ಬ್ರೇಕಿಂಗ್ ನ್ಯೂಸ್
01-09-25 10:53 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.1 : ಲಿವಿಂಗ್ ರಿಲೇಶನ್ ಇಟ್ಟುಕೊಂಡಿದ್ದ ಮಹಿಳೆ ತನ್ನನ್ನು ಬಿಟ್ಟು ಬೇರೊಬ್ಬನ ಜೊತೆಗೆ ಸುತ್ತಾಡುತ್ತಿದ್ದಾಳೆ ಎಂಬ ಸಿಟ್ಟಿನಿಂದ 60 ವರ್ಷದ ವ್ಯಕ್ತಿಯೊಬ್ಬ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಭೀಭತ್ಸ ಘಟನೆ ಹೊಮ್ಮದೇವನಹಳ್ಳಿ ರಸ್ತೆಯಲ್ಲಿ ನಡೆದಿದೆ.
ಬನ್ನೇರುಘಟ್ಟ ನಿವಾಸಿ ವನಜಾಕ್ಷಿ (35) ಕೊಲೆಯಾದ ಮಹಿಳೆ. ಶನಿವಾರ ಮಧ್ಯಾಹ್ನ ಘಟನೆ ನಡೆದಿದ್ದು ಬೆಂಕಿಯ ಸುಟ್ಟ ಗಾಯಕ್ಕೀಡಾಗಿದ್ದ ಮಹಿಳೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಸೋಮವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಇತ್ತ ಆರೋಪಿ ವಿಠಲ (60) ನನ್ನು ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ವನಜಾಕ್ಷಿಗೆ ಈ ಹಿಂದೆ ಮದುವೆಯಾಗಿದ್ದು ಆತನನ್ನು ಬಿಟ್ಟಿದ್ದಳು. ಈ ವೇಳೆ, ವಿಠಲ ಸಂಪರ್ಕ ಆಗಿದ್ದು ಹಲವು ಸಮಯದಿಂದ ಲಿವಿಂಗ್ ರಿಲೇಶನಲ್ಲಿದ್ದರು. ಆದರೆ ವಿಠಲ ಕುಡಿದು ಬಂದು ಮನೆಯಲ್ಲಿ ಕಿರುಕುಳ ನೀಡುತ್ತಿದ್ದರಿಂದ ಇವರ ನಡುವೆ ಗಲಾಟೆ ಆಗಿತ್ತು. ಹೀಗಾಗಿ ವನಜಾಕ್ಷಿ ಆತನನ್ನು ದೂರ ಮಾಡಿದ್ದಲ್ಲದೆ ಬೇರೊಬ್ಬ ಯುವಕನ ಜೊತೆಗೆ ಸಂಪರ್ಕದಲ್ಲಿದ್ದಳು. ಈ ವಿಷಯ ತಿಳಿದು ವಿಠಲ, ವನಜಾಕ್ಷಿಯನ್ನು ಕೊಲ್ಲಲು 5 ಲೀಟರ್ ಪೆಟ್ರೋಲ್ ಖರೀದಿಸಿ ತಯಾರಿ ಮಾಡಿಕೊಂಡಿದ್ದ.
ಸ್ವತಃ ಕ್ಯಾಬ್ ಚಾಲಕನಾಗಿದ್ದ ವಿಠಲ ಶನಿವಾರ ಮಧ್ಯಾಹ್ನ ವನಜಾಕ್ಷಿ ತನ್ನ ಸಂಬಂಧಿಕ ಮುನಿಯಪ್ಪ ಎಂಬಾತನ ಜೊತೆಗೆ ಪ್ರಯಾಣಿಸುತ್ತಿದ್ದ ಕಾರನ್ನು ಹಿಂಬಾಲಿಸಿದ್ದು ಹೊಮ್ಮದೇವನಹಳ್ಳಿ ರಸ್ತೆಯಲ್ಲಿ ಅಡ್ಡಹಾಕಿದ್ದಾನೆ. ಆನಂತರ, ಅವರಿದ್ದ ಕಾರು ಸೇರಿ ಇಬ್ಬರ ಮೇಲೂ ಪೆಟ್ರೋಲ್ ಸುರಿದಿದ್ದಾನೆ. ಎಲ್ಲರೂ ನೋಡುತ್ತಲೇ ಘಟನೆಯಾಗಿದ್ದು ಮುನಿಯಪ್ಪ ಹೆದರಿ ಅಲ್ಲಿಂದ ಓಡಿದ್ದಾನೆ. ವನಜಾಕ್ಷಿ ಕೂಡ ಓಡಿದ್ದು ರಸ್ತೆಯಲ್ಲಿ ತಡವರಿಸಿ ಬಿದ್ದಿದ್ದಾಳೆ. ಇಷ್ಟರಲ್ಲಿಯೇ ವಿಠಲ ತನ್ನ ಕೈಲಿದ್ದ ಲೈಟರ್ ನಿಂದ ಆಕೆಯ ಮೇಲೆ ಬೆಂಕಿ ಹಚ್ಚಿದ್ದಾನೆ. ಅರೆ ಬರೆ ಬೆಂದು ಹೋಗಿ ರಸ್ತೆಯಲ್ಲಿ ಬಿದ್ದು ಹೊರಳಾಡಿದ ಮಹಿಳೆಯನ್ನು ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಹುಳಿಮಾವು ಪೊಲೀಸರು ಆರೋಪಿ ವಿರುದ್ಧ ಕೇಸು ದಾಖಲಿಸಿ ಬಂಧಿಸಿದ್ದಾರೆ.
ವಿಠಲನಿಗೆ ಹಿಂದೆ ಎರಡು ಮದುವೆಯಾಗಿದ್ದು ಮೊದಲ ಪತ್ನಿ ಸಾವನ್ನಪ್ಪಿದ್ದರೆ, ಎರಡನೇ ಹೆಂಡತಿ ಈತನನ್ನು ಬಿಟ್ಟು ಹೋಗಿದ್ದಳು. ಆನಂತರ ವನಜಾಕ್ಷಿ ಜೊತೆಗೆ ಸಂಸಾರ ನಡೆಸುತ್ತಿದ್ದ. ಈಗ ಆಕೆಯನ್ನೇ ಕೊಂದು ಜೈಲು ಸೇರಿದ್ದಾನೆ.
In a horrifying incident on Hommadevanahalli Road, a 60-year-old man set his live-in partner on fire in full public view after suspecting her of being in a relationship with another man.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm