ಬ್ರೇಕಿಂಗ್ ನ್ಯೂಸ್
07-05-24 12:10 am Bengaluru Correspondent ಕರ್ನಾಟಕ
ಬೆಂಗಳೂರು, ಮೇ 7: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದಲ್ಲಿ ಎಸ್ಐಟಿ ತನಿಖೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಪ್ರಕರಣದಲ್ಲಿ ಪೆನ್ ಡ್ರೈವ್ ವಿಡಿಯೋ ಹಂಚಿಕೆ ಮಾಡಿದ್ದೇ ಡಿಕೆ ಶಿವಕುಮಾರ್. ಇದಲ್ಲದೆ, ಈ ಪ್ರಕರಣದ ವಿಚಾರದಲ್ಲಿ ನಮ್ಮೊಂದಿಗೆ ನೀವು ಸಹಕರಿಸಬೇಕು ಎಂದು ಡಿಕೆ ಶಿವಕುಮಾರ್ ಅವರೇ ನನಗೆ ದೊಡ್ಡ ಆಫರ್ ಮಾಡಿದ್ದಾರೆ ಎಂದು ವಿಡಿಯೋ ಹಂಚಿಕೆ ಕುರಿತ ಆರೋಪಕ್ಕೀಡಾದ ವಕೀಲ ದೇವರಾಜೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಡ್ರೈವರ್ ಕಾರ್ತಿಕ್ ನನಗೆ ಕೊಟ್ಟಿದ್ದ ವಿಡಿಯೋಗಳೇ ಬೇರೆ ಇದ್ದವು. ಈಗ ಬಿಡುಗಡೆ ಆಗಿರುವ ವಿಡಿಯೋಗಳೇ ಬೇರೆ ಇವೆ. ಬೇರೆ ವಿಡಿಯೋಗಳನ್ನು ಸೇರಿಸಿ ಮಾರ್ಫ್ ಮಾಡಿ ಬಿಡುಗಡೆ ಮಾಡಿದ್ದಾರೆ. ಇವೆಲ್ಲವನ್ನೂ ಮಾಡಿಸಿದ್ದು ಮಹಾನಾಯಕ ಡಿಕೆಶಿ ಅವರೇ ಆಗಿದ್ದಾರೆ. ದೇಶಾದ್ಯಂತ ಸುದ್ದಿ ಮಾಡಿಸಬೇಕು, ಪ್ರಧಾನಿ ಮೋದಿಯವರ ಮುಖಕ್ಕೆ ಮಸಿ ಬಳಿಯಬೇಕು ಎನ್ನುವ ದೂರಾಲೋಚನೆ ಇದರ ಹಿಂದಿದೆ ಎಂದರು.
ನನಗೆ ಶಿವರಾಮೇಗೌಡ ಹಲವು ಬಾರಿ ಫೋನ್ ಮಾಡಿದ್ದಾರೆ. ಸ್ಟಾರ್ ಹೊಟೇಲಿನಲ್ಲಿ ಕರೆದು ಮಾತನಾಡಿದ್ದಾರೆ. ಡಿಕೆಶಿ ಮೂಲಕ ಮಾತನಾಡಿಸಿದ್ದು, ದೊಡ್ಡ ಆಫರ್ ಮಾಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಜೊತೆಗೆ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ. ಆದರೆ ಆಫರ್ ಗಳಿಗೆ ನಾನು ಬಗ್ಗಿಲ್ಲ. ಎಸ್ಐಟಿ ತಂಡ ವಿಚಾರಣೆಗೆ ಕರೆದಿದ್ದಾಗ ಡಿಕೆಶಿ ಹೆಸರು ಹೇಳಿದ್ದಕ್ಕೆ ಐಪಿಎಸ್ ಅಧಿಕಾರಿ ಸುಮನಾ ಪನ್ನೇಕರ್ ನನಗೆ ಬೆದರಿಕೆ ಹಾಕಿದ್ದಾರೆ. ಡಿಕೆಶಿ ಅವರ ಹೆಸರು ಹೇಳಬಾರದು ಎಂದು ಹೇಳಿದ್ದಾರೆ. ಹಾಗಾಗಿ, ಈ ಒಟ್ಟು ತನಿಖೆಯ ಬಗ್ಗೆ ನಂಬಿಕೆ ಇಲ್ಲ. ಸಿಬಿಐ ತನಿಖೆ ನಡೆದರಷ್ಟೇ ನೈಜ ವಿಚಾರ ಹೊರಬರಬಹುದು. ಅದಕ್ಕಾಗಿ ನಾವು ಸರಕಾರಕ್ಕೆ ಸಿಬಿಐ ತನಿಖೆಗೆ ಆಗ್ರಹ ಮಾಡುತ್ತೇವೆ ಎಂದರು,
ಗೃಹ ಸಚಿವರನ್ನು ಭೇಟಿಯಾಗಿ ಮನವಿ ನೀಡುತ್ತೇವೆ. ಜೊತೆಗೆ, ಮುಖ್ಯ ಕಾರ್ಯದರ್ಶಿ ಅವರನ್ನೂ ಭೇಟಿಯಾಗುತ್ತೇವೆ. ಅಲ್ಲದೆ, ಹೈಕೋರ್ಟಿಗೆ ದೂರು ಕೊಟ್ಟು ಸಿಬಿಐ ತನಿಖೆಗೆ ಒತ್ತಾಯ ಮಾಡುತ್ತೇವೆ ಎಂದು ದೇವರಾಜೇ ಗೌಡ ಹೇಳಿದರು. ಸಂತ್ರಸ್ತೆಯರನ್ನು ಕಾಂಗ್ರೆಸ್ ಮುಖಂಡರೇ ಹಣ ಕೊಟ್ಟು ಹೇಳಿಕೆ ನೀಡಿಸಿದ್ದಾರೆ. ಸಂತ್ರಸ್ತೆಯರು ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಭೇಟಿಯಾಗಿದ್ದಾರೆ ಎಂದು ಹೇಳಿದ ಶಿವರಾಮೇಗೌಡ ತನ್ನ ಕಚೇರಿಗೆ ಬಂದಿದ್ದ ಸಿಸಿಟಿವಿ ವಿಡಿಯೋವನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದರು. ಡಿಕೆಶಿ ಮತ್ತು ಶಿವರಾಮೇಗೌಡರ ಜೊತೆಗೆ ಮಾತನಾಡಿರುವ ಎರಡೂವರೆ ಗಂಟೆಯ ಆಡಿಯೋ ಇದೆ. ಅದನ್ನು ತನಿಖಾ ತಂಡಕ್ಕೆ ನೀಡುತ್ತೇನೆ. ಈಗ ಮಾಧ್ಯಮಕ್ಕೆ ಬಿಡುಗಡೆ ಮಾಡಿದರೆ ತಿರುಚುವ ಸಾಧ್ಯತೆಯಿದೆ ಎಂದು ಆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
Lawyer Devaraje Gowda has directly accused Deputy Chief Minister D K Shivakumar of conspiracy in the pen drive case against Prajwal Revanna, which has created a storm in state politics. “The SIT is working in favour of the government. Officers get hundreds of calls every day. The CM, Deputy CM and ministers are calling them. There is no hope in getting justice”, he said and asked Chief Minister Siddaramaiah to hand over the case to the CBI.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm