ಬ್ರೇಕಿಂಗ್ ನ್ಯೂಸ್
03-12-20 12:49 pm Headline Karnataka News Network ಕರ್ನಾಟಕ
ವಿಜಯಪುರ, ಡಿ.3: ಅಗರ್ ಶಿವಾಜಿ ನಾ ಹೋತಾತೋ ಸಬ್ ಕಾ ಸನ್ನತ್ ಹೋತಾತಾ... ಬಸನಗೌಡ ಮರಾಠರಿಗೆ ಹುಟ್ಟಿದಾನಾ ಎಂದು ಕೇಳ್ತಾರೆ ಕೆಲವರು.. ಹೌದು.. ನಾನು ಬಸನಗೌಡ ಮರಾಠರಿಗೆ ಹುಟ್ಟಿದೇನೆ, ನೀವೆಲ್ಲ ಕಾಶ್ಮೀರಿಯರಿಗೆ ಹುಟ್ಟಿದೀರಾ?
ಹೀಗೆಂದು ನಾಲಗೆ ಹರಿಬಿಟ್ಟಿದ್ದಾರೆ ಬಿಜೆಪಿ ಮುಖಂಡ, ಶಾಸಕ ಬಸನಗೌಡ ಯತ್ನಾಳ್. ಡಿಸೆಂಬರ್ 5ರಂದು ಕನ್ನಡ ಸಂಘಟನೆಗಳು ನೀಡಿರುವ ಬಂದ್ ಕರೆಯನ್ನು ವಿರೋಧಿಸಿ ಶಾಸಕ ಯತ್ನಾಳ ನೇತೃತ್ವದಲ್ಲಿ ವಿಜಯಪುರದಲ್ಲಿ ಹಿಂದೂಪರ ಸಂಘಟನೆಗಳು, ಬೆಂಬಲಿಗರೊಂದಿಗೆ ಸಭೆ ನಡೆಸಲಾಗಿದೆ.
ಸಭೆಯಲ್ಲಿ ಭಾಷಣ ಮಾಡಿದ ಯತ್ನಾಳ್, ನಾವು ಅಡ್ಜಸ್ಟಮೆಂಟ್ ರಾಜಕಾರಣವನ್ನು ಬಿಡಬೇಕು. ಫೇಸಬುಕ್ ನಲ್ಲಿ ಕೆಲವರು ಬೈದಿದ್ದಾರೆ, ಅವನ್ನು ನೋಡಿದ್ರೆ ಇವರು ಕನ್ನಡಿಗರಾ ಅನ್ನೊ ಪ್ರಶ್ನೆ ಮೂಡತ್ತೆ. ಬೈಗುಳ ಹುಟ್ಟಿದ್ದೆ ವಿಜಯಪುರದಲ್ಲಿ.. ನಮಗೂ ಬರುತ್ತೆ, ಆದ್ರೆ ನಾವು ಸುಮ್ಮನಿದ್ದೇವೆ. ನಾನು ಕೊಡೊ ಸ್ಟೇಟಮೆಂಟ್ 24 ತಾಸು ಕನ್ಫೂಷನ್ ಇರುತ್ತೆ, ನಂತ್ರದಲ್ಲಿ ಅದೇ ಸರಿಯಾಗಿರತ್ತೆ..
ಈ ದೇಶದಲ್ಲಿ ಗೋವುಗಳ ಹತ್ಯೆ ನಿಷೇಧಿಸಿ, ಗೋವನ್ನು ಮತ್ತು ದಾಳಿಕೋರರ ಮುಂದೆ ಸಾಮಾನ್ಯ ಜನರನ್ನು ರಕ್ಷಣೆ ಮಾಡಿದವರು ಶಿವಾಜಿ ಮಹಾರಾಜ್. ಅಗರ್ ಶಿವಾಜಿ ನಾ ಹೋತಾತೋ ಸಬ್ ಕಾ ಸನ್ನತ್ ಹೋತಾತಾ ಅನ್ನೋ ಮಾತು ಮರಾಠರಲ್ಲಿ ಪ್ರಚಲಿತ. ಇದಕ್ಕೆ ಬಸನಗೌಡ ಮರಾಠರಿಗೆ ಹುಟ್ಟಿದಾನಾ ಎಂದು ಕೇಳ್ತಾರೆ ಕೆಲವರು. ಆದರೆ, ನಾನು ಕೇಳ್ತೀನಿ, ಹೌದು.. ನಾನು ಬಸನಗೌಡ ಮರಾಠರಿಗೆ ಹುಟ್ಟಿದೇನೆ, ನೀವೆಲ್ಲ ಕಾಶ್ಮೀರಿಯರಿಗೆ ಹುಟ್ಟಿದೀರಾ.. ಅಲ್ಲಾ ಇನ್ನೊಬ್ರಿಗೆ ಹುಟ್ಟಿದೀರಾ ಎಂದು ಪ್ರಶ್ನೆ ಮಾಡಿದ್ರು.
ಪ್ರತಿಯೊಂದರಲ್ಲೂ ಜಾತಿ, ಭೇದ ಹುಟ್ಟಿಸ್ತಾರೆ. ವೀರಶೈವ- ಲಿಂಗಾಯತ ಎಂದು ಭೇದ ಶುರುವಾಗಿದೆ. ಏನ್ ವೀರಶೈವರು ಮತ್ತು ಲಿಂಗಾಯತರು ಬೇರೆ ಬೇರೆ ರೀತಿ ವಿಭೂತಿ ಹಚ್ಚುತ್ತಾರಾ? ಕೆಲ ಕಳ್ಳ ನನ್ನ ಮಕ್ಕಳಿಂದ ಹಿಂದೂ ಸಮಾಜವನ್ನು ಒಡೆಯುವ ವ್ಯವಸ್ಥಿತ ಷಡ್ಯಂತ್ರ ನಡೀತಿದೆ.. ಇಷ್ಟೆಲ್ಲ ಇದ್ದರೂ ಈ ವಾಟಾಳ್ಯಾ(ವಾಟಾಳ) ಬಾಯಿಗೆ ಬಂದಂತೆ ಮಾತಾಡ್ತಾನೆ. ನಮ್ಮಲ್ಲೂ ಕೆಲ ರಾಜಕಾರಣಿಗಳು ತುಡುಗರು ಇದ್ದಾರೆ. ಇವರದ್ದೆಲ್ಲ ಅಡ್ಜೆಸ್ಟಮೆಂಟ್ ರಾಜಕಾರಣ ಮಾಡಾತ್ರೀ.. ಇವರೂ ಕಳ್ಳರೆ, ಅವರೂ(ವಾಟಾಳ, ಕನ್ನಡಪರ ಸಂಘಟನೆಗಳು) ಕಳ್ಳರೇ.. ನೀ ಏನೆ ಮಾಡೋದಿದ್ರು ಅಲ್ಲೆ ಬೆಂಗಳೂರಲ್ಲೇ ಮಾಡು.. ಇಲ್ಲೇನು ಕಿಸಿತಿಯೋ ನೋಡ್ತೀವಿ ಎಂದು ವಾಟಾಳ್ ವಿರುದ್ಧ ಯತ್ನಾಳ್ ಸವಾಲು ಹಾಕಿದ್ರು.
ನನ್ನ ಪ್ರತಿಕೃತಿ ಸುಡ್ತೀರಾ? ನೀವು ಸುಟ್ಟಷ್ಟು ನನ್ನ ಆಯುಷ್ಯ ಹೆಚ್ಚಾಗುತ್ತೆ. ನನಗೆ ಬುದ್ದಿ ಬ್ರಮಣೆಯಾಗಿದೆ ಅಂತೀಯಾ? ಬಹಳ ಜನರಿಗೆ ಬುದ್ದಿ ಬ್ರಮಣೆ ಮಾಡುವ ಶಕ್ತಿ ದೇವರು ನನಗೆ ಕೊಟ್ಟಿದ್ದಾನೆ. ನಾನು ಐದು ಬಾರಿ ಚುನಾಯಿತನಾಗಿದ್ದೇನೆ, ವಾಟಾಳ ಹತ್ತು ಓಟು ಪಡೆದು ಮಾತಾಡ್ತಾನೆ. ಎಲ್ಲ ಶಾಸಕರ ಗೌರವ ಕಾಪಾಡುವ ಅಧ್ಯಕ್ಷ ನಾನೇ ಇದ್ದೀನಿ. ಹಕ್ಕು ಬಾಧ್ಯತಾ ಸಮೀತಿ ಅಧ್ಯಕ್ಷ ನಾನೇ ಇರುವುದರಿಂದ ವಿಚಾರ ಮಾಡಿ ಮಾತನಾಡಿ. ವಾಟಾಳ ಬಗ್ಗೆ ನಾನು ಸದನದಲ್ಲಿ ಮಂಡಿಸಿ, ದೂರು ನೀಡಿದ್ರೆ ವಾಟಾಳಗೆ ಒಂದು ವರ್ಷ ಜೈಲು, ಒಂದು ಲಕ್ಷ ರೂಪಾಯಿ ದಂಡ ಆಗುತ್ತೆ. ಇನ್ಮೇಲೆ ಬಾಯಿಗೆ ಬಂದಂಗೆ ಮಾತಾಡಿದ್ರೆ, ಕಪ್ಪು ಮಸಿ ಬಳೀತಿನಿ ಅಂದ್ರೆ ಇನ್ನಿದೆ ನಿಮಗೆ...
ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೇ ಛೀಮಾರಿ ಹಾಕುವ ಅವಕಾಶ ಪಾರ್ಲಿಮೆಂಟ್ ಗೆ ಇದೆ. ನಿನಗೂ ವಿಧಾನಸೌಧಕ್ಕೆ ಕರೆದು ಛೀಮಾರಿ ಹಾಕಿಸ್ತಿನಿ. ಏ ತೋ ಝಲಕ್ ಹೈ, ಪಿಚ್ಚರ್ ಅಭಿ ಬಾಕಿ ಹೈ, ಇನ್ನು ಪಿಚ್ಚರ್ ತೋರಿಸ್ತೀನಿ... ಇನ್ನಾರು ತಿಂಗಳಲ್ಲಿ ವಿಜಯಪುರ ನೋಡಲು ಕರ್ನಾಟಕದ ಜನ್ರು ಬರಬೇಕು. ಹಾಗೆ ಇದನ್ನು ಮಾಡೆಲ್ ಆಗಿ ಮಾಡ್ತೆನೆ. ಕನ್ನಡವನ್ನು ನನಗೆ ಕಲಿಸಲು ಬರಬೇಡಿ. ಕನ್ನಡದ ಹೆಸರಲ್ಲಿ ದಂಧೆ ಮಾಡಬೇಡಿ. ಇಡಿ ಕರ್ನಾಟಕ ಜನ್ರು ಬಂದ್ ಅನ್ನು ಸಂಪೂರ್ಣ ವಿಫಲ ಮಾಡಿ. ಈ ಮೂಲಕ ನಕಲಿ ಕನ್ನಡ ಹೋರಾಟಗಾರರನ್ನು ಹತ್ತಿಕ್ಕಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕರೆ ಕೊಟ್ಟಿದ್ದಾರೆ.
09-08-25 08:00 pm
HK Staff
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವ...
08-08-25 06:23 pm
09-08-25 07:38 pm
HK Staff
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
09-08-25 08:10 pm
Mangalore Correspondent
Father Muller Medical College, Hospital, Mang...
09-08-25 04:22 pm
Dharmasthala,16th Spot at Bahubali Hill: ಧರ್ಮ...
09-08-25 02:16 pm
Udupi, Talaq; ವರದಕ್ಷಿಣೆ ಕಿರುಕುಳ ; ವಿದೇಶದಿಂದ ಮ...
09-08-25 11:36 am
Roshan Saldanha, ED Raid, Mangalore, Fraud: ರ...
08-08-25 11:10 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm