ಬ್ರೇಕಿಂಗ್ ನ್ಯೂಸ್
15-12-20 01:16 pm Headline Karnataka News Network ಕರ್ನಾಟಕ
ಬೆಂಗಳೂರು, ಡಿ.15: ವಿಧಾನ ಪರಿಷತ್ ಕಲಾಪದಲ್ಲಿ ಪ್ರಜಾ ಪ್ರತಿನಿಧಿಗಳು ತಲೆತಗ್ಗಿಸುವ ರೀತಿ ಬಿಜೆಪಿ- ಕಾಂಗ್ರೆಸ್ ಸದಸ್ಯರು ನಡೆದುಕೊಂಡಿದ್ದಾರೆ. ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರನ್ನು ಕೆಳಗಿಳಿಸಲು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದ ಬಿಜೆಪಿ ಸದಸ್ಯರು ಹೈಡ್ರಾಮಾ ನಡೆಸಿದ್ದಾರೆ. ಈ ನಡುವೆ, ಕಲಾಪ ಆರಂಭಕ್ಕೂ ಮುನ್ನ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ಉಪ ಸಭಾಪತಿ ಜೆಡಿಎಸ್ ನ ಧರ್ಮೇಗೌಡರನ್ನು ಕಾಂಗ್ರೆಸ್ ಸದಸ್ಯರು ಪೀಠಿದಿಂದ ಎಳೆದಾಡಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿಧಾನ ಪರಿಷತ್ತಿನ ಮಂಡಿಸುವ ಸಲುವಾಗಿ ಒಂದು ದಿನದ ಕಲಾಪವನ್ನು ನಿಗದಿಪಡಿಸಲಾಗಿತ್ತು. ಆದರೆ, ಬಿಜೆಪಿ ಸದಸ್ಯರು ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದರಿಂದ ಈ ವಿಚಾರ ಹೈಡ್ರಾಮಾಕ್ಕೆ ಕಾರಣವಾಯಿತು. ಕಲಾಪಕ್ಕೆ ಸಭಾಪತಿಯವರು ಆಗಮಿಸುವ ಮೊದಲೇ ಉಪ ಸಭಾಪತಿಯವರನ್ನು ಕೂರಿಸಿ, ಬಿಜೆಪಿ ಕಲಾಪ ಆರಂಭಿಸಲು ಪ್ಲಾನ್ ಹಾಕಿತ್ತು. ಅಲ್ಲದೆ, ಸಭಾಪತಿ ಕಲಾಪಕ್ಕೆ ಆಗಮಿಸುವ ಬಾಗಿಲನ್ನು ಮುಚ್ಚಿ ಪ್ರತಾಪಚಂದ್ರ ಶೆಟ್ಟಿಗೆ ತಡೆ ಹಾಕಿದ್ದರು. ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ ಗದ್ದಲ ಎಬ್ಬಿಸಿದ್ದಾರೆ. ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ಉಪ ಸಭಾಪತಿ ಅವರನ್ನು ಬಲವಂತವಾಗಿ ಎಳೆದಾಡಿದ್ದಾರೆ. ಸಭಾಪತಿ ಪೀಠದಿಂದಲೇ ಬಲ ಪ್ರಯೋಗಿಸಿ ಎಬ್ಬಿಸಿದ್ದಲ್ಲದೆ, ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಎಳೆದಾಡಿದ್ದಾರೆ.
ಇಷ್ಟಾಗುತ್ತಿದ್ದಂತೆ ಮಾರ್ಶಲ್ ಗಳು ಆಗಮಿಸಿದ್ದು, ಅವರ ಮೇಲೂ ಕಾಂಗ್ರೆಸ್ ಸದಸ್ಯರು ಹಲ್ಲೆ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್ ಸದಸ್ಯರು ವಿಧಾನ ಪರಿಷತ್ ಕಲಾಪ ಅನ್ನುವುದನ್ನೇ ಮರೆತು ಬೀದಿ ರೌಡಿಗಳ ರೀತಿ ಪರಸ್ಪರ ತಳ್ಳಾಟ, ಹಲ್ಲೆ ನಡೆಸಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ಸದಸ್ಯರು ಸಭಾಪತಿ ಆಗಮಿಸುವ ಬಾಗಿಲನ್ನು ಒಡೆದು ಹಾಕಿದ್ದಾರೆ. ಬಿಜೆಪಿ ಸದಸ್ಯರ ತಡೆಯನ್ನು ಭೇದಿಸಿ, ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರನ್ನು ಒಳಗೆ ಕರೆಸಿಕೊಂಡಿದ್ದಾರೆ. ಸದನದಲ್ಲಿ ಗಲಾಟೆ, ಗದ್ದಲ ನಡೆಯುತ್ತಿದ್ದಂತೆಯೇ ಒಳಗೆ ಬಂದ ಸಭಾಪತಿ, ನೇರವಾಗಿ ಕಲಾಪವನ್ನು ಮತ್ತೆ ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದಾರೆ.
ಕಳೆದ ಗುರುವಾರ ಇದೇ ರೀತಿ, ಸಭಾಪತಿ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಆಬಳಿಕ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಅವಿಶ್ವಾಸ ಗೊತ್ತುವಳಿ ಚರ್ಚೆ ಆಗಬೇಕೆಂದು ಬಿಜೆಪಿ ಪಟ್ಟು ಹಿಡಿದು ಒಂದು ದಿನದ ಕಲಾಪ ನಡೆಸಲು ರಾಜ್ಯಪಾಲರಿಗೆ ಒತ್ತಡ ಹೇರಿದ್ದರು. ಅದರಂತೆ, ಒಂದು ದಿನದ ಕಲಾಪ ಕರೆಯಲಾಗಿತ್ತು. ಆದರೆ, ಬಿಜೆಪಿ ಸದಸ್ಯರು ಸಭಾಪತಿಯವರನ್ನೇ ಬದಲಾಯಿಸಲು ತಯಾರಿ ಮಾಡಿಕೊಂಡಿದ್ದರು. ಇಂದು ಸದನ ಆರಂಭಗೊಳ್ಳುವ ಮೊದಲೇ ಉಪ ಸಭಾಪತಿ ಜೆಡಿಎಸ್ ಪಕ್ಷದ ಧರ್ಮೇಗೌಡರನ್ನು ಪೀಠದಲ್ಲಿ ಕುಳ್ಳಿರಿಸಿದ್ದರು. ಅಲ್ಲದೆ, ಬಿಜೆಪಿ ಸದಸ್ಯರು ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಿದ್ದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿದ್ದಲ್ಲದೆ ಸಭಾಪತಿ ಪೀಠದಲ್ಲಿದ್ದ ಧರ್ಮೇಗೌಡರನ್ನು ಪೀಠದಿಂದ ಎಳೆದಾಡಿದ್ದಾರೆ.
ಸಭಾಪತಿ ಪೀಠದಲ್ಲಿ ಕೂರುವಂತಿಲ್ಲ
ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ನೋಟೀಸನ್ನು 15 ದಿನಗಳ ಮೊದಲೇ ನೀಡಿದ್ದೆವು. ಹಾಗಿರುವಾಗ, ಸಭಾಪತಿ ಪೀಠದಲ್ಲಿ ಪ್ರತಾಪಚಂದ್ರ ಶೆಟ್ಟಿ ಕೂರುವಂತಿಲ್ಲ. ಇಂದು ವಿಶೇಷ ಕಲಾಪ ಕರೆದಿದ್ದು, ಇದನ್ನು ಉಪ ಸಭಾಪತಿಯವರೇ ನಡೆಸಬೇಕು. ಸಭಾಪತಿಗೆ ವಿಶ್ವಾಸ ಇದ್ದರೆ, ಸದನಕ್ಕೆ ಬಂದು ವಿಶ್ವಾಸ ಸಾಬೀತುಪಡಿಸಬೇಕಿತ್ತು. ಕಾಂಗ್ರೆಸ್ ಸದಸ್ಯರು ಗದ್ದಲ, ಕಿತ್ತಾಟ ನಡೆಸಿದ್ದು ಎಷ್ಟು ಸರಿ ಎಂದು ವಿಧಾನ ಪರಿಷತ್ ಸದಸ್ಯೆ ಬಿಜೆಪಿಯ ತೇಜಸ್ವಿನಿ ಗೌಡ ಹೇಳಿದ್ದಾರೆ.
ರಾಜ್ಯಪಾಲರಿಗೆ ದೂರು
ಸದನದಲ್ಲಿ ಹೈಡ್ರಾಮಾ ನಡೆದಿದ್ದು ಮತ್ತು ಸಭಾಪತಿ ನಡುವೆ ಬಂದು ಕಲಾಪವನ್ನು ಮತ್ತೆ ಮುಂದೂಡಿದ್ದು ಕಾನೂನು ಬಿಕ್ಕಟ್ಟು ಎದುರಾಗಿದ್ದರಿಂದ ಇವೆಲ್ಲ ವಿಚಾರದ ಬಗ್ಗೆ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದೆ.
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm