ ಪ್ರತಿ ಜಿಲ್ಲೆಯಲ್ಲಿ ಜನತೆಗೆ ವಿನಂತಿ ಮಾಡ್ಕೊಂಡಿದ್ದಾರೆ. ಸಿಎಂಗೆ ಸನ್ಮಾನ ಮಾಡ್ತೇವೆ ಅಂತ ಹೇಳಿ ಬರ ಹೇಳಿದ್ದಾರೆ. ಬಹಳಷ್ಟು ಮಠಾದಿಪತಿಗಳಿಗೆ ಫೋನ್ ಕರೆ ಮಾಡಿ ಬಹು ಸಂಖ್ಯೆಯಲ್ಲಿ ಬರಬೇಕು ಅಂತ ತಿಳಿಸಿದ್ದಾರೆ.
ಪ್ರತ್ಯೇಕ ಲಿಂಗಾಯತರು ಅನ್ನುವ ಹೆಸರನ್ನ ಮಾಡ್ತಿರೋದು ಅಖಂಡ ವೀರಶೈವ ಲಿಂಗಾಯತ ಸಮಾಜಕ್ಕೆ ಮಾಡ್ತಿರೋ ದ್ರೋಹವಾಗಿದೆ. ಸಮಾಜದ ವಿಘಟನೆ ಕೆಲಸ ಇದಾಗಿದೆ ಅಂತ ಸಿಎಂ ಗಮನಕ್ಕೆ ತರಲು ಬಯಸುತ್ತೇವೆ. ಇಡೀ ರಾಜ್ಯದ ಮಠಾಧೀಶರ ಒಲವು ಏನಿದೆ ಅನ್ನೋದನ್ನ ಹುಬ್ಬಳ್ಳಿಯ ಸಮಾವೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣ, ಕೇರಳ ಇತ್ಯಾದಿ ಎಲ್ಲ ರಾಜ್ಯಗಳ ಜನ ವೀರಶೈವ ಲಿಂಗಾಯತ ಒಂದೇ ಅನ್ನೋದ್ರ ಕಡೆ ಇದ್ದಾರೆ ಹೊರತು, ಭಿನ್ನ ಧ್ವನಿ ಎತ್ತಿಲ್ಲ. ಕೆಲವೇ ಬೆರಳೆಣಿಕೆಯ ಸಮಾಜಕ್ಕೆ ಬೇಡವಾದ ಮಠಾಧಿಪತಿಗಳ ಈ ಬೇಡಿಕೆ ಹೊಂದಿದ್ದಾರೆ. ಜನರ ಭಿನ್ನ ಧ್ವನಿಯನ್ನು ಮುಖ್ಯಮಂತ್ರಿಗಳು ಮನ್ನಿಸಿದರೆ ತಮ್ಮ ವ್ಯಕ್ತಿತ್ವ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹಾನಿ ಉಂಟಾಗುತ್ತೆ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಸವ ಸಂಸ್ಕೃತಿ ಅಭಿಯಾನ ಹೆಸರಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಪರವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮುಖ್ಯಮಂತ್ರಿ ಪಾಲ್ಗೊಳ್ಳಬಾರದು ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
Lingayat seer Fakir Dingaleshwara Swamiji has cautioned Chief Minister Siddaramaiah against supporting efforts to create a separate Lingayat identity, calling it divisive and harmful to both society and the Congress party.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am