ಬ್ರೇಕಿಂಗ್ ನ್ಯೂಸ್
17-05-24 10:47 pm HK News Desk ಕರ್ನಾಟಕ
ಹಾಸನ, ಮೇ.17: ಅಶ್ಲೀಲ ಪೆನ್ ಡ್ರೈವ್ ವಿಷಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನನ್ನನ್ನು ಕರೆದು ನೂರು ಕೋಟಿಯ ಆಫರ್ ನೀಡಿದ್ದರು ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿದ್ದ ಆರೋಪಿ ದೇವರಾಜೇಗೌಡರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಹಿನ್ನೆಲೆಯಲ್ಲಿ ಕಾರಾಗೃಹಕ್ಕೆ ತೆರಳುವ ಸಂದರ್ಭದಲ್ಲಿ ಮಾಧ್ಯಮದ ಮುಂದೆ ಆರೋಪಗಳ ಸುರಿಮಳೆಗೈದರು. " ನೀನು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿಯೇ
ಪೆನ್‌ಡ್ರೈವ್ ಹಂಚಿದರು ಎಂದು ಹೇಳು. ನಿನಗೆ ಸಮಸ್ಯೆ ಆಗಲ್ಲ, ಸೆಕ್ಯೂರ್ ಮಾಡ್ತಿನಿ ಅಂತ ಡಿಕೆ ಶಿವಕುಮಾರ್ ಹೇಳಿದ್ದರು ಎಂಬ ಆರೋಪ ಮಾಡಿದರು.
ಇದಕ್ಕಾಗಿ ದೊಡ್ಡ ಮಟ್ಟದ ಹಣದ ಆಫರ್ ಕೊಟ್ಟರು. ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ಕಾರ್ತಿಕ್ ಕರೆಸಿಕೊಂಡು ಸಂಪೂರ್ಣ ಮಾಹಿತಿ ಪಡೆದು ಪೆನ್‌ಡ್ರೈವ್ ರೆಡಿ ಮಾಡಿದ್ದೇ ಡಿಕೆ ಶಿವಕುಮಾರ್ ಎಂದು ಆರೋಪಿಸಿದರು.
ಚೆಲುವರಾಯಸ್ವಾಮಿ, ಕೃಷ್ಣಭೈರೇಗೌಡ, ಪ್ರಿಯಾಂಕ ಖರ್ಗೆ ಮತ್ತು ಇನ್ನೊಬ್ಬ ಸಚಿವರು ಸೇರಿದಂತೆ ನಾಲ್ಕು ಮಂತ್ರಿಗಳ ತಂಡ ರಚನೆ ಮಾಡಿ ಇದನ್ನು ಹ್ಯಾಂಡಲ್ ಮಾಡಲು ಬಿಟ್ಟಿದ್ದರು. ನಾನು ಒಪ್ಪದೇ ಇದ್ದಾಗ, ಈಗಾಗಲೇ ದೊಡ್ಡ ಹಗರಣ ಆಗಿರುವುದರಿಂದ ಮೋದಿಗೆ, ಬಿಜೆಪಿಗೆ, ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ಮಾಡಿದ್ರು. ನನಗೆ ಸುಮಾರು ನೂರು ಕೋಟಿ ಆಫರ್ ಕೊಟ್ಟರು. ಐದು ಕೋಟಿ ರೂಪಾಯಿ ಅಡ್ವಾನ್ಸ್ ದುಡ್ಡನ್ನ ಬೌರಿಂಗ್ ಕ್ಲಬ್‌ನ 110 ರೂಂಗೆ ಕಳುಹಿಸಿದ್ದರು ಎಂಬುದಾಗಿ ಸ್ಪೋಟಕ ಹೇಳಿಕೆ ನೀಡಿದರು.
ಚನ್ನರಾಯಪಟ್ಟಣ ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿಯನ್ನು ಸಂಧಾನಕ್ಕೆ ಕಳುಹಿಸಿ ಐದು ಕೋಟಿ ಕ್ಯಾಶ್ ಕೊಟ್ಟು ಕಳುಹಿಸಿದ್ದರು ಎಂದು ದೂರಿದರು. ನನ್ನ ಬಳಿ ಅವರಿಗೆ ಸಿಕ್ಕಿರುವ ಪೆನ್ ಡ್ರೈವ್‌ನಲ್ಲಿ ಕಾರ್ತಿಕ್ ಪತ್ನಿ ಕಿಡ್ನಾಪ್ ಪ್ರಕರಣದ ವೀಡಿಯೋ ಇದೆ. ಡಿಕೆ ಶಿವಕುಮಾರ್ ಅವರು ನನ್ನೊಟ್ಟಿಗೆ ಮಾತನಾಡಿರೊ ಆಡಿಯೋ ಇದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಾನು ಬಿಡುಗಡೆಯಾಗಿ ಹೊರಗಡೆ ಬಂದ ದಿನ ಸರ್ಕಾರ ಪತನವಾಗಲಿದೆ ಎಂದರು. ಎಸ್‌ಐಟಿಗೆ ನನ್ನ ಮನೆಯಲ್ಲಿ ಏನೂ ಸಿಗಲ್ಲ. ನನ್ನ ಬಳಿ ಇರೋ ಸಾಕ್ಷಿ ಎಲ್ಲೋ ಇದೆ. ಸಾಕ್ಷಿಯನ್ನ ಸೇಫಾಗಿ ಇಟ್ಟಿದ್ದೇನೆ ಎಂದ ವಕೀಲ ದೇವರಾಜೇಗೌಡ ಹೇಳಿದರು.
Devaraje Gowda says Dk Shivakumar offered him 100 crores to frame HD Kumaraswamy in prajwal pen drive case. He offered me 5 crore advance also. Soon as I come from jail DK Shivakumar will go to jail he added.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm