Yatnal, DK Shivakumar: ರಾಜ್ಯದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿವೆ, ಒಂದು ಡಿಕೆಶಿದು..ಇನ್ನೊಂದು ಹೆಸರು ಮೇ 8ಕ್ಕೆ ಹೇಳ್ತಿನಿ, ಯತ್ನಾಳ್ ಹೊಸ ಬಾಂಬ್ 

02-05-24 10:24 am       HK News Desk   ಕರ್ನಾಟಕ

ಪ್ರಜ್ವಲ್ ರೇವಣ್ಣ ಅಶ್ಲೀಲ ಸಿಡಿ ಪ್ರಕರಣವು ರಾಜಕೀಯ ಪಕ್ಷಗಳಿಗೆ ಆರೋಪ/ಪ್ರತ್ಯಾರೋಪದ ಸರಕಾಗಿದೆ. ನೊಂದ ಮಹಿಳೆಯರುಗಳಿಗೆ ಸಾಂತ್ವನ ಹೇಳುವ ಕೆಲಸವನ್ನು ಯಾವ ಪಕ್ಷಗಳೂ ಮಾಡುತ್ತಿಲ್ಲ, ಇದು ಬರೀ ಚುನಾವಣೆಯ ವಿಚಾರವಾಗಿ ಹೋಯಿತೇ ಎನ್ನುವುದು ಎದುರಾಗುತ್ತಿರುವ ಪ್ರಶ್ನೆ.

ದಾವಣಗೆರೆ, ಮೇ 02: ಪ್ರಜ್ವಲ್ ರೇವಣ್ಣ ಅಶ್ಲೀಲ ಸಿಡಿ ಪ್ರಕರಣವು ರಾಜಕೀಯ ಪಕ್ಷಗಳಿಗೆ ಆರೋಪ/ಪ್ರತ್ಯಾರೋಪದ ಸರಕಾಗಿದೆ. ನೊಂದ ಮಹಿಳೆಯರುಗಳಿಗೆ ಸಾಂತ್ವನ ಹೇಳುವ ಕೆಲಸವನ್ನು ಯಾವ ಪಕ್ಷಗಳೂ ಮಾಡುತ್ತಿಲ್ಲ, ಇದು ಬರೀ ಚುನಾವಣೆಯ ವಿಚಾರವಾಗಿ ಹೋಯಿತೇ ಎನ್ನುವುದು ಎದುರಾಗುತ್ತಿರುವ ಪ್ರಶ್ನೆ.

ಪ್ರಜ್ವಲ್ ರೇವಣ್ಣ ಹಾಲೀ ಸಂಸದರು, ಅವರು ಎಂಪಿಯಾದಾಗ ಕಾಂಗ್ರೆಸ್ ಜೊತೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಈಗ ರಾಜ್ಯದಲ್ಲಿ ಯಾರ ಸರ್ಕಾರವಿದೆ, ಕಾಂಗ್ರೆಸ್ ಸರ್ಕಾರ ತಾನೇ ಅವರ ಮೇಲೆ ಆಕ್ಷನ್ ತಗೆದುಕೊಳ್ಳಬೇಕಾಗಿತ್ತು " ಎಂದು ಯತ್ನಾಳ್ ಹೊಸ ವಾದವನ್ನು ಮಂಡಿಸಿದ್ದಾರೆ.

ಈ ಸಿಡಿಗೂ ಬಿಜೆಪಿಗೂ ಏನು ಸಂಬಂಧ ? ಅವರು ದೇಶ ಬಿಟ್ಟು ಪರಾರಿಯಾದಾಗ ರಾಜ್ಯ ಸರ್ಕಾರ ಮಲಗಿಕೊಂಡಿತ್ತಾ? ಇದನ್ನು ವ್ಯವಸ್ಥಿತವಾಗಿ ಮುಚ್ಚಲು ಹೊಂದಾಣಿಕೆ ರಾಜಕಾರಣಿಗಳ ಉದ್ದೇಶವಿದೆ. ಮತದಾನ ಮುಗಿದ ಮೇಲೆ ಇದಕ್ಕೆ ಉತ್ತರ ಸಿಗುತ್ತದೆ ಎಂದು ಯತ್ನಾಳ್ ಹೇಳುವ ಮೂಲಕ, ಚುನಾವಣೆಗಾಗಿಯೇ ಹೊರಬಂದ ಸಿಡಿ ಪ್ರಕರಣವೇ ಎನ್ನುವ ಸಂಶಯ ಎದುರಾಗಿದೆ.

ಈ ರಾಜ್ಯದಲ್ಲಿ ಪಿಎಸ್ಐ ಹಗರಣವಾಯಿತು, ಏನಾದರೂ ಅಂಶ ಹೊರಬಿತ್ತಾ? ಗಾಂಜಾ ಅಫೀಮು ಕೇಸಿನಲ್ಲಿ ಯಾವುದಾದರೂ ಸಿನಿಮಾ ನಟಿಯರು, ರಾಜಕಾರಣಿಗಳ ಮಕ್ಕಳು ಇದ್ದರು ಎನ್ನುವ ಹೆಸರು ಹೊರಗೆ ಬಂತಾ ? ಅದನ್ನು ಮುಚ್ಚಿ ಹಾಕಲಾಯಿತು. ಪೋಕ್ಸೋ ಪ್ರಕರಣದಲ್ಲಿ ಏನಾದರೂ ತನಿಖೆ ಆಗುತ್ತಿದೆಯಾ" ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.

ಹೊಂದಾಣಿಕೆ ರಾಜಕಾರಣಿಗಳು ಇರುವುದರಿಂದ ಸತ್ಯ ಹೊರಗೆ ಬರುವುದಿಲ್ಲ, ಅದಕ್ಕಾಗಿಯೇ ನಾವು ಸಿಬಿಐಗೆ ವಹಿಸಿ ಎಂದು ಒತ್ತಾಯಿಸುತ್ತಿರುವುದು. ಇದೆಲ್ಲಾ ಚುನಾವಣೆಗಾಗಿ ಹೊರ ಬಂದ ವಿಷಯಗಳು, ಕೆಲವೊಂದು ಮಂದಿಗಳು ಇದ್ದಾರೆ ಎಂದು ನಾನು ಮೊದಲೇ ಹೇಳಿದ್ದೆ ಎಂದು ಯತ್ನಾಳ್ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿವೆ, ಒಂದು ಫ್ಯಾಕ್ಟರಿಯ ಹೆಸರು ಕುಮಾರಸ್ವಾಮಿಯವರು ಹೇಳಿದ್ದಾರೆ. ಇನ್ನೊಂದು ಫ್ಯಾಕ್ಟರಿಯ ಹೆಸರು ಮೇ 8ನೇ ತಾರೀಕು ನಾನು ಬಹಿರಂಗ ಪಡಿಸುತ್ತೇನೆ. ಇಬ್ಬರು ಬೇರೆ ಬೇರೆ ಪಾರ್ಟಿಯಲ್ಲಿದ್ದರೂ ಇದು ಅವರ ದಂಧೆ " ಎಂದು ಇಬ್ಬರು ರಾಜ್ಯದ ರಾಜಕಾರಣಿಗಳನ್ನು ಗುರಿಯಾಗಿಸಿ ಆಕ್ರೋಶ ಹೊರಹಾಕಿದ್ದಾರೆ.

ಇಬ್ಬರು ನಾಯಕರ ಸಿಡಿ ಬ್ಯೂಸಿನೆಸ್ ಒಂದೇ ಇದೆ. ಡಿ ಕೆ ಶಿವಕುಮಾರ್ ಅವರ ಹೆಸರನ್ನು ಈಗಾಗಲೇ ಕುಮಾರಸ್ವಾಮಿ ಹೇಳಿಯಾಗಿದೆ. ಇನ್ನೊಂದು ಹೆಸರು ಮೇ 8ರ ನಂತರ ನಾನೇ ಹೇಳುತ್ತೇನೆ. ಈ ಎರಡು ಕುಟುಂಬ ಕರ್ನಾಟದಲ್ಲಿ ಹಲ್ಕಾ ರಾಜಕಾರಣ ಮಾಡುತ್ತಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕುಟುಕಿದ್ದಾರೆ.

Two CD factories are in Karnataka, one belongs to DK shivakumar another will be announced on May 8th says Yatnal.