Lok Sabha Elections 2024, Uttar Karnataka Voting; : ಬಿಸಿಲ ನಾಡಿನಲ್ಲಿ ಕುಗ್ಗದ ಜನರ ಉತ್ಸಾಹ ; ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಸಂಜೆ 5 ಗಂಟೆಗೆ 66 ಶೇ. ಮತದಾನ  

07-05-24 07:11 pm       Bangalore Correspondent   ಕರ್ನಾಟಕ

ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ಸುಸೂತ್ರವಾಗಿ ನಡೆದಿದೆ. ವಿಶೇಷ ಅಂದ್ರೆ, ಅತಿಯಾದ ಬಿಸಿಲ ಝಳವನ್ನು ಎದುರಿಸುತ್ತಿರುವ ಜಿಲ್ಲೆಗಳಲ್ಲಿಯೂ ಉತ್ತಮ ಮತದಾನವಾಗಿದೆ.

ಬೆಂಗಳೂರು, ಮೇ.7: ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ಸುಸೂತ್ರವಾಗಿ ನಡೆದಿದೆ. ವಿಶೇಷ ಅಂದ್ರೆ, ಅತಿಯಾದ ಬಿಸಿಲ ಝಳವನ್ನು ಎದುರಿಸುತ್ತಿರುವ ಜಿಲ್ಲೆಗಳಲ್ಲಿಯೂ ಉತ್ತಮ ಮತದಾನವಾಗಿದೆ. ಜನರು ಬಿಸಿಲ ನಡುವೆಯೂ ಮತದಾನಕ್ಕೆ ಆಸಕ್ತಿ ತೋರಿದ್ದಾರೆ. ಸಂಜೆ 5 ಗಂಟೆ ವೇಳೆಗೆ ಕರ್ನಾಟಕದ 14 ಜಿಲ್ಲೆಗಳಲ್ಲಿ 66 ಶೇಕಡಾ ಮತದಾನವಾಗಿದೆ.

ಅತಿ ಬಿಸಿಲಿನ ಕಾರಣದಿಂದ ಸಂಜೆಯ ಅವಧಿಯಲ್ಲಿ ಮತದಾನಕ್ಕೆ ಹೆಚ್ಚಿನ ಸಮಯ ಕೊಡಬೇಕೆಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಆದರೆ, ಚುನಾವಣಾ ಆಯೋಗ ಮಾನ್ಯ ಮಾಡಿರಲಿಲ್ಲ. ಸಂಜೆ 6 ಗಂಟೆಯ ವರೆಗೆ ಮತದಾನಕ್ಕೆ ಅವಕಾಶ ನೀಡಿದ್ದು, ಆ ಸಂದರ್ಭದಲ್ಲಿ ಎಷ್ಟು ಜನರು ಸರದಿಯಲ್ಲಿ ಇರುತ್ತಾರೋ ಅವರಿಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ.

Karnataka Election 2024 Live: Voter turnout in Karnataka at 54.2% at 3:30pm  | Hindustan Times

40 ಡಿಗ್ರಿಗಿಂತಲೂ ಹೆಚ್ಚು ಬಿಸಿಲಿನ ತಾಪ ಎದುರಿಸುತ್ತಿರುವ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 66 ಶೇಕಡಾ, ಕಲಬುರಗಿಯಲ್ಲಿ 57 ಶೇ., ರಾಯಚೂರು ಕ್ಷೇತ್ರದಲ್ಲಿ 59 ಶೇಕಡಾ, ಬೀದರ್ 60, ಬಳ್ಳಾರಿ 68, ಬಾಗಲಕೋಟ 65 ಶೇ,, ವಿಜಯಪುರ 61 ಶೇ., ಧಾರವಾಡ 67, ಹಾವೇರಿ ಕ್ಷೇತ್ರದಲ್ಲಿ ಸಂಜೆ 5 ಗಂಟೆ ವೇಳೆಗೆ 71 ಶೇಕಡಾ ಮತದಾನ ದಾಖಲಾಗಿದೆ. ಉಳಿದಂತೆ, ಸಾಧಾರಣ ಬಿಸಿ ಇರುವ ಬೆಳಗಾವಿ ಕ್ಷೇತ್ರದಲ್ಲಿ 65, ದಾವಣಗೆರೆ 70, ಚಿಕ್ಕೋಡಿ 72, ಶಿವಮೊಗ್ಗ 72, ಉತ್ತರ ಕನ್ನಡ ಕ್ಷೇತ್ರದಲ್ಲಿ 69 ಶೇಕಡಾ ಮತದಾನ ಆಗಿದೆ.

With 66.05% polling by 5 pm, turnout in 14 parliamentary constituencies spread over north Karnataka followed the pattern seen in Phase 2 elections. Hourly trends showed no major changes between 3 pm till 5 pm.