Prajwal Revanna, CM Siddaramaiah: ಪ್ರಜ್ವಲ್‌ ಪ್ರಕರಣ ಸಿಬಿಐಗೆ ವಹಿಸುವಂತೆ ಬಿಜೆಪಿ ಪಟ್ಟು ; SIT ಯಲ್ಲಿ ನಮ್ಮ ಪೊಲೀಸರೇ ತನಿಖೆ ನಡೆಸೋದು, ನಮ್ಮ ಪೊಲೀಸರ ಮೇಲೆ ನನಗೆ ನಂಬಿಕೆಯಿದೆ, ಯಾರ ಹಸ್ತಕ್ಷೇಪವಿಲ್ಲ, ಸಿಎಂ ಸಿದ್ದರಾಮಯ್ಯ

10-05-24 06:07 pm       HK News Desk   ಕರ್ನಾಟಕ

ಕಾನೂನು ಪ್ರಕಾರ ಎಸ್ ಐಟಿ ರಚನೆ ಮಾಡಿದ್ದೇವೆ, ನಮ್ಮ ಪೊಲೀಸರ ಮೇಲೆ ನನಗೆ ನಂಬಿಕೆಯಿದೆ ಅವರು ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣ ತನಿಖೆ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ಮಾಡಿ ವರದಿ ನೀಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರು, ಮೇ.10: ರಾಜ್ಯದ ಎಲ್ಲಾ ಕ್ರಿಮಿನಲ್ ಕೇಸುಗಳನ್ನು ನಮ್ಮ ಪೊಲೀಸರು ತನಿಖೆ ನಡೆಸುತ್ತಾರೆ. ಎಸ್ ಐಟಿ ಎಂದರೆ ನಮ್ಮ ಪೊಲೀಸರೇ ತನಿಖೆ ನಡೆಸುವುದು, ನಮ್ಮ ಪೊಲೀಸರ ಮೇಲೆ ನನಗೆ ನಂಬಿಕೆಯಿದೆ, ಕಾನೂನು ಪ್ರಕಾರ ಎಸ್ ಐಟಿ ರಚನೆ ಮಾಡಿದ್ದೇವೆ, ನಮ್ಮ ಪೊಲೀಸರ ಮೇಲೆ ನನಗೆ ನಂಬಿಕೆಯಿದೆ ಅವರು ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣ ತನಿಖೆ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ಮಾಡಿ ವರದಿ ನೀಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಹಿಂದೆ ಸಿಬಿಐಗೆ ನೀಡಿದ್ದ ಡಿ ಕೆ ರವಿ ಕೇಸು ಏನಾಯಿತು, ಇಂದು ಸಿಬಿಐ ತನಿಖೆಗೆ ವಹಿಸಿ ಎಂದು ಒತ್ತಾಯ ಮಾಡುವವರು ಹಿಂದೆ ಟೀಕೆ ಮಾಡಿದ್ದರು. ಬಿಜೆಪಿ ಆಡಳಿತದಲ್ಲಿ ಸಿಬಿಐಗೆ ಒಂದೇ ಒಂದು ಕೇಸು ಕೊಡಲಿಲ್ಲ. ಬಿಜೆಪಿಯವರು ಸಿಬಿಐಗೆ ಕರಪ್ಷನ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಎನ್ನುತ್ತಿದ್ದರು.

Former PM HD Deve Gowda forms JD(S) core committee to draw action plan for  Lok Sabha elections - The Economic Times

CBI names two of its own in chargesheet on officers' club scandal, Rakesh  Asthana left out

ಚೋರ್ ಬಚಾವ್ ಸಂಸ್ಥೆ ಎಂದು ದೇವೇಗೌಡರು ಹೇಳಿದ್ದರು. ಈಗ ನೋಡಿದರೆ ಸಿಬಿಐಗೆ ಕೊಡಿ ಎನ್ನುತ್ತಿದ್ದಾರೆ. ಇದರ ಅರ್ಥ ಏನು, ಸರಿಯಾದ ದಾರಿಯಲ್ಲಿ ತನಿಖೆ ನಡೆಯುತ್ತಿದೆ ಎಂಬ ನಂಬಿಕೆ ನನಗಿದೆ. ನಾನು ಯಾವತ್ತೂ ಪೊಲೀಸರಿಗೆ ಕಾನೂನಿಗೆ ವಿರುದ್ಧವಾಗಿ ತನಿಖೆ ಮಾಡಿ ಎಂದು ಹೇಳುವುದಿಲ್ಲ. ಎಸ್ ಐಟಿ ಮೇಲೆ ನಂಬಿಕೆ ಇದೆ, ನಮ್ಮ ಪೊಲೀಸ್ ಮೇಲೆ ಅವರಿಗೆ ನಂಬಿಕೆ ಇಲ್ವಾ ಎಂದು ಪ್ರಶ್ನಿಸಿದರು.

ಈ ಹಿಂದೆ ಸಿಬಿಐಗೆ ನಾವೇ ಲಾಟರಿ ಕೇಸು, ಕೆಜೆ ಜಾರ್ಜ್ ಕೇಸು, ಡಿಕೆ ರವಿ ಕೇಸು ಕೊಟ್ಟಿದ್ದೆವು. ಆ ಪ್ರಕರಣದಲ್ಲಿ ಯಾರಿಗಾದರೂ ಶಿಕ್ಷೆಯಾಗಿದೆಯೇ, ಹಾಗಂತ ನನಗೆ ಸಿಬಿಐ ಮೇಲೆ ನಂಬಿಕೆ ಇಲ್ಲ ಎಂದರ್ಥವಲ್ಲ, ಈ ಪ್ರಕರಣದಲ್ಲಿ ನಮ್ಮ ಪೊಲೀಸರೇ ತನಿಖೆ ಮಾಡುತ್ತಾರೆ ಎಂದರು.

Fresh notice to Prajwal Revanna, H D Revanna in obscene video case - The  Statesman

ಯಾರ ಹಸ್ತಕ್ಷೇಪವೂ ಇಲ್ಲ ;

ಪ್ರಜ್ವಲ್ ರೇವಣ್ಣ ಕೇಸಿನಲ್ಲಿ ಯಾರ ಹಸ್ತಕ್ಷೇಪ, ಒತ್ತಡವಿಲ್ಲ, ನಾನಾಗಲಿ, ಡಿ ಕೆ ಶಿವಕುಮಾರ್ ಆಗಲಿ ಮಧ್ಯೆಪ್ರವೇಶಿಸುತ್ತಿಲ್ಲ, ಪ್ರಭಾವ ಬೀರುತ್ತಿಲ್ಲ, ತನಿಖೆಯ ಹಾದಿ ತಪ್ಪಿಸುತ್ತಲೂ ಇಲ್ಲ, ಸತ್ಯಾಸತ್ಯತೆ ಹೊರಬರುತ್ತದೆ. ಪ್ರಕರಣಕ್ಕೆ ಅಂತಾರಾಷ್ಟ್ರೀಯ ಸಂಪರ್ಕ ಇದೆ ಎಂಬುದೆಲ್ಲಾ ನಿಜವಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎನ್ನುವ ಕಾರಣಕ್ಕೆ ಈ ರೀತಿ ಹೇಳುತ್ತಿದ್ದಾರಷ್ಟೆ ಎಂದರು.

Karnataka Chief Minister Siddaramaiah on Friday ruled out the possibility of handing over the investigations into the sex assault cases against Janata Dal (Secular) MP Prajwal Revanna to the Central Bureau of Investigation (CBI).