Hassan SSLC Exam: SSLC ಪರೀಕ್ಷೆಯಲ್ಲಿ ಮಗನ ಜೊತೆ ತಾಯಿಯೂ ಪಾಸ್ ; ಹಾಸನದಲ್ಲಿ ಅಪರೂಪದ ಸಾಧನೆ,ಕುಟುಂಬದಲ್ಲಿ ಡಬಲ್ ಸಂಭ್ರಮ

10-05-24 10:11 am       HK News Desk   ಕರ್ನಾಟಕ

ಮೇ 9, ಗುರುವಾರ ಪ್ರಕಟವಾದ ಎಸ್‌ಎಸ್‌ಎಲ್​ಸಿ ಪರೀಕ್ಷೆ ಫಲಿತಾಂಶದಲ್ಲಿ ಮಗನ ಜೊತೆಗೆ  ತಾಯಿಯೂ ಪರೀಕ್ಷೆ ಬರೆದು ಇಬ್ಬರೂ  ಪಾಸ್ ಆಗಿ ಖುಷಿ ಅನುಭವಿಸುತ್ತಿದ್ದಾರೆ.

ಹಾಸನ, ಮೇ.10: ಮೇ 9, ಗುರುವಾರ ಪ್ರಕಟವಾದ ಎಸ್‌ಎಸ್‌ಎಲ್​ಸಿ ಪರೀಕ್ಷೆ ಫಲಿತಾಂಶದಲ್ಲಿ ಮಗನ ಜೊತೆಗೆ  ತಾಯಿಯೂ ಪರೀಕ್ಷೆ ಬರೆದು ಇಬ್ಬರೂ  ಪಾಸ್ ಆಗಿ ಖುಷಿ ಅನುಭವಿಸುತ್ತಿದ್ದಾರೆ.

ಹೌದು, ಹಾಸನ ಜಿಲ್ಲೆಯ ಆಲೂರು ತಾಲೂಕಿನ ಚಿನ್ನಳ್ಳಿ ಗ್ರಾಮದ ನಿವಾಸಿಯಾದ ಭುವನೇಶ್ ಪತ್ನಿ ಟಿ. ಆರ್ ಜ್ಯೋತಿ (38) ಪುನರಾವರ್ತಿತ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಿದ್ದರೆ, ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ವಿವೇಕ ಕಾನ್ವೆಂಟ್ ವಿದ್ಯಾರ್ಥಿಯಾಗಿ ಮಗ ಸಿ. ಬಿ ನಿತಿನ್ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದನು.

ಫಲಿತಾಂಶ ಪ್ರಕಟವಾಗಿದ್ದು, 250 ಅಂಕ ಪಡೆದು ತಾಯಿ ಜ್ಯೋತಿ ಹಾಗೂ ಅವರ ಪುತ್ರ ಸಿ. ಬಿ ನಿತಿನ್ 582 ಅಂಕ ಪಡೆದು ಪಾಸ್ ಆಗಿದ್ದಾರೆ. ಅಮ್ಮ- ಮಗ ಇಬ್ಬರೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಕ್ಕೆ ಕುಟುಂಬದಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ.

ಚಿನ್ನಳ್ಳಿ ಬೇಕರಿ ಇಟ್ಟುಕೊಂಡಿರುವ ಭುವನೇಶ್ ಅವರ ಪತ್ನಿ ಮತ್ತು ಮಗ ಪಾಸಾಗಿದ್ದಕ್ಕೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ವಿಭಾಗ ಬಿಡುಗಡೆ ಮಾಡಿದೆ. ಈ ವರ್ಷ ಕಳೆದ ವರ್ಷಕ್ಕಿಂತ ಶೇಕಡ.30 ರಷ್ಟು ಹೆಚ್ಚಿನ ಫಲಿತಾಂಶ ಬಂದಿದ್ದು, ಒಟ್ಟಾರೆಯಾಗಿ ಶೇ. 73.40ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

Hassan, Mother Jyothi and son Bhuvanesh both pass in SSLC Exams 2024. Distribute sweets and express their joy.